For Quick Alerts
  ALLOW NOTIFICATIONS  
  For Daily Alerts

  10 ವರ್ಷದ 'ವ್ಯಾಲೆಂಟೈನ್ ಡೇ' ನೆನಪು ಹಂಚಿಕೊಂಡ ರಾಧಿಕಾ ಪಂಡಿತ್

  |
  ಕಳೆದ ಹತ್ತು ವರ್ಷದಲ್ಲಿ ಯಶ್, ರಾಧಿಕಾ ಬಾಳಲ್ಲಿ ಏನಿಲ್ಲಾ ಆಗಿದೆ ನೋಡಿ | Yash | Radhika Pandit | Filmibeat

  ಪ್ರೇಮಿಗಳ ದಿನದ ವಿಶೇಷವಾಗಿ ನಟಿ ರಾಧಿಕಾ ಪಂಡಿತ್ ತಮ್ಮ ಪ್ರೀತಿಯ ನೆನಪು ಮೆಲುಕು ಹಾಕಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಜೊತೆಗಿನ ಹತ್ತು ವರ್ಷದ 'ವ್ಯಾಲೆಂಟೈನ್ ಡೇ' ಆಚರಿಸಿರುವ ಕ್ಷಣದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ಯಶ್ ಜೊತೆಗಿರುವ 8 ಫೋಟೋಗಳನ್ನು ರಾಧಿಕಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ''ಇದರಲ್ಲಿ ಮೊದಲ ಎರಡು ವರ್ಷದ 'ವ್ಯಾಲೆಂಟೈನ್ ಡೇ' ಫೋಟೋ ಇಲ್ಲ. ತದನಂತರ ಏಂಟು ವರ್ಷದ ಫೋಟೋಗಳು ಇಲ್ಲಿದೆ. ಇದು ನಮ್ಮ ವ್ಯಾಲೆಂಟೈನ್ ಡೇ ಫೋಟೋಗಳು'' ಎಂದು ಹೇಳಿದ್ದಾರೆ.

  ನೀವು ನೋಡದೆ ಇರುವ ಯಶ್-ರಾಧಿಕಾ ಪರ್ಸನಲ್ ಫೋಟೋ ಆಲ್ಬಂನೀವು ನೋಡದೆ ಇರುವ ಯಶ್-ರಾಧಿಕಾ ಪರ್ಸನಲ್ ಫೋಟೋ ಆಲ್ಬಂ

  ಅಂದ್ರೆ, ರಾಧಿಕಾ ಪಂಡಿತ್ ಮತ್ತು ಯಶ್ ಪ್ರೀತಿ ಹತ್ತು ವರ್ಷದ ಸಂಭ್ರಮ. 2016ರ ಡಿಸೆಂಬರ್ ತಿಂಗಳಲ್ಲಿ ಯಶ್-ರಾಧಿಕಾ ಮದುವೆಯಾಗಿದ್ದರು. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ದಂಪತಿಗೆ ಈಗ ಎರಡು ಮಕ್ಕಳಿದ್ದಾರೆ. ಹೆಣ್ಣು ಮಗುವಿಗೆ ಐರಾ ಎಂದು ಹೆಸರಿಟ್ಟಿದ್ದು, ಗಂಡು ಮಗುವಿಗೆ ಇನ್ನು ಹೆಸರಿಟ್ಟಿಲ್ಲ.

  ಯಶ್ ಮಗಳ ಬರ್ತಡೇಯಲ್ಲಿ ಕ್ಯಾಮರಾ ಸೆರೆಹಿಡಿದ 6 ಸ್ಪೆಷಲ್ ಫೋಟೋಗಳಿವುಯಶ್ ಮಗಳ ಬರ್ತಡೇಯಲ್ಲಿ ಕ್ಯಾಮರಾ ಸೆರೆಹಿಡಿದ 6 ಸ್ಪೆಷಲ್ ಫೋಟೋಗಳಿವು

  ಶಶಾಂಕ್ ನಿರ್ದೇಶನದಲ್ಲಿ ಮೂಡಿ ಬಂದ 'ಮೊಗ್ಗಿನ ಮನಸ್ಸು' ಸಿನಿಮಾ ಮೂಲಕ ಯಶ್ ಮತ್ತು ರಾಧಿಕಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಅದೇ ವರ್ಷ 2008ರಲ್ಲಿಯೇ ಯಶ್ 'ರಾಕಿ' ಸಿನಿಮಾದಲ್ಲಿಯೂ ಅಭಿನಯ ಮಾಡಿದ್ರು. ಇದುವರೆಗೂ 'ಮೊಗ್ಗಿನ ಮನಸ್ಸು', 'ಡ್ರಾಮಾ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮತ್ತು 'ಸಂತು ಸ್ಟೈಟ್ ಫಾರ್ವರ್ಡ್' ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ.

  English summary
  Kannada actor rocking star yash's wife Radhika Pandith shares her 10 year memories about valentine day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X