3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ರಾಕಿಂಗ್ ಸ್ಟಾರ್ ದಂಪತಿ? ಈ ಬಗ್ಗೆ ರಾಧಿಕಾ ಪಂಡಿತ್ ಹೇಳಿದ್ದೇನು?
ನಟಿ ರಾಧಿಕಾ ಪಂಡಿತ್ ಮತ್ತೆ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕಾರಣ ಇತ್ತೀಚಿಗೆ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಶೇರ್ ಮಾಡಿರುವ ಫೋಟೋ. ಲಾಕ್ ಡೌನ್ ನಿಯಮದ ಬಗ್ಗೆ ಯಶ್ ಇತ್ತೀಚಿಗೆ ಒಂದು ಪೋಸ್ಟ್ ಹಾಕಿದ್ದಾರೆ.
Recommended Video
"ಸರ್ಕಾರದ ಹೊಸ ಲಾಕ್ ಡೌನ್ ನಿಯಮ ನನ್ನ ಪತ್ನಿಗೆ ಸಾಕಷ್ಟು ಇಷ್ಟವಾಗಿದೆ. ರಾತ್ರಿ 8 ಗಂಟೆಗೆ ಮನೆಗೆ ವಾಪಸ್ ಬಾ, ವಿಕೇಂಡ್ ನಲ್ಲಿ ಮನೆಯಲ್ಲಿಯೇ ಇರು ನನ್ನ ಪತ್ನಿಗೂ ಇದೆ ಬೇಕಿತ್ತು" ಎಂದು ಬರೆದುಕೊಂಡಿದ್ದಾರೆ. ಹೀಗೆ ಹೇಳುವ ಜೊತೆಗೆ ಪತ್ನಿಯ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ.
ಈ ಫೋಟೋ ನೋಡಿದ ನೆಟ್ಟಿಗರು ರಾಧಿಕಾ ಮತ್ತೆ ಗರ್ಭಿಣಿನಾ, ಮೂರನೆ ಮಗುವಿನಾ ನಿರೀಕ್ಷೆಯಲ್ಲಿದ್ದಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಪೋಸ್ಟ್ ನಲ್ಲಿ ಯಶ್ 3 ಬೆರಳನ್ನು ಹಣೆಯ ಮೇಲೆ ಇಟ್ಟುಕೊಂಡಿದ್ದಾರೆ. ಇದು ಅಭಿಮಾನಿಗಳ ಅನುಮಾನಕ್ಕೆ ಕಾರಣವಾಗಿದೆ.

ನಟಿ ರಾಧಿಕಾ ಪಂಡಿತ್ ಸದ್ಯ ಎರಡು ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಆಗಲೆ ಮೂರನೆ ಮಗುನಾ ಎಂದು ಪ್ರಶ್ನಿಸುತ್ತಿದ್ದವರಿಗೆ ರಾಧಿಕಾ ಪ್ರತಿಕ್ರಿಯೆ ನೀಡಿದ್ದಾರೆ. ಈಗ ನನ್ನ ನಿಯಮವನ್ನು ಜವಾಬ್ದಾರಿಯುತ ಪ್ರಜೆಯ ರೂಪದಲ್ಲಿ ಅನುಸರಿಸುತ್ತಿದ್ದೀರಿ ಎಂದು ಹೇಳುತ್ತಾ, ಈ ಫೋಟೋ ನೋಡಿ ಅನೇಕರು ಮೂರನೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಭಾವಿಸುವವರಿಗೆ "ಇಲ್ಲ ನಾನು ಗರ್ಭಿಣಿ ಅಲ್ಲ" ಎಂದು ಹೇಳಿದ್ದಾರೆ. ಈ ಮೂಲಕ ರಾಧಿಕಾ ಮತ್ತೆ ಗರ್ಭಿಣಿ ಎನ್ನುವ ವದಂತಿಗೆ ಬ್ರೇಕ್ ಹಾಕಿದ್ದಾರೆ.


Click it and Unblock the Notifications











