For Quick Alerts
  ALLOW NOTIFICATIONS  
  For Daily Alerts

  ಅಪ್ಪ-ಅಮ್ಮನನ್ನು ಗುರುತಿಸಿದ ಯಥರ್ವ, ಮುದ್ದಾದ ವಿಡಿಯೋ ಹಂಚಿಕೊಂಡ ರಾಧಿಕಾ

  |

  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯಷ್ಟೇ ಜನಪ್ರಿಯತೆ ಅವರ ಮಕ್ಕಳಿಗೂ ಸಿಕ್ಕಿದೆ. ಸದ್ಯದ ಮಟ್ಟಿಗೆ ಈ ಸ್ಟಾರ್ಸ್ ಮಕ್ಕಳು ಸೋಶಿಯಲ್ ಮೀಡಿಯಾದ ಪ್ರಮುಖ ಆಕರ್ಷಣೆಯಾಗಿದ್ದಾರೆ.

  ನನ್ನ ಕೆಲಸ ಮುಗಿತು ಇನ್ನೇನಿದ್ರೂ ಐರಾ ಕೆಲಸ ಅಂದ್ರು ರಾಧಿಕಾ ಪಂಡಿತ್ | Filmibeat Kannada

  ರಾಕಿಂಗ್ ಮಕ್ಕಳ ಕುರಿತು ಯಾವುದೇ ಫೋಟೋ ಅಥವಾ ವಿಡಿಯೋ ಹಂಚಿಕೊಂಡರೆ ಕ್ಷಣಮಾತ್ರದಲ್ಲಿ ವೈರಲ್ ಆಗುತ್ತಿದೆ. ಅಷ್ಟರ ಮಟ್ಟಿಗೆ ನೆಟ್ಟಿಗರು, ಅಭಿಮಾನಿಗಳು ಇಷ್ಟ ಪಡುತ್ತಿದ್ದಾರೆ. ಐರಾ ಮತ್ತು ಯಥರ್ವ ಅಪ್ಪ-ಅಮ್ಮನನ್ನು ಗುರುತಿಸುತ್ತಿರುವ ವಿಡಿಯೋ ಶೇರ್ ಮಾಡಿರುವ ರಾಧಿಕಾ ಪಂಡಿತ್ ತಮ್ಮ ಮಕ್ಕಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ, ಏನಿದೆ ಆ ವಿಡಿಯೋದಲ್ಲಿ? ಮುಂದೆ ಓದಿ...

  ಅಪ್ಪ-ಅಮ್ಮನನ್ನು ಗುರುತಿಸಿದ ಯಥರ್ವ

  ಅಪ್ಪ-ಅಮ್ಮನನ್ನು ಗುರುತಿಸಿದ ಯಥರ್ವ

  ನಟ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಎಂಗೇಜ್‌ಮೆಂಟ್ ಕ್ಷಣದ ಫೋಟೋ ಫ್ರೆಮ್ ನೋಡಿದ ಯಥರ್ವ, ಆ ಫೋಟೋ ಬಳಿ ಹೋಗಿ ಅಪ್ಪ-ಅಮ್ಮನ್ನು ಗುರುತಿಸುತ್ತಿದ್ದಾನೆ. ಸಹೋದರನಿಗೆ ಐರಾ ಸಾಥ್ ನೀಡಿದ್ದಾಳೆ.

  ಫಾರ್ಮ್ ಹೌಸ್ ನಲ್ಲಿ ರಾಕಿಂಗ್ ದಂಪತಿಯ ಮುದ್ದು ಮಗಳ ಜಾಲಿಫಾರ್ಮ್ ಹೌಸ್ ನಲ್ಲಿ ರಾಕಿಂಗ್ ದಂಪತಿಯ ಮುದ್ದು ಮಗಳ ಜಾಲಿ

  ಅಪ್ಪ-ಅಮ್ಮ ಹೇಳಿಕೊಟ್ಟ ಐರಾ

  ತೊದಲು ಮಾತಿನಲ್ಲಿ ಅಪ್ಪ-ಅಮ್ಮ ಎನ್ನುವ ಪ್ರಯತ್ನ ಮಾಡುತ್ತಿರುವ ಯಥರ್ವನಿಗೆ ಸಹೋದರಿ ಐರಾ ಹೇಳಿಕೊಡುತ್ತಿದ್ದಾಳೆ. ಐರಾ-ಯಥರ್ವ ಜೋಡಿಯ ಈ ಮುದ್ದು ವಿಡಿಯೋ ಈಗ ವೈರಲ್ ಆಗಿದೆ.

  ವಿದ್ಯಾರ್ಥಿ ಶಿಕ್ಷಕಿಯಾದಾಗ....

  ವಿದ್ಯಾರ್ಥಿ ಶಿಕ್ಷಕಿಯಾದಾಗ....

  ಮುದ್ದಾದ ವಿಡಿಯೋ ಹಂಚಿಕೊಂಡಿರುವ ರಾಧಿಕಾ ಪಂಡಿತ್ ಅದಕ್ಕೆ ಕ್ಯಾಪ್ಷನ್ ಸಹ ನೀಡಿದ್ದಾರೆ. 'ವಿದ್ಯಾರ್ಥಿ ಶಿಕ್ಷಕಿಯಾದಾಗ....ನನ್ನ ಕೆಲಸ ಮುಗಿತು' ಎಂದು ಬರೆದುಕೊಂಡಿದ್ದಾರೆ. ಅಂದ್ರೆ, ಐರಾಗೆ ಅಪ್ಪ-ಅಮ್ಮನ ಗುರುತಿಸುವಿಕೆನ್ನು ರಾಧಿಕಾ ಹೇಳಿಕೊಡುತ್ತಿದ್ದರು. ಈಗ ಯಥರ್ವನಿಗೆ ಐರಾ ಹೇಳಿಕೊಡುತ್ತಿದ್ದಾಳೆ. ವಿದ್ಯಾರ್ಥಿಯಾಗಿದ್ದ ಐರಾ ಶಿಕ್ಷಕಿಯಾಗಿದ್ದಾಳೆ.

  ಮೋಡಿ ಮಾಡಿದ ರಾಮಾಚಾರಿ: ಯಶ್ ಹೆಸರಿಗೆ ಸೇರಿತು ಅಪರೂಪದ ದಾಖಲೆಮೋಡಿ ಮಾಡಿದ ರಾಮಾಚಾರಿ: ಯಶ್ ಹೆಸರಿಗೆ ಸೇರಿತು ಅಪರೂಪದ ದಾಖಲೆ

  ಫಾರ್ಮ್‌ಹೌಸ್‌ ವಿಡಿಯೋ ಸುದ್ದಿಯಾಗಿತ್ತು

  ಫಾರ್ಮ್‌ಹೌಸ್‌ ವಿಡಿಯೋ ಸುದ್ದಿಯಾಗಿತ್ತು

  ಇತ್ತೀಚಿಗಷ್ಟೆ ಹಾಸನದಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಯಶ್ ದಂಪತಿ ಇಬ್ಬರು ಮಕ್ಕಳ ಜೊತೆ ಸಮಯ ಕಳೆದಿದ್ದರು. ಫಾರ್ಮ್ ಹೌಸ್ ನಲ್ಲಿ ಮಗಳು ಐರಾ ಮಸ್ತಿ ಮಾಡುತ್ತಿರುವ ಫೋಟೋವನ್ನು ರಾಧಿಕಾ ಹಂಚಿಕೊಂಡಿದ್ದರು. ಅಪ್ಪ ಯಶ್ ಜೊತೆ ಹಸುವಿಗೆ ಬಾಳೆಹಣ್ಣು ತಿನಿಸುತ್ತಿರುವ ಫೋಟೋ ಹಂಚಿಕೊಂಡಿರುವ ರಾಧಿಕಾ "ಫಾರ್ಮ್ ಹೌಸ್ ಡೈರೀಸ್" ಎಂದು ಕ್ಯಾಪ್ಷನ್ ನೀಡಿದ್ದರು.

  English summary
  Kannada actress Radhika pandit Shares Video of Ayra Yash Teaches Brother Yatharv Calling Mom and Dad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X