For Quick Alerts
  ALLOW NOTIFICATIONS  
  For Daily Alerts

  ಮದುವೆಗೂ ಮುಂಚೆ ರಾಕಿಂಗ್ ಸ್ಟಾರ್ ಗೆ ರಾಧಿಕಾ ಪಂಡಿತ್ ಚಾಲೆಂಜ್ !

  By Bharath Kumar
  |

  ಹಿಂದೂ ಮದುವೆಯಲ್ಲಿ 'ಮದರಂಗಿ' ಸಂಪ್ರದಾಯ ತುಂಬಾ ವಿಶೇಷ. ಮದುವೆಯ ಹಿಂದಿನ ದಿನ 'ಮದರಂಗಿ ಶಾಸ್ತ್ರ' ಮಾಡಿ ಮದು ಮಗ ಮತ್ತು ಮದು ಮಗಳ ಕೈಗೆ ರಂಗೋಲಿಯನ್ನು ಹಾಕಲಾಗುತ್ತೆ. ಈ ಸಂಪ್ರದಾಯ ಹಿಂದಿನ ಕಾಲದಿಂದಲೂ ಇದೆ.

  'ಮೆಹಂದಿ' ಮದುವೆಯ ಸಂಬಂಧದ ಸಂಕೇತ, ಮೆಹಂದಿ ಪೋಷಕರ ಪ್ರೀತಿಯ ಪ್ರತೀಕ, ಮೆಹಂದಿ ಶುಭದ ಸಂಕೇತ, ಮೆಹಂದಿ ಅಣ್ಣ-ತಂಗಿಯ ಸಂಬಂಧ ಸಂಕೇತ, ಹೀಗೆ ಮದುವೆ ಮುಂಚೆ ಹಾಕಲಾಗುವ ಮೆಹಂದಿಗೆ ಇಷ್ಟೆಲ್ಲಾ ಅರ್ಥಗಳು ಇವೆ.['ಯಶ್-ರಾಧಿಕಾ' ಮೆಹಂದಿ ಶಾಸ್ತ್ರದ ಕಂಪ್ಲೀಟ್ ವಿಶೇಷತೆಗಳು!]

  ಆದ್ರೆ, ರಾಧಿಕಾ ಪಂಡಿತ್ ಅವರ ಪ್ರಕಾರ ಮೆಹಂದಿ ಶಾಸ್ತ್ರಕ್ಕೆ ಬೇರೆನೇ ಅರ್ಥವಿದೆ. ಹೌದು, ಡಿಸೆಂಬರ್ 9ರಂದು ನಟ ಯಶ್ ಅವರನ್ನ ವರಿಸಲಿರುವ ರಾಧಿಕಾ ಪಂಡಿತ್ ಇತ್ತೀಗಷ್ಟೇ ಮೆಹಂದಿ ಶಾಸ್ತ್ರವನ್ನ ಮುಗಿಸಿದ್ದಾರೆ. ತಮ್ಮ ಎರಡು ಕೈಗಳಿಗೆ ಕಲರ್ ಪುಲ್ ಆಗಿ ವಿನ್ಯಾಸ ಮಾಡಿಸಿರುವ ರಾಧಿಕಾ, ಮೆಹಂದಿ ಯಾವುದರ ಸಂಕೇತವೆಂದು ಹೇಳಿದ್ದಾರೆ.['ಯಶ್-ರಾಧಿಕಾ ಪಂಡಿತ್' ಮದುವೆ ಸಂಭ್ರಮ ಭಲೇ ಜೋರು]

  Radhika Pandit Talk About Mehndi Tradition

  'ಮೆಹಂದಿ' ಸಂಪ್ರದಾಯದ ಬಗ್ಗೆ ರಾಧಿಕಾ ಹೇಳಿರೋದೇನು?
  ''ಹುಡುಗನಿಗೆ ಹುಡುಗಿ ಮೇಲೆ ಎಷ್ಟು ಪ್ರೀತಿ ಇದೇ ಅನ್ನೋದು, 'ಮೆಹಂದಿ' ಎಷ್ಟು ಡಾರ್ಕ್ ಆಗಿ ಬರುತ್ತೆ ಅನ್ನೊದರ ಮೇಲೆ ಡಿಸೈಡ್ ಆಗುತ್ತಂತೆ. ನೋಡೋಣ ಎಷ್ಟು ಕಲರ್ ಬರುತ್ತೆ ಅಂತ ಮಿಸ್ಟರ್ ರಾಕಿಂಗ್ ಸ್ಟಾರ್''

  ಹೀಗಾಗಿ, ರಾಧಿಕಾ ಪಂಡಿತ್ ಅವರ ಕೈಮೇಲೆ ಹಾಕಿರುವ ಮೆಹಂದಿ ಈಗ, ರಾಧಿಕಾ ಪಂಡಿತ್ ಅವರನ್ನ ರಾಕಿಂಗ್ ಸ್ಟಾರ್ ಎಷ್ಟು ಲವ್ ಮಾಡ್ತಾರೆ ಎಂಬುದನ್ನ ನಿರ್ಣಯಸಲಿದೆ. ಬಹುಶಃ ರಾಧಿಕಾ ಅವರ ಈ ಮಾತು ಕೇಳಿ, ಮದುವೆ ದಿನ ಎಲ್ಲರ ಕಣ್ಣು ರಾಧಿಕಾ ಅವರ ಮೆಹಂದಿ ಕಲರ್ ಮೇಲೆ ಹೋದ್ರು ಅಚ್ಚರಿಯಿಲ್ಲ ಬಿಡಿ.[ರಾಧಿಕಾ ಪಂಡಿತ್ - ಯಶ್ ಮದುವೆ: ಸೂಪರ್ ಸ್ಪೆಷಾಲಿಟಿಗಳು ಏನೇನು.?]

  English summary
  Rocking Star Yash and Radhika Pandit wedding is scheduled on December 9th, 10th and 11th at Tripura Vasini, Bengaluru Palace Ground. Here is the Radhika Pandit Opinion about Mehandi Tradition
  Thursday, December 8, 2016, 15:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X