ಮೂರು ದಿನ ಮುನ್ನವೇ ಪ್ರೇಮಿಗಳ ಸಂಭ್ರಮ ಶುರು: ಯಶ್‌ಗಾಗಿ ಕಾಯುತ್ತಿರೋ ಸಿಂಡ್ರೆಲ್ಲ ರಾಧಿಕಾ ಪಂಡಿತ್
ಇನ್ನೇನು ಪ್ರೇಮಿಗಳ ಸಂಭ್ರಮಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ರೇಮಿಗಳ ದಿನವನ್ನು ತಮ್ಮ ಪ್ರೇಮಿಯೊಂದಿಗೆ ಹೇಗೆಲ್ಲಾ ಸಂಭ್ರಮಿಸಬೇಕು ಅಂತ ಈಗಾಗಲೇ ಸ್ಕೆಚ್ ಹಾಕುತ್ತಿದ್ದಾರೆ. ಇತ್ತ ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ ಕೂಡ ಹೊಸ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ಪ್ರೇಮಿಗಳ ದಿನವನ್ನು ಸಂಭ್ರಮಿಸಿದಂತೆ ಇದೆ.
ವ್ಯಾಲೆಂಟಥನ್ಸ್ ಡೇ ಮೂಡ್‌ನಲ್ಲಿ ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಹೊಸ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಪ್ರೇಮಿಗಳ ವಾರದಲ್ಲಿ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ರಾಧಿಕಾ ಪಂಡಿತ್ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.

ಕಡು ಕೆಂಪು ಬಣ್ಣದ ಗೌನ್ ತೊಟ್ಟು, ಮಿಣ ಮಿಣ ಅಂತ ಮಿನುಗುವ ಲೈಟ್‌ಗಳ ಮಧ್ಯೆ ಥೇಟ್ ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾರಂತೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಇದೇ ಬ್ಯಾಕ್‌ಗ್ರೌಂಡ್‌ನಲ್ಲಿ ಮೂರು ಫೋಟೊಗಳನ್ನು ಹಂಚಿಕೊಂಡಿದ್ದು, ರಾಧಿಕಾ ಪಂಡಿತ್ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ರಾಧಿಕಾ ಪಂಡಿತ್ ಅಭಿಮಾನಿಗಳ ಜೊತೆ ಯಶ್ ಫ್ಯಾನ್ಸ್ ಕೂಡ ಕಮೆಂಟ್ ಮೇಲೆ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಸಿಂಡ್ರೆಲ್ಲ ಹಾಗೇನೇ ಮಿಂಚುತ್ತಿರುವ ರಾಧಿಕಾ ಪಂಡಿತ್ ತಮ್ಮ ಫೋಟೋಗಳಿಗೆ ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ. "ನನ್ನ ಪ್ರೀತಿಪಾತ್ರರು ಕಾಣಿಸಿಕೊಂಡಾಗ ಸುಂದರ ಕ್ಷಣಗಳು ಆರಂಭ ಆಗುತ್ತವೆ " ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ. ರಾಧಿಕಾ ಪಂಡಿತ್ ಫೋಟೊಗಳನ್ನು ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್ ರಾಕಿಂಗ್ ಸ್ಟಾರ್ ಯಶ್‌ರನ್ನು ಹುಡುಕಾಡುತ್ತಿದ್ದಾರೆ.
ರಾಧಿಕಾ ಪಂಡಿತ್ ಶೇರ್ ಮಾಡಿಕೊಂಡಿರುವ ಫೋಟೊಗಳಿಗೆ ಅಭಿಮಾನಿಗಳು ಕ್ಯೂಟ್ ಆಗಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಅತ್ತಿಗೆ ಅಣ್ಣನಾ ಫೋಟೋ ಕೂಡ ಹಾಕ್ಬೇಕು ತಾನೇ.. ಬರಿ ನಿಮ್ಮ ಫೋಟೋ ಅಷ್ಟೇನಾ ಪ್ರತಿ ಸರಿ.." ಎಂದು ಯಶ್ ಅಭಿಮಾನಿ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ. ರಾಧು ನಿಮಗೆ ನನ್ನ ಕಡೆಯಿಂದ ಲಾಟ್ಸ್ ಆಫ್ ಲವ್" ಎಂದು ರಾಧಿಕಾ ಅವರ ಮಹಿಳಾ ಅಭಿಮಾನಿ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರ ಮಹಿಳಾ ಅಭಿಮಾನಿ " ಈ ಸೌಂದರ್ಯವನ್ನು ಹ್ಯಾಂಡಲ್ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿ ಸ್ಯಾಂಡಲ್‌ವುಡ್‌ಗೆ ಮಾದರಿ. ಯಶ್‌ಗೆ ಸಿನಿಮಾದಿಂದ ಬಿಡುವು ಸಿಕ್ಕಾಗಲೆಲ್ಲಾ ಪತ್ನಿಯೊಂದಿಗೆ ಸಮಯ ಕಳೆಯುತ್ತಾರೆ. ಇಬ್ಬರೂ ವಿದೇಶಕ್ಕೆ ಟ್ರಾವೆಲ್ ಮಾಡುತ್ತಾರೆ. ಅಲ್ಲಿಂದ ತಮ್ಮ ಅಭಿಮಾನಿಗಳಿಗೆ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.
ಯಶ್ ಸದ್ಯಕ್ಕೀಗ 'ಟಾಕ್ಸಿಕ್' ಸಿನಿಮಾದ ಶುಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಪ್ರೇಮಿಗಳ ದಿನದಂತೆ ರಾಧಿಕಾ ಪಂಡಿತ್ ಜೊತೆ ಇರುತ್ತಾರಾ? ಇಲ್ಲ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗುತ್ತಾರಾ? ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಇದೆ. ಇದರೊಂದಿಗೆ ಪ್ರೇಮಿಗಳ ದಿನಕ್ಕೆ ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್‌ಗೆ ಏನು ಉಡುಗೊರೆ ಕೊಡಬಹುದು ಅಂತಲೂ ಕಾಯುತ್ತಿದ್ದಾರೆ. ಸದ್ಯಕ್ಕೀಗ ರಾಧಿಕಾ ಪಂಡಿತ್ ಶೇರ್ ಮಾಡಿಕೊಂಡಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Click it and Unblock the Notifications











