For Quick Alerts
  ALLOW NOTIFICATIONS  
  For Daily Alerts

  ಯಶ್-ರಾಧಿಕಾ ಪುತ್ರನ ಹೊಸ ಅವತಾರ: ಯಥರ್ವ ಲುಕ್ ಹೇಗಿದೆ ನೋಡಿ!

  |

  ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಮಗನ ಕೇಶ ಮುಂಡನ ಮಾಡಿಸಿದ್ದಾರೆ. ಮಗನ ಮುಡಿ ಕೊಟ್ಟ ಬಳಿಕ ರಾಧಿಕಾ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯಥರ್ವ ಯಶ್ ಹೊಸ ಗೆಟಪ್ ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ.

  ಖಾಲಿ ತಲೆ ನೋಡಿ ಕ್ಯೂಟ್ ರಿಯಾಕ್ಷನ್ ಕೊಟ್ಟ ಯಥರ್ವ್ | Filmibeat Kannada

  ಅಂದಹಾಗೆ ಯಥರ್ವ ಜನಿಸಿ 14 ತಿಂಗಳಾಗಿದೆ. ಇತ್ತೀಚಿಗಷ್ಟೆ ಅಂದರೆ ಅಕ್ಟೋಬರ್ 30ರಂದು ಮಗನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದರು. ಕೊರೊನಾ ಹಾವಳಿಯ ಪರಿಣಾಮ ಕುಟುಂಬದವರು ಮತ್ತು ತೀರ ಆಪ್ತರ ನಡುವೆ ಗೋವಾದ ಕಡಲ ಕಿನಾರೆಯಲ್ಲಿ ಮಗನ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದರು.

  ಟೀಸರ್ ನಿರೀಕ್ಷೆಯಲ್ಲಿದ್ದವರಿಗೆ ಊಹೆನೇ ಮಾಡದಂತ ಸರ್ಪ್ರೈಸ್ ನೀಡಿದ ಕೆಜಿಎಫ್ಟೀಸರ್ ನಿರೀಕ್ಷೆಯಲ್ಲಿದ್ದವರಿಗೆ ಊಹೆನೇ ಮಾಡದಂತ ಸರ್ಪ್ರೈಸ್ ನೀಡಿದ ಕೆಜಿಎಫ್

  ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ತಂದೆ-ಮಗ

  ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ತಂದೆ-ಮಗ

  ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿ ಎರಡು ತಿಂಗಳಾಗಿದೆ. ಇದೀಗ ಮಗನ ಕೇಶ ಮುಂಡನ ಮಾಡಿಸಿದ್ದಾರೆ. ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವ ಯಥರ್ವ ತಂದೆಯ ತೋಳಿನಲ್ಲಿ ನಗೆಬೀರುತ್ತಿರುವ ಫೋಟೋವನ್ನು ರಾಧಿಕಾ ಹಂಚಿಕೊಂಡಿದ್ದಾರೆ. ಯಶ್ ಮತ್ತು ಯಥರ್ವ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಪಂಚೆ ಮತ್ತು ಹಸಿರು ಬಣ್ಣದ ಶರ್ಟ್ ನ್ ನಲ್ಲಿ ಪುಟ್ಟ ಪೋರ ಯಥರ್ವ ಕಂಗೊಳಿಸುತ್ತಿದ್ದಾರೆ.

  ಕೆಜಿಎಫ್ ಟೀಸರ್‌ಗೂ ಮೊದಲೇ ಕುತೂಹಲ ಹೆಚ್ಚಿಸಿದ ಪ್ರಶಾಂತ್ ನೀಲ್ಕೆಜಿಎಫ್ ಟೀಸರ್‌ಗೂ ಮೊದಲೇ ಕುತೂಹಲ ಹೆಚ್ಚಿಸಿದ ಪ್ರಶಾಂತ್ ನೀಲ್

  ತನ್ನದೇ ಗೆಟಪ್ ನೋಡಿ ತಲೆಮೇಲೆ ಕೈ ಇಟ್ಟ ಯಥರ್ವ

  ತನ್ನದೇ ಗೆಟಪ್ ನೋಡಿ ತಲೆಮೇಲೆ ಕೈ ಇಟ್ಟ ಯಥರ್ವ

  ಮತ್ತೊಂದು ಫೋಟೋದಲ್ಲಿ ಯಥರ್ವ ಕನ್ನಡಿ ನೋಡಿಕೊಳ್ಳುತ್ತಾ ತನ್ನದೆ ಗೆಟಪ್ ನೋಡಿ ಅಶ್ಚರ್ಯಗೊಂಡು ತೆಲೆಮೇಲೆ ಕೈಹೊತ್ತು ಕುಳಿತಿದ್ದಾನೆ. ಈ ಎಡರು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಹರಿದುಬರುತ್ತಿದೆ.

  ನಂಜುಂಡೇಶ್ವರ ಸನ್ನಿಧಿಯಲ್ಲಿ ಮಗಳ ಮುಡಿ ಕೊಡಿಸಿದ್ದ ಯಶ್ ದಂಪತಿ

  ನಂಜುಂಡೇಶ್ವರ ಸನ್ನಿಧಿಯಲ್ಲಿ ಮಗಳ ಮುಡಿ ಕೊಡಿಸಿದ್ದ ಯಶ್ ದಂಪತಿ

  ಅಂದಹಾಗೆ ಯಶ್ ಮತ್ತು ರಾಧಿಕಾ ದಂಪತಿ ಮೊದಲ ಮಗಳು ಐರಾ ಮುಡಿಯನ್ನು ದಕ್ಷಿಣ ಕಾಶಿ ಎಂದೇ ಖ್ಯಾತಿಗಳಿಸಿರುವ ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಯಲ್ಲಿ ಕೊಡಿಸುವ ಮೂಲಕ ಹರಕೆ ಪೂರೈಸಿದ್ದರು. ಕಳೆದ ವರ್ಷ ಮಾರ್ಚ್ ನಲ್ಲಿ ಐರಾ ಕೇಶಮುಂಡನ ಮಾಡಿಸಿದ್ದರು. ಇದೀಗ ಎರಡನೇ ಪುತ್ರ ಯಥರ್ವ ಯಶ್ ಗೆ ಕೇಶ ಮುಂಡನಮಾಡಿಸಿದ್ದು, ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

  ಅಶ್ವತ್ ನಾರಾಯಣ ಜೊತೆ ತಮಿಳಿನಾಡಿನ ದೇವಸ್ಥಾನಕ್ಕೆ ಭೇಟಿ ನೀಡಿದ ಯಶ್ಅಶ್ವತ್ ನಾರಾಯಣ ಜೊತೆ ತಮಿಳಿನಾಡಿನ ದೇವಸ್ಥಾನಕ್ಕೆ ಭೇಟಿ ನೀಡಿದ ಯಶ್

  ಜನವರಿ 8ಕ್ಕೆ ಯಶ್ ಹಟ್ಟುಹಬ್ಬ

  ಜನವರಿ 8ಕ್ಕೆ ಯಶ್ ಹಟ್ಟುಹಬ್ಬ

  ಅಂದಹಾಗೆ ಯಶ್ ಸದ್ಯ ಕೆಜಿಎಫ್-2 ಸಿನಿಮಾದ ಕೊನೆಯ ಹಂತದ ಕೆಲಸದಲ್ಲಿ ನಿರತರಾಗಿದ್ದಾರೆ. ಈ ನಡುವೆ ಯಶ್ ಹುಟ್ಟುಹಬ್ಬ ಸಹ ಸಮೀಪಿಸುತ್ತಿದೆ. ಜನವರಿ 8ರಂದು ಯಶ್ ಹುಟ್ಟುಹಬ್ಬ. ಹುಟ್ಟುಹಬ್ಬದ ವಿಶೇಷವಾಗಿ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ. ಇನ್ನು ಏನೆಲ್ಲ ವಿಶೇಷತೆ ಕಾದಿದೆ ಎಂದು ಕಾದುನೋಡಬೇಕು.

  English summary
  Actress Radhika Pandit Shares pictures of Mundan Ceremony of her son Yatharv Yash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X