For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಎಫೆಕ್ಟ್: ನಟಿ ರಾಧಿಕಾ ಪಂಡಿತ್ ಹುಟ್ಟುಹಬ್ಬ ಆಚರಣೆ ಕ್ಯಾನ್ಸಲ್

  |

  ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಸದ್ಯ ಇಬ್ಬರು ಮುದ್ದಾದ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ರಾಧಿಕಾ ಸಿನಿಮಾ ದಿಂದ ಕೊಂಚ ಬ್ರೇಕ್ ಪಡೆದಿದ್ದರು ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲ. ಅಂದ್ಹಾಗೆ ರಾಧಿಕಾ ಪಂಡಿತ್ ಹುಟ್ಟುಹಬ್ಬ ಹತ್ತಿರ ಬರುತ್ತಿದೆ. ಅಭಿಮಾನಿಗಳು ರಾಧಿಕಾ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲು ಕಾತರರಾಗಿದ್ದರು.

  ಅಭಿಮಾನಿಗಳಲ್ಲಿ ಯಶ್ ಮನವಿ ಮಾಡಿದ್ದೇನು? | Yash | Radhika Pandith | Filmibeat Kannada

  ಆದರೀಗ ಅಭಿಮಾನಿಗಳಿಗೆ ನಿರಾಸೆಯ ಸುದ್ದಿ ಹೊರಬಿದ್ದಿದೆ. ಹೌದು, ರಾಧಿಕಾ ಪಂಡಿತ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಸ್ಪಷ್ಟಪಡಿಸಿದ್ದಾರೆ. ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಯಶ್ ಪತ್ನಿ ರಾಧಿಕಾ ಹುಟ್ಟುಹಬ್ಬದ ಬಗ್ಗೆ ಮಾತನಾಡಿದ್ದಾರೆ. ಈ ಬಾರಿ ಹುಟ್ಟುಹಬ್ಬ ಆಚರಿಸುವುದಿಲ್ಲ ಎಂದು ಹೇಳಿದ್ದಾರೆ. ಮುಂದೆ ಓದಿ..

  10 ವರ್ಷದ 'ವ್ಯಾಲೆಂಟೈನ್ ಡೇ' ನೆನಪು ಹಂಚಿಕೊಂಡ ರಾಧಿಕಾ ಪಂಡಿತ್10 ವರ್ಷದ 'ವ್ಯಾಲೆಂಟೈನ್ ಡೇ' ನೆನಪು ಹಂಚಿಕೊಂಡ ರಾಧಿಕಾ ಪಂಡಿತ್

  ಕೊರೊನಾ ಭೀತಿ ಹುಟ್ಟುಹಬ್ಬ ಆಚರಣೆ ಕ್ಯಾನ್ಸಲ್

  ಕೊರೊನಾ ಭೀತಿ ಹುಟ್ಟುಹಬ್ಬ ಆಚರಣೆ ಕ್ಯಾನ್ಸಲ್

  ಅಂದ್ಹಾಗೆ ಅಭಿಮಾನಿಗಳು ಬೇಸರಪಟ್ಟುಕೊಳ್ಳಬೇಕಿಲ್ಲ. ಯಾಕಂದ್ರೆ ರಾಧಿಕಾ ಪಂಡಿತ್ ಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರ ಮಕ್ಕಳ ಆರೈಕೆ ಮಾಡಬೇಕು. ಜೊತೆಗೆ ಕೊರೊನಾ ವೈರಸ್ ಭೀತಿ ಕೂಡ ಕಾಡುತ್ತಿದೆ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಲಾಗಿದೆ.

  ಯಶ್ ಮಗಳ ಬರ್ತಡೇಯಲ್ಲಿ ಕ್ಯಾಮರಾ ಸೆರೆಹಿಡಿದ 6 ಸ್ಪೆಷಲ್ ಫೋಟೋಗಳಿವುಯಶ್ ಮಗಳ ಬರ್ತಡೇಯಲ್ಲಿ ಕ್ಯಾಮರಾ ಸೆರೆಹಿಡಿದ 6 ಸ್ಪೆಷಲ್ ಫೋಟೋಗಳಿವು

  ಯಶ್ ಹೇಳಿದ್ದೇನು?

  ಯಶ್ ಹೇಳಿದ್ದೇನು?

  ಹುಟ್ಟುಹಬ್ಬ ಆಚರಣೆ ಮಾಡುವುದಿಲ್ಲ. ಇಬ್ಬರು ಮಕ್ಕಳಿದ್ದಾರೆ. ಕೊರೊನಾ ವೈರಸ್ ಇರುವುದರಿಂದ ತುಂಬ ಜನ ಸೇರಬಾರದು. ಗುಂಪಾಗಿ ಜನ ಸೇರಲಿಕ್ಕೆ ಆಗಲ್ಲ. ಹಾಗಾಗಿ ಸೆಲೆಬ್ರೇಟ್ ಮಾಡುವುದಿಲ್ಲ. ಸಂಜೆ ನಾವೆ ಒಟ್ಟಿಗೆ ಸೇರುತ್ತೆವೆ. ಒಟ್ಟಿಗೆ ಸಮಯ ಕಳೆಯುತ್ತೇವೆ" ಎಂದು ಹೇಳಿದ್ದಾರೆ.

  ರಾಧಿಕಾ ಹುಟ್ಟುಹಬ್ಬ ಯಾವತ್ತು?

  ರಾಧಿಕಾ ಹುಟ್ಟುಹಬ್ಬ ಯಾವತ್ತು?

  ರಾಧಿಕಾ ಪಂಡಿತ್ ಹುಟ್ಟುಹಬ್ಬ ಇದೆ ತಿಂಗಳು ಮಾರ್ಚ್ 7ಕ್ಕೆ. ಪ್ರತಿವರ್ಷ ಸಹ ರಾಧಿಕಾ ಪಂಡಿತ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿತ್ತು. ಅಭಿಮಾನಿಗಳು ರಾಧಿಕಾ ಮನೆ ಬಳಿ ಬಂದ ವಿಶ್ ಮಾಡಿ ಸಂಭ್ರಮಾಚರಣೆ ಮಾಡುತ್ತಿದ್ದರು. ಮದುವೆ ನಂತರ ರಾಧಿಕಾ ಪಂಡಿತ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಕಡಿಮೆ. ಈ ಬಾರಿ ಕೂಡ ಹುಟ್ಟುಹಬ್ಬ ಆಚರಣೆ ಕ್ಯಾನ್ಸಲ್ ಆಗಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

  ಯಶ್ ಮಗಳ ಬರ್ತ್ ಡೇ ಪಾರ್ಟಿಯಲ್ಲಿ ದರ್ಶನ್, ಪುನೀತ್ಯಶ್ ಮಗಳ ಬರ್ತ್ ಡೇ ಪಾರ್ಟಿಯಲ್ಲಿ ದರ್ಶನ್, ಪುನೀತ್

  ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ನೀಡಿದ ಯಶ್

  ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ನೀಡಿದ ಯಶ್

  ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ನೀಡಿರುವ ಯಶ್ ಶೇಕ್ ಮಾಡಬೇಡಿ ನಮಸ್ಕಾರ ಮಾಡಿ ಎಂದಿದ್ದಾರೆ. ಸ್ವಚ್ಛತೆ ಕಾಪಾಡಿಕೊಳ್ಳಿ. ಸ್ವಲ್ಪ ಹುಷಾರಾಗಿರಿ. ಏನಾದರು ಆನಾರೋಗ್ಯ ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ. ಹೆಚ್ಚು ಜನರು ಇರುವ ಕಡೆ ಹೋಗುವುದನ್ನು ಕಡಿಮೆ ಮಾಡಿ" ಎಂದು ಹೇಳಿದ್ದಾರೆ.

  English summary
  Actress Radhika Pandith birthday celebration cancelled because of coronavirus. Radhika Pandith birthday on March 7th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X