ರಾಧಿಕಾ ಪಂಡಿತ್ 'ಫೇವರಿಟ್ ಬಾಯ್ಸ್' ಫೋಟೋ ವೈರಲ್
ರಾಕಿಂಗ್ ಸ್ಟಾರ್ ಯಶ್ ದಂಪತಿ ಇತ್ತೀಚಿಗೆ ಮುದ್ದಾದ ಮಗನ ಫೋಟೋವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಮಗನಿಗೆ 6 ತಿಂಗಳು ತುಂಬಿದ ಖುಷಿಯನ್ನು ಸಂಭ್ರಮಿಸಿದ್ದರು. ಮಗಳು ಐರಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗುತ್ತೆ. ಹಾಗೆ ಜೂ.ಯಶ್ ಫೋಟೋ ಸಹ ಎಲ್ಲಾ ಕಡೆ ಸದ್ದು ಮಾಡುತ್ತಿದೆ.
Recommended Video
ರಾಧಿಕಾ ಪಂಡಿತ್ ಇತ್ತೀಚಿಗೆ ಅಪ್ಪ-ಮಗ ಒಟ್ಟಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದರೆ. ಯಶ್ ಮುದ್ದು ಮಗನನ್ನು ಎತ್ತಿಕೊಂಡಿದ್ದಾರೆ. ಮುಗ ಅಪ್ಪನ ತೋಳಲ್ಲಿ ನಗುಬೀರುತ್ತ ಫೋಟೋಗೆ ಪೋಸ್ ನೀಡಿದೆ. ಈ ಮುದ್ದಾದ ಫೋಟೋವನ್ನು ರಾಧಿಕ ಪಂಡಿತ್ ಹಂಚಿಕೊಂಡಿದ್ದಾರೆ.
'ನನ್ನ ಫೇವರಿಟ್ ಬಾಯ್ಸ್' ಎಂದು ಬರೆದುಕೊಂಡಿದ್ದಾರೆ. ರಾಧಿಕಾ ಪಂಡಿತ್ ಆಗಾಗ ಮಕ್ಕಳ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಮಗನಿಗೆ ಈಗ 6 ತಿಂಗಳು ತುಂಬಿದೆ. ಮಗಳಿಗೆ ಐರಾ ಅಂತ ನಾಮಕರಣ ಮಾಡಿರುವ ಯಶ್ ದಂಪತಿ ಮಗನಿಗೆ ಏನು ಹೆಸರಿಡಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ.

ಇನ್ನೂ ಯಶ್ ಅಭಿನಯದ ಕೆಜಿಎಫ್-2 ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಕೊನೆಯ 25 ದಿನಗಳ ಚಿತ್ರೀಕರಣ ಬಾಕಿ ಉಳಿಸಿಕೊಂಡಿರುವ ಚಿತ್ರತಂಡ ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣ ಪ್ರಾರಂಭಿಸಲಿದೆ. ಚಿತ್ರದ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ನಡೆಯುತ್ತಿದೆ. ಚಿತ್ರ ಅಕ್ಟೋಬರ್ ನಲ್ಲಿ ತೆರೆಗೆ ಬರುತ್ತಿದೆ.


Click it and Unblock the Notifications











