ಯಶ್ ಗೆ ರಾಧಿಕಾ ಪಂಡಿತ್ ಮಾಡಿದ ವಿಶ್ ಹೀಗಿದೆ
Recommended Video

ಯಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ವಿಶ್ ಮಾಡಿದ ರಾಧಿಕಾ ಪಂಡಿತ್ | FILMIBEAT KANNADA
ನಟ ಯಶ್ ಇಂದು ತಮ್ಮ ಹುಟ್ಟುಹಬ್ಬದ ಆಚರಣೆಯಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸಾವಿರಾರು ಅಭಿಮಾನಿಗಳು ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ.
ಪ್ರೀತಿಯ ಪತ್ನಿ ರಾಧಿಕಾ ಪಂಡಿತ್ ಶುಭಾಶಯ ಯಶ್ ಪಾಲಿಗೆ ಪ್ರತಿ ವರ್ಷವೂ ವಿಶೇಷವಾಗಿರುತ್ತದೆ. ಇಂದು ಫೇಸ್ ಬುಕ್ ನಲ್ಲಿ ಯಶ್ ಗೆ ರಾಧಿಕಾ ಪಂಡಿತ್ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

'ಹ್ಯಾಪಿ ಬರ್ತ್ ಡೇ ಟು ಮೈ ಪರ್ಫೆಕ್ಟ್ ಮ್ಯಾಚ್' ಎಂದು ಬರೆದು ಪತಿ ಜೊತೆಗಿನ ಮುದ್ದಾದ ಸೆಲ್ಫಿಯನ್ನು ಸಿಂಡ್ರಲಾ ಪೋಸ್ಟ್ ಮಾಡಿದ್ದಾರೆ. ಒಂದೇ ಸಾಲಿನಲ್ಲಿ ತಮ್ಮ ಪ್ರೀತಿಯನ್ನು ರಾಧಿಕಾ ತಿಳಿಸಿದ್ದಾರೆ.
ಇತ್ತೀಚಿಗಷ್ಟೆ ಹೆಣ್ಣು ಮಗುವಿಗೆ ರಾಧಿಕಾ ಜನ್ಮ ನೀಡಿದ್ದು ತಾಯ್ತನದ ಸಂತಸದಲ್ಲಿ ಇದ್ದಾರೆ. ಹೆಣ್ಣು ಮಗು, 'ಕೆಜಿಎಫ್' ಸಕ್ಸಸ್ ಹಾಗೂ ಹುಟ್ಟುಹಬ್ಬ ಈ ಮೂರು ಖುಷಿಗಳು ಯಶ್ ಹುಟ್ಟುಹಬ್ಬವನ್ನ ವಿಶೇಷಗೊಳಿಸಿವೆ.
English summary
Actress Radhika Pandit wishes for his husband, kannada actor Yash birthday.


Click it and Unblock the Notifications