ಐರಾ, ಯಥರ್ವ್ ನಿಮ್ ತರನಾ? ನಮ್ಮ ಬಾಸ್ ತರಾನಾ?

ನಟಿ ರಾಧಿಕಾ ಪಂಡಿತ್ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಫ್ಯಾಮಿಲಿ ಮಕ್ಕಳು ಅಂತ ಬಹಳ ಬ್ಯುಸಿಯಾಗಿದ್ದಾರೆ. ಮನೆ ಜವಾಬ್ದಾರಿ ವಹಿಸಿಕೊಂಡು ಪತಿ ಯಶ್ ಬೆಂಬಲಕ್ಕೆ ನಿಂತಿದ್ದಾರೆ. ಬಹಳ ದಿನಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.

ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ, ನಟಿ ಬಗ್ಗೆ ಸಾಕಷ್ಟು ಪ್ರಶ್ನೆಗಳು, ಅನುಮಾನಗಳು ಇರುತ್ತವೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ನೇರವಾಗಿ ಅದಕ್ಕೆಲ್ಲಾ ಉತ್ತರ ಸಿಗುವಂತಾಗಿದೆ. ಸಿನಿಮಾ ವಿಚಾರಗಳನ್ನು ಮಾತ್ರವಲ್ಲದೇ ತಾರೆಯರ ವೈಯಕ್ತಿಯ ವಿಚಾಗಳ ಬಗ್ಗೆಯೂ ಪ್ರಶ್ನೆಗಳನ್ನು ಕೇಳುತ್ತಾರೆ. ಅದೇ ರೀತಿ ರಾಧಿಕಾಗೆ ಇಂಟ್ರೆಸ್ಟಿಂಗ್ ಪ್ರಶ್ನೆಗಳು ಎದುರಾಗಿದೆ.

Radhika Pandit s Ask Me Anything chat with fans goes viral

ಮೇಡಂ ನೀವು ಮತ್ತೆ ಯಾವಾಗ ಸಿನಿಮಾಗಳಲ್ಲಿ ನಟಿಸುತ್ತೀರಾ? ನಾವು ಅಭಿಮಾನಿಗಳೆಲ್ಲಾ ನಿಮ್ಮನ್ನು ಮತ್ತೆ ಬೆಳ್ಳೆ ಪರದೆ ಮೇಲೆ ನೋಡಲು ಕಾತುರಾಗಿದ್ದೇವೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ರಾಧಿಕಾ ಪಂಡಿತ್, "ಸರಿಯಾದ ಸಮಯ ಬಂದಾಗ" ಎಂದು ಉತ್ತರ ಕೊಟ್ಟಿದ್ದಾರೆ.

ಐರಾ ಹಾಗೂ ಯಥರ್ವ್ ಫೋಟೊಗಳನ್ನು ನೋಡಿದರೆ ಬಳಹ ಖುಷಿಯಾಗುತ್ತದೆ. ಅವರಿಬ್ಬರು ಯಾರ ರೀತಿ? ನಿಮ್ಮ ರೀತಿನಾ? ಬಾಸ್‌(ಯಶ್) ರೀತಿನಾ? ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಧಿಕಾ, "ಐರಾ, ಯಥರ್ವ್ ಬಹಳ ಬೇಗ ಬೆಳೆಯುತ್ತಿದ್ದಾರೆ. ಅವರು ತಮ್ಮದೇ ಆದ ವೈಯಕ್ತಿಕ ವ್ಯಕ್ತಿತ್ವಗಳ ರೂಪಿಸಿಕೊಳ್ಳುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ. ಅವರ ಬೆಳವಣಿಗೆ ನಮಗೆ ಹೆಮ್ಮೆ ಎನಿಸುತ್ತದೆ" ಎಂದು ರಿಪ್ಲೇ ಮಾಡಿದ್ದಾರೆ.

ನಿಮ್ಮ ತಾಯಿ ಮಾಡುವ ಅಡುಗೆಯಲ್ಲಿ ನಿಮಗೆ ಯಾವುದು ಇಷ್ಟ? ಅದೇ ರೀತಿ ನೀವು ಮಾಡುವ ಅಡುಗೆಯಲ್ಲಿ ಐರಾಗೆ ಯಾವುದು ಇಷ್ಟ? ಎಂದು ಮತ್ತೊಬ್ಬರು ಕೇಳಿದ್ದಾರೆ. "ನನಗೆ ಅಮ್ಮನ ಕೈರುಚಿ ಇಷ್ಟ. ಆಕೆ ಮಾಡುವ ಸರಸ್ವತ್ ಬಹಳ ಇಷ್ಟ. ಇನ್ನು ನಾನು ಮಾಡುವ ಅಡುಗೆ ಐರಾಗೆ ಇಷ್ಟ ಎಂದು ನನಗೆ ಗೊತ್ತು. ಆಕೆ ಕೂಡ ನನ್ನ ಅಡುಗೆಯನ್ನು ಒಪ್ಪಿಕೊಂಡಿದ್ದಾಳೆ" ಎಂದು ರಾಧಿಕಾ ಕಾಮೆಂಟ್ ಮಾಡಿದ್ದಾರೆ.

Radhika Pandit s Ask Me Anything chat with fans goes viral

ಮೇಡಂ ನಿಮ್ಮ ಸ್ಕಿನ್ ರೊಟೀನ್ ಹೇಳಿ ಪ್ಲೀಸ್ ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ. "ಸ್ಕಿನ್ ಕ್ಲೀನ್ ಆಗಿ ಇಟ್ಟುಕೊಳ್ಳಬೇಕು. ಮೇಕಪ್ ಸಮೇತ ನಾನು ಯಾವತ್ತೂ ಮಲಗುವುದಿಲ್ಲ. ಎಷ್ಟೇ ದಣಿದಿದ್ದರೂ ಮೇಕಪ್ ತೆಗೆದು ಮಲಗುತ್ತೇನೆ" ಎಂದು ಹೇಳಿದ್ದಾರೆ. ಒಟ್ಟಾರೆ ಅಭಿಮಾನಿಗಳ ಜೊತೆ ರಾಧಿಕಾ ಪಂಡಿತ್ ಚಿಟ್‌ಚಾಟ್ ವೈರಲ್ ಆಗಿದೆ.

16 ವರ್ಷಗಳ ಹಿಂದೆ 'ಮೊಗ್ಗಿನ ಮನಸು' ಸಿನಿಮಾ ಮೂಲಕ ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಬಂದಿದ್ದರು. ಅದಕ್ಕೂ ಮುನ್ನ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಮೊದಲ ಚಿತ್ರದಲ್ಲೇ ಯಶ್- ರಾಧಿಕಾ ಜೊತೆಯಾಗಿ ನಟಿಸಿದ್ದರು. 'ಕೃಷ್ಣನ್‌ ಲವ್‌ಸ್ಟೋರಿ' ಆಕೆಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. 'ಗಾನಬಜಾನಾ', 'ಹುಡುಗರು', 'ಅದ್ಧೂರಿ', 'ಡ್ರಾಮಾ', 'ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ' ರೀತಿಯ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

2016ರಲ್ಲಿ ಯಶ್-ರಾಧಿಕಾ ಪ್ರೀತಿಸಿ ಮದುವೆ ಆಗಿದ್ದರು. ಆ ಬಳಿಕ 'ಆದಿಲಕ್ಷ್ಮಿ ಪುರಾಣ' ಚಿತ್ರದಲ್ಲಿ ನಟಿಸಿದ್ದರು. ನಿರೂಪ್ ಬಂಡಾರಿ ಜೊತೆ ತೆರೆ ಹಂಚಿಕೊಂಡಿದ್ದರು. ಆ ಬಳಿಕ ಯಾವುದೇ ಸಿನಿಮಾಗಳಲ್ಲಿ ನಟಿಸಲಿಲ್ಲ. ಅಭಿಮಾನಿಗಳು ಆಕೆಯನ್ನು ತೆರೆಮೇಲೆ ನೋಡಲು ಬಯಸುತ್ತಿದ್ದಾರೆ. ಆಗಾಗ್ಗೆ ಈ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಇನ್ನು ಯಶ್- ರಾಧಿಕಾ ಒಟ್ಟಿಗೆ ನಟಿಸಿದರೆ ಮತ್ತಷ್ಟು ಸಂಭ್ರಮಿಸುವುದು ಗ್ಯಾರೆಂಟಿ.

More from Filmibeat

English summary
Radhika Pandit talks about making her comeback to sandalwood;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X