ಅತ್ತು ಸಾಧಿಸಿಬಿಟ್ಟ ಐರಾ; ಅಯ್ಯೋ ಪಾಪ ಅಕ್ಕನ ಎದುರು ಸೋತುಬಿಟ್ಟನಲ್ಲ ಯಥರ್ವ್
ಸ್ಯಾಂಡಲ್‌ವುಡ್ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್. ಮದುವೆ ಬಳಿಕ ಸಿನಿಮಾಗಳಿಂದ ದೂರಾಗಿ ರಾಧಿಕಾ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಕೆಲಸದ ಕಾರಣ ಎಷ್ಟೇ ಬ್ಯುಸಿ ಇದ್ದರೂ ಯಶ್ ಆಗಾಗ್ಗೆ ಬಿಡುವು ಮಾಡಿಕೊಂಡು ಫ್ಯಾಮಿಲಿಗೆ ಟೈಂ ಕೊಡುತ್ತಾರೆ.
ಪತ್ನಿ ರಾಧಿಕಾ ಪಂಡಿತ್ ಜೊತೆ ಆಗಾಗ್ಗೆ ದೇಶ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಕೆಲವೊಮ್ಮೆ ಮಗಳಾದ ಐರಾ ಹಾಗೂ ಮಗ ಯಥರ್ವ್‌ನನ್ನು ಕೂಡ ಕರೆದುಕೊಂಡು ಹೋಗುತ್ತಾರೆ. ಮಕ್ಕಳ ಆಟ, ತುಂಟಾಟವನ್ನೆಲ್ಲಾ ರಾಧಿಕಾ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಾರೆ. ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅದನ್ನು ಹಂಚಿಕೊಳ್ಳುತ್ತಾರೆ. ಮಕ್ಕಳು ಅಂದಮೇಲೆ ಕೀಟಲೆ, ಗಲಾಟೆ ತುಂಟತನ ಸಹಜ.

ಐರಾಗೆ ಈಗ 7 ವರ್ಷ, ಯಥರ್ವ್‌ಗೆ 5 ವರ್ಷ. ಇಬ್ಬರೂ ಸಿಕ್ಕಾಪಟ್ಟೆ ಚೂಟಿ. ಅಷ್ಟೇ ಅಲ್ಲ ಸದಾ ಮನೆಯಲ್ಲಿ ಜಗಳ ಆಡುತ್ತಿರುತ್ತಾರೆ. ಅವರಿಬ್ಬರ ಜಗಳ ಬಿಡಿಸುವುದರಲ್ಲಿ ರಾಧಿಕಾ ಸುಸ್ತಾಗಿ ಬಿಡುತ್ತಾರೆ. ಸದ್ಯ ವ್ಯಾಲಂಟೈನ್ಸ್ ಡೇ ಸ್ಪೆಷಲ್ ಆಗಿ ಅಮ್ಮನ ಜೊತೆ ಇಬ್ಬರೂ ಕೇಕ್ ಸಿದ್ಧ ಪಡಿಸಿದ್ದಾರೆ. ಅದರ ಮೇಕಿಂಗ್ ವೀಡಿಯೋವನ್ನು ರಾಧಿಕಾ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಅಮ್ಮ ಕೇಕ್ ಮಾಡಲು ಐರಾ- ಯಥರ್ವ್ ಇಬ್ಬರೂ ಸಹಾಯ ಮಾಡಿದ್ದಾರೆ. ಇಬ್ಬರೂ ಶೆಫ್ ಏಪ್ರಾನ್ ಧರಿಸಿ ಹಿಟ್ಟು, ಸಕ್ಕರೆ, ಮೊಟ್ಟೆ ಹಾಕಿ ಮಿಕ್ಸ್ ಮಾಡಿದ್ದಾರೆ. ಈ ವೇಳೆ ಯಥರ್ವ್ ನಾನೇ ಮಾಡ್ತೀನಿ ಎಂದು ಕಿತ್ತುಕೊಂಡಿದ್ದಾನೆ. ಅಕ್ಕ ಕೇಳಿದ್ದಕಕೆ ಹೊಡೆದಿದ್ದಾನೆ. ಕೂಡಲೇ ಐರಾ ಅತ್ತಂತೆ ಮಾಡಿದ್ದಾಳೆ. ಅದನ್ನು ನೋಡಿ ಅವಳಿಗೆ ಕೊಟ್ಟುಬಿಡು ಎಂದು ರಾಧಿಕಾ ಕೂಗಿ ಹೇಳಿದ್ದಾರೆ. ಬೇರೆ ದಾರಿ ಇಲ್ಲದೇ ಒಲ್ಲದ ಮನಸ್ಸಿನಿಂದಲೇ ಯಥರ್ವ್ ಕೊಟ್ಟುಬಿಟ್ಟಿದ್ದಾನೆ. ಸದ್ಯ ಈ ಕ್ಯೂಟ್ ವೀಡಿಯೋ ವೈರಲ್ ಆಗುತ್ತಿದೆ.
ಮಹಿಳಾ ಅಭಿಮಾನಿಯೊಬ್ಬರು "ನಮಗೆ ಗೊತ್ತು ಹೇಗೆ ಗೆಲ್ಲೋದು" ಎಂದು ಬರೆದು ಕ್ಯೂಟ್ ವಿಡಿಯೋ ಶೇರ್ ಮಾಡಿದ್ದಾರೆ. ಅದಕ್ಕೆ ಸಾಕಷ್ಟು ಜನ ಲೈಕ್ಸ್ ಕಾಮೆಂಟ್ಸ್ ಕೊಟ್ಟಿದ್ದಾರೆ. ಈಗಿನ ಕಾಲದ ಮಕ್ಕಳಿಗೆ ಎಷ್ಟೇ ಕಲಿಸಿದರೂ ಕಮ್ಮಿನೇ ಎನ್ನುವಂತಾಗಿಬಿಟ್ಟಿದೆ. ಆಟ, ಪಾಠ ಅಷ್ಟೇ ಅಲ್ಲ, ಅಡುಗೆ ಮನೆಯಲ್ಲಿ ಕೆಲಸಗಳನ್ನು ಚಿಕ್ಕಂದಿನಿಂದಲೇ ಹೇಳಿಕೊಡಬೇಕು. ಆ ವಿಚಾರದಲ್ಲಿ ರಾಧಿಕಾ ಪಂಡಿತ್ ಹೆಚ್ಚಿನ ಕೇರ್ ತೆಗೆದುಕೊಳ್ಳುತ್ತಿದ್ದಾರೆ.
ಸದ್ಯ ನಟ ಯಶ್ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿನಲ್ಲೇ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ನಿರ್ಮಾಣ ಮಾಡುತ್ತಿದ್ದಾರೆ. ನಯನತಾರಾ, ಕೈರಾ ಅದ್ವಾನಿ, ಹುಮಾ ಖುರೇಶಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಮುಂದಿನ ವರ್ಷ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ.
ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ತರುವ ಲೆಕ್ಕಾಚಾರ ನಡೀತಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.


Click it and Unblock the Notifications











