Just In
Don't Miss!
- Sports
ಐಪಿಎಲ್ 2021: ಸಿಎಸ್ಕೆ ಉಳಿಸಿಕೊಂಡಿರುವ, ಕೈ ಬಿಟ್ಟಿರುವ ಆಟಗಾರರ ಪಟ್ಟಿ
- Automobiles
ಒಂದು ಗಂಟೆಯಲ್ಲಿ ಈ ಬುಲೆಟ್ ಥಾಲಿಯನ್ನು ತಿಂದು ಮುಗಿಸುವವರಿಗೆ ಸಿಗಲಿದೆ ಬುಲೆಟ್ ಬೈಕ್
- News
ಕೃಷಿ ಕಾಯ್ದೆಗಳ ಕಥೆ: ರೈತರಿಗೆ ಸಮಾಧಾನ ನೀಡದ "ಸಂಧಾನ" ಸಭೆಗಳ ಸಾಲು!
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 20ರ ಚಿನ್ನ, ಬೆಳ್ಳಿ ದರ
- Lifestyle
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯಶ್-ರಾಧಿಕಾ ಪುತ್ರನ ಹೊಸ ಅವತಾರ: ಯಥರ್ವ ಲುಕ್ ಹೇಗಿದೆ ನೋಡಿ!
ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಮಗನ ಕೇಶ ಮುಂಡನ ಮಾಡಿಸಿದ್ದಾರೆ. ಮಗನ ಮುಡಿ ಕೊಟ್ಟ ಬಳಿಕ ರಾಧಿಕಾ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯಥರ್ವ ಯಶ್ ಹೊಸ ಗೆಟಪ್ ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ ಯಥರ್ವ ಜನಿಸಿ 14 ತಿಂಗಳಾಗಿದೆ. ಇತ್ತೀಚಿಗಷ್ಟೆ ಅಂದರೆ ಅಕ್ಟೋಬರ್ 30ರಂದು ಮಗನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದರು. ಕೊರೊನಾ ಹಾವಳಿಯ ಪರಿಣಾಮ ಕುಟುಂಬದವರು ಮತ್ತು ತೀರ ಆಪ್ತರ ನಡುವೆ ಗೋವಾದ ಕಡಲ ಕಿನಾರೆಯಲ್ಲಿ ಮಗನ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದರು.
ಟೀಸರ್ ನಿರೀಕ್ಷೆಯಲ್ಲಿದ್ದವರಿಗೆ ಊಹೆನೇ ಮಾಡದಂತ ಸರ್ಪ್ರೈಸ್ ನೀಡಿದ ಕೆಜಿಎಫ್

ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ತಂದೆ-ಮಗ
ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿ ಎರಡು ತಿಂಗಳಾಗಿದೆ. ಇದೀಗ ಮಗನ ಕೇಶ ಮುಂಡನ ಮಾಡಿಸಿದ್ದಾರೆ. ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವ ಯಥರ್ವ ತಂದೆಯ ತೋಳಿನಲ್ಲಿ ನಗೆಬೀರುತ್ತಿರುವ ಫೋಟೋವನ್ನು ರಾಧಿಕಾ ಹಂಚಿಕೊಂಡಿದ್ದಾರೆ. ಯಶ್ ಮತ್ತು ಯಥರ್ವ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಪಂಚೆ ಮತ್ತು ಹಸಿರು ಬಣ್ಣದ ಶರ್ಟ್ ನ್ ನಲ್ಲಿ ಪುಟ್ಟ ಪೋರ ಯಥರ್ವ ಕಂಗೊಳಿಸುತ್ತಿದ್ದಾರೆ.
ಕೆಜಿಎಫ್ ಟೀಸರ್‌ಗೂ ಮೊದಲೇ ಕುತೂಹಲ ಹೆಚ್ಚಿಸಿದ ಪ್ರಶಾಂತ್ ನೀಲ್

ತನ್ನದೇ ಗೆಟಪ್ ನೋಡಿ ತಲೆಮೇಲೆ ಕೈ ಇಟ್ಟ ಯಥರ್ವ
ಮತ್ತೊಂದು ಫೋಟೋದಲ್ಲಿ ಯಥರ್ವ ಕನ್ನಡಿ ನೋಡಿಕೊಳ್ಳುತ್ತಾ ತನ್ನದೆ ಗೆಟಪ್ ನೋಡಿ ಅಶ್ಚರ್ಯಗೊಂಡು ತೆಲೆಮೇಲೆ ಕೈಹೊತ್ತು ಕುಳಿತಿದ್ದಾನೆ. ಈ ಎಡರು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಹರಿದುಬರುತ್ತಿದೆ.

ನಂಜುಂಡೇಶ್ವರ ಸನ್ನಿಧಿಯಲ್ಲಿ ಮಗಳ ಮುಡಿ ಕೊಡಿಸಿದ್ದ ಯಶ್ ದಂಪತಿ
ಅಂದಹಾಗೆ ಯಶ್ ಮತ್ತು ರಾಧಿಕಾ ದಂಪತಿ ಮೊದಲ ಮಗಳು ಐರಾ ಮುಡಿಯನ್ನು ದಕ್ಷಿಣ ಕಾಶಿ ಎಂದೇ ಖ್ಯಾತಿಗಳಿಸಿರುವ ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಯಲ್ಲಿ ಕೊಡಿಸುವ ಮೂಲಕ ಹರಕೆ ಪೂರೈಸಿದ್ದರು. ಕಳೆದ ವರ್ಷ ಮಾರ್ಚ್ ನಲ್ಲಿ ಐರಾ ಕೇಶಮುಂಡನ ಮಾಡಿಸಿದ್ದರು. ಇದೀಗ ಎರಡನೇ ಪುತ್ರ ಯಥರ್ವ ಯಶ್ ಗೆ ಕೇಶ ಮುಂಡನಮಾಡಿಸಿದ್ದು, ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಅಶ್ವತ್ ನಾರಾಯಣ ಜೊತೆ ತಮಿಳಿನಾಡಿನ ದೇವಸ್ಥಾನಕ್ಕೆ ಭೇಟಿ ನೀಡಿದ ಯಶ್

ಜನವರಿ 8ಕ್ಕೆ ಯಶ್ ಹಟ್ಟುಹಬ್ಬ
ಅಂದಹಾಗೆ ಯಶ್ ಸದ್ಯ ಕೆಜಿಎಫ್-2 ಸಿನಿಮಾದ ಕೊನೆಯ ಹಂತದ ಕೆಲಸದಲ್ಲಿ ನಿರತರಾಗಿದ್ದಾರೆ. ಈ ನಡುವೆ ಯಶ್ ಹುಟ್ಟುಹಬ್ಬ ಸಹ ಸಮೀಪಿಸುತ್ತಿದೆ. ಜನವರಿ 8ರಂದು ಯಶ್ ಹುಟ್ಟುಹಬ್ಬ. ಹುಟ್ಟುಹಬ್ಬದ ವಿಶೇಷವಾಗಿ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ. ಇನ್ನು ಏನೆಲ್ಲ ವಿಶೇಷತೆ ಕಾದಿದೆ ಎಂದು ಕಾದುನೋಡಬೇಕು.