ತಾಯಿಯಾದ ನಂತರ ತೆರೆಮೇಲೆ ಬರ್ತಿದ್ದಾರೆ ರಾಧಿಕಾ ಪಂಡಿತ್
ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ, ಮೊಗ್ಗಿನ ಮನಸ್ಸಿನ ನಟಿ ರಾಧಿಕಾ ಪಂಡಿತ್ ತೆರೆಮೇಲೆ ಬರದೆ ವರ್ಷಗಳೆ ಆಗಿವೆ. ಅಮೋಘ ಅಭಿನಯದ ಮೂಲಕವೇ ಅಭಿಮಾನಿಗಳ ಮನೆ ಗೆದಿದ್ದ ರಾಧಿಕಾ ಮದುವೆ ನಂತರ ಅಭಿಮಾನಿಗಳ ಮುಂದೆ ಬಂದಿಲ್ಲ.
ತೆರೆಮೇಲೆ ರಾಧಿಕಾರನ್ನು ನೋಡಲು ಸುಮಾರು ಮೂರು ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೀಗ ಸಿಹಿಸುದ್ದಿ ಸಿಕ್ಕಿದೆ. ಅರ್ರೆ, ರಾಧಿಕಾ ಸದ್ಯ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಯಾವಾಗ ಮಾಡಿದ್ರು, ತೆರೆಮೇಲೆ ಯಾವಾಗ ಬರ್ತಿದ್ದಾರೆ ಅಂತ ಅಚ್ಚರಿ ಪಡಬೇಡಿ. ಯಾಕಂದ್ರೆ ರಾಧಿಕಾ ಅಭಿನಯದ ಕೊನೆಯ ಕೊನೆಯ ಸಿನಿಮಾ ಈಗ ರಿಲೀಸ್ ಆಗುತ್ತಿದೆ.
'ಸಂತು ಸ್ಟ್ರೈಟ್ ಫಾರ್ವಡ್' ಸಿನಿಮಾ ನಂತರ ರಾಧಿಕಾ ಬಣ್ಣ ಹಚ್ಚಿದ ಸಿನಿಮಾ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಮದುವೆಯ ನಂತರ ಅಭಿನಯದ ಸಿನಿಮಾ ಈಗ ಮಗುವಾದ ನಂತರ ತೆರೆಗೆ ಬರುತ್ತಿದೆ. ಸದ್ಯ ಸಿನಿಮಾ ಎಲ್ಲಾ ಕೆಲಸಗಳನ್ನು ಮುಗಿದಿದ್ದು ರಿಲೀಸ್ ಗೆ ತಯಾರಿ ಮಾಡಿಕೊಳ್ಳುತ್ತಿದೆ. ಮುಂದೆ ಓದಿ..

ಆದಿ ಲಕ್ಷ್ಮಿ ಪುರಾಣ ಹೇಳಲು ಬರ್ತಿದ್ದಾರೆ ರಾಧಿಕಾ
ರಾಧಿಕಾ ಪಂಡಿತ್ ಅಭಿನಯದ ಕೊನೆಯ ಸಿನಿಮಾ ಆದಿ ಲಕ್ಷ್ಮಿ ಪುರಾಣ. ಆನಂತರ ರಾಧಿಕಾ ಯಾವ ಸಿನಿಮಾದಲ್ಲೂ ಬಣ್ಣ ಹಚ್ಚಿಲ್ಲ. ಮದುವೆ ನಂತರ ಒಪ್ಪಿಕೊಂಡ ಮೊದಲ ಸಿನಿಮಾ ಆದಿ ಲಕ್ಷ್ಮಿ ಪುರಾಣ. ವಿಶೇಷ ಅಂದ್ರೆ ಇದು ಮಹಿಳಾ ಪ್ರಧಾನ ಸಿನಿಮಾವಾಗಿದೆ. ಸದ್ಯ ಎಲ್ಲಾ ಕೆಲಸಗಳನ್ನು ಮುಗಿಸಿ ಈಗ ರಿಲೀಸ್ ಗೆ ತಯಾರಿ ಮಾಡಿಕೊಳ್ಳುತ್ತಿದೆ. ಸಿಂಡ್ರೆಲ್ಲಾ ತಾಯಿ ಆದ ನಂತರ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ಇದಾಗಿದೆ.

ಪ್ರಿಯಾ ನಿರ್ದೇಶನ, ರಾಕ್ ಲೈನ್ ನಿರ್ಮಾಣ
ಚಿತ್ರಕ್ಕೆ ತಮಿಳಿನ ನಿರ್ದೇಶಕಿ ಪ್ರಿಯಾ ಆಕ್ಷನ್ ಕಟ್ ಹೇಳಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಜೊತೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ ಅನುಭವ ಇರುವ ವಿ.ಪ್ರಿಯಾ ನಿರ್ದೇಶನದ ಮೊದಲ ಕನ್ನಡ ಸಿನಿಮಾ. ಸಾಕಷ್ಟು ನಿರೀಕ್ಷೆ ಮೂಡಿಸಿರುವ 'ಆದಿ ಲಕ್ಷ್ಮಿ ಪುರಾಣ' ಸಿನಿಮಾಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ.

ಪ್ರಮುಖ ಪಾತ್ರದಲ್ಲಿ ನಿರೂಪ್ ಭಂಡಾರಿ
ಚಿತ್ರದ ಪ್ರಮುಕ ಪಾತ್ರದಲ್ಲಿ ನಿರೂಪ್ ಭಂಡಾರಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಅಂಬರೀಶ್ ಅಭಿನಯದ 'ಅಮರ್' ಚಿತ್ರದಲ್ಲಿ ಗೆಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಿರೂಪ್ ಈಗ 'ಆದಿ ಲಕ್ಷ್ಮಿ ಪುರಾಣ' ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದಲ್ಲಿ ನಿರೂಪ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಸೌಮ್ಯ ಜಗನ್ ಮೂರ್ತಿ, ಯಶ್ವಂತ್ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ.

ಜುಲೈ 19ಕ್ಕೆ ಚಿತ್ರ ತೆರೆಗೆ
ವರ್ಷಗಳ ಬಳಿಕ ತೆರೆಮೇಲೆ ಬರುತ್ತಿರುವ ರಾಧಿಕಾ ಅವರನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಅವರ ಆಸೆಯಂತೆ ಚಿತ್ರ ಜುಲೈ 19ಕ್ಕೆ ತೆರೆಗೆ ಬರುವ ಪ್ಲಾನ್ ಮಾಡಿದೆ. ಆದ್ರಿನ್ನು ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದ್ರೆ ಜುಲೈ 19ಕ್ಕೆ ರಿಲೀಸ್ ಆಗುವುದು ಬಹುತೇಕ ಖತಿತ ಎಂದು ಹೇಳಲಾಗುತ್ತಿದೆ. ಈಗಾಗಲೆ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಕೂಡ ಸಿಕ್ಕಿದೆ.


Click it and Unblock the Notifications











