»   » ಬಂಗಾರಪೇಟೆ ಪಾನಿಪೂರಿ ತಿಂದ ಯಶ್ 'ತಿಂಡಿಪೋತ' ಪತ್ನಿ ರಾಧಿಕಾ ಪಂಡಿತ್

ಬಂಗಾರಪೇಟೆ ಪಾನಿಪೂರಿ ತಿಂದ ಯಶ್ 'ತಿಂಡಿಪೋತ' ಪತ್ನಿ ರಾಧಿಕಾ ಪಂಡಿತ್

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ರವರನ್ನ ಕೈಹಿಡಿದ ಮೇಲೆ ನಟಿ ರಾಧಿಕಾ ಪಂಡಿತ್ ಗಾಂಧಿನಗರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಯಶ್ ರವರ ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ಸಾಥ್ ನೀಡಿರುವ ರಾಧಿಕಾ ಪಂಡಿತ್, ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದಾರೆ.

ಬೆಂಗಳೂರಿನಲ್ಲಿ ಬೊಂಬಾಟ್ ಬಂಗಾರಪೇಟೆ ಪಾನಿಪುರಿ ಟೇಸ್ಟ್ ಮಾಡಿ

ಫೇಸ್ ಬುಕ್ ನಲ್ಲಿ ತರಹೇವಾರಿ ಫೋಟೋಗಳಿಂದಲೇ ಹೆಚ್ಚು ಸುದ್ದಿ ಮಾಡುತ್ತಿರುವ ರಾಧಿಕಾ ಪಂಡಿತ್ ನಿನ್ನೆ ಬಂಗಾರಪೇಟೆ ಪಾನಿ ಪೂರಿ ಸವಿದಿದ್ದಾರೆ.

ಮಿಸಸ್ ರಾಮಾಚಾರಿ ರಾಧಿಕಾ ಪಂಡಿತ್ ಇದೇ ವಿಷಯಕ್ಕೆ ಈಗ ಸದ್ದು ಮಾಡುತ್ತಿದ್ದಾರೆ

Radhika Pandit tastes yummy Bangarpet Paani Puri

ಬಂಗಾರಪೇಟೆ ಪಾನಿಪೂರಿ ಅಂದ್ರೆ ಎಂಥವರ ಬಾಯಲ್ಲೂ ನೀರೂರುವುದು ಸಹಜ. ಹಾಗೇ, ರಾಧಿಕಾ ಪಂಡಿತ್ ಕೂಡ ಇಷ್ಟಪಟ್ಟು ಬಂಗಾರಪೇಟೆ ಪಾನಿಪೂರಿಯನ್ನ ಸವಿದಿದ್ದಾರೆ. ಜೊತೆಗೆ ಈ ಕುರಿತು ತಮ್ಮ ಫೇಸ್ ಬುಕ್ ನಲ್ಲೂ ಬರೆದುಕೊಂಡಿದ್ದಾರೆ ರಾಧಿಕಾ ಪಂಡಿತ್.

'ಯಶೋಮಾರ್ಗ'ಕ್ಕಾಗಿ ಹೊಸ ಕಚೇರಿ ಸ್ಥಾಪಿಸಿದ ಯಶ್ ದಂಪತಿ

''ಒರಿಜಿನಲ್ ಬಂಗಾರಪೇಟೆ ಪಾನಿಪೂರಿ ಸವಿಯುವ ಅವಕಾಶ ಸಿಕ್ಕರೆ ಖಂಡಿತ ಮಿಸ್ ಮಾಡಿಕೊಳ್ಳಬೇಡಿ. ತುಂಬಾ ರುಚಿಕರವಾಗಿದೆ. ಹಾಗೇ, 'ತಿಂಡಿಪೋತಿ' ಪತ್ನಿ ತಿನ್ನುತ್ತಿರುವುದನ್ನ ದಿಟ್ಟಿಸಿ ನೋಡುತ್ತಿರುವ ರಾಕಿಂಗ್ ಸ್ಟಾರ್ ರವರ ಎಕ್ಸ್ ಪ್ರೆಶನ್ ಮಿಸ್ ಮಾಡಿಕೊಳ್ಳಬೇಡಿ'' ಎಂದು ರಾಧಿಕಾ ಪಂಡಿತ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ 'KGF' ಸೆಟ್ ನಲ್ಲಿ ರಾಧಿಕಾ ಪಂಡಿತ್

ರಾಧಿಕಾ ಪಂಡಿತ್ ಹೇಳಿರುವ ಹಾಗೆ, ಪಾನಿ ಪೂರಿಯನ್ನ ಮಿಸಸ್ ರಾಧಿಕಾ ಯಶ್ ಗುಳಂ ಮಾಡುತ್ತಿರುವಾಗ, ಯಶ್ ಕೊಟ್ಟಿರುವ ಎಕ್ಸ್ ಪ್ರೆಶನ್ ಸಖತ್ ಮಜವಾಗಿದೆ.

English summary
Kannada Actress, Wife of Rocking Star Yash, Radhika Pandit tastes yummy Bangarpet Paani Puri. Check out the photos.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada