ನಟಿ ರಾಧಿಕ ಪಂಡಿತ್ ಕುಟುಂಬಕ್ಕೆ ಬಂದ ಮಹಾಲಕ್ಷ್ಮಿ
Recommended Video

ಮದುವೆಯ ನಂತರ ಸಿನಿಮಾಗಳಲ್ಲಿ ನಟಿಸುವುದನ್ನು ತಾತ್ಕಲಿಕವಾಗಿ ನಿಲ್ಲಿಸಿದ್ದ ರಾಧಿಕಾ ಪಂಡಿತ್ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಈ ವಿಷಯ ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿ ಆಗಿತ್ತು. ಆದರೆ ಈಗ ಸ್ವತಃ ರಾಧಿಕಾ ಪಂಡಿತ್ ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ.
ನಟಿ ರಾಧಿಕ ಪಂಡಿತ್ ಅವರ ಖುಷಿಗೆ ಕಾರಣ ಆಗಿರುವುದು ಈ ಮುದ್ದಾದ ಹೆಣ್ಣು ಕಂದಮ್ಮ. ಅಂದಹಾಗೆ, ರಾಧಿಕಾ ಅವರ ಈ ಫೋಟೋಗಳನ್ನು ನೋಡಿ ಅರೇ ರಾಧಿಕಾ ಪಂಡಿತ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ರಾ.. ಅಂತ ಯೋಚನೆ ಮಾಡಬೇಡಿ. ಯಾಕಂದ್ರೆ, ರಾಧಿಕಾ ಈಗ ಅಮ್ಮ ಆಗಿಲ್ಲ ಬದಲಿಗೆ ಅತ್ತೆ ಆಗಿದ್ದಾರೆ. ಮುಂದೆ ಓದಿ...

ಅತ್ತೆ ಆದ ರಾಧಿಕಾ
ರಾಧಿಕಾ ಪಂಡಿತ್ ಅವರ ಸಹೋದರ ಗೌರಂಗ್ ಪಂಡಿತ್ ಹಾಗೂ ಅತ್ತಿಗೆ ಸಹನಾ ಪಂಡಿತ್ ಇಬ್ಬರಿಗೂ ಈಗ ಹೆಣ್ಣು ಮಗು ಹುಟ್ಟಿದೆ. ಸೋ, ರಾಧಿಕಾ ಅತ್ತೆ ಆಗಿದ್ದಾರೆ.

ಮಗುವಿನ ಜೊತೆಗೆ ಫೋಟೋ
ತಮ್ಮ ಕುಟುಂಬಕ್ಕೆ ಹೆಣ್ಣು ಮಗು ಬಂದ ಸಂತಸದಲ್ಲಿರುವ ರಾಧಿಕಾ ಅದನ್ನು ಫೇಸ್ ಬುಕ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಅಣ್ಣನ ಮಗಳನ್ನು ಮಡಿಲಿನಲ್ಲಿ ಎತ್ತಿಕೊಂಡಿರುವ ಫೋಟೋವನ್ನು ಅವರು ಶೇರ್ ಮಾಡಿದ್ದಾರೆ.

ಖುಷಿ ಹಂಚಿಕೊಂಡ ರಾಧಿಕಾ
ಫೇಸ್ ಬುಕ್ ನಲ್ಲಿ ರಾಧಿಕಾ ''ನಾನು ಈಗ ಅತ್ತೆ ಆಗಿದ್ದೇನೆ... ಮುದ್ದು ಕಂದನನ್ನು ನೋಡಿದ ಕ್ಷಣ ನಾನು ಬಹಳ ಎಮೋಷನಲ್ ಆದೆ. ನನ್ನ ನೋಟವನ್ನು ಬೇರೆಡೆ ಬದಲಿಸಲು ಆಗುತ್ತಿಲ್ಲ. ಈಗ ಅಣ್ಣ ಅತ್ತಿಗೆ ಪೋಷಕರಾಗಿದ್ದಾರೆ.'' ಎಂದು ಬರೆದುಕೊಂಡಿದ್ದಾರೆ.

ಚಿಕಾಗೋದಲ್ಲಿ ರಾಧಿಕಾ
ರಾಧಿಕಾ ಪಂಡಿತ್ ಅಣ್ಣ ಅತ್ತಿಗೆ ಚಿಕಾಗೋದಲ್ಲಿ ವಾಸವಾಗಿದ್ದಾರೆ. ಪ್ರೀತಿಯ ಸೊಸೆ ನೋಡುವುದಕ್ಕೆ ರಾಧಿಕಾ ಕೂಡ ಕಳೆದ ವಾರ ಅಲ್ಲಿಗೆ ಹೋಗಿದ್ದರು.

ಯಶ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ.
ಮಗುವಿನ ಫೋಟೋದ ಜೊತೆಗೆ ತಮ್ಮ ತಾಯಿಯ ಜೊತೆಗೆ ಇರುವ ಮತ್ತೊಂದು ಫೋಟೋವನ್ನು ಹಾಕಿರುವ ರಾಧಿಕಾ ''ಇನ್ನೂ 22 ದಿನ ಕಾಲ ಯಶ್ ರನ್ನು ನೋಡದೆ ಇರಬೇಕು. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.'' ಎಂದಿದ್ದಾರೆ.


Click it and Unblock the Notifications











