ರಾಧಿಕಾ ಶರತ್ ಕುಮಾರ್ ಜೊತೆ ಸೆಲ್ಫಿ ತೆಗೆದುಕೊಂಡ ಪುನೀತ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ 'ಯುವರತ್ನ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದ್ದು ಅಪ್ಪು ಈ ಚಿತ್ರದಲ್ಲಿ ಕಾಲೇಜ್ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಅಪ್ಪು ಬೈಕ್ ಏರಿ ಸಖತ್ ಸ್ಟೈಲಿಶ್ ಆಗಿ ಕಾಲೇಜ್ ಕ್ಯಾಂಪಸ್ ಗೆ ಎಂಟ್ರಿ ಕೊಡುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಇತ್ತೀಚಿಗಷ್ಟೆ ನಟಿ ಸಾಯೇಷಾ ಮದುವೆ ಮುಗಿಸಿಕೊಂಡು 'ಯುವರತ್ನ' ಚಿತ್ರತಂಡ ಸೇರಿ ಕೊಂಡಿದ್ದರು. ಸದ್ಯ ಮತ್ತೋರ್ವ ಖ್ಯಾತ ನಟಿ ರಾಧಿಕಾ ಶರತ್ ಕುಮಾರ್ 'ಯುವರತ್ನ'ನ ಅಡ್ಡಾದಲ್ಲಿ ಕಾಣಿಸಿ ಕೊಂಡಿದ್ದಾರೆ. ಹೌದು ರಾಧಿಕಾ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಾಲೇಜ್ ಆವರಣದಲ್ಲಿ ನಟಿ ರಾಧಿಕಾ ಪವರ್ ಸ್ಟಾರ್ ಪುನೀತ್ ಜೊತೆ ನಿಂತು ಸೆಲ್ಫಿಗೆ ಪೋಸ್ ನೀಡುತ್ತಿರುವ ಫೋಟೋಗೆ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಈ ಅಪ್ಪು ಜೊತೆ ಅಭಿನಯಿಸುತ್ತಿರುವ ಸಂತಸವನ್ನು ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರಾಧಿಕಾ ಶರತ್ ಕುಮಾರ್ ಅನೇಕ ವರ್ಷಗಳ ಬಳಿಕಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಸೂಪರ್ ಹಿಟ್ 'ರಾಜಕುಮಾರ' ಚಿತ್ರದಲ್ಲಿ ಶರತ್ ಕುಮಾರ್ ಕಾಣಿಸಿಕೊಂಡಿದ್ದರು. ಈಗ 'ಯುವರತ್ನ' ಚಿತ್ರದ ಮೂಲಕ ಶರತ್ ಕುಮಾರ್ ಪತ್ನಿ ರಾಧಿಕಾ ಅಭಿನಯಿಸುತ್ತಿರುವುದು ವಿಶೇಷ.

radhika sarathkumar in yuvaratna sett

'ಅಭಿ' ಸಿನಿಮಾದ ಬಳಿಕ ಪುನೀತ್ 'ಯುವರತ್ನ' ಮೂಲಕ ಮತ್ತೆ ಕಾಲೇಜ್ ಕ್ಯಾಂಪಸ್ ಗೆ ಹೋಗಿದ್ದಾರೆ. ಚಿತ್ರದಲ್ಲಿ ವಿಸಿಷ್ಠಾ ಸಿಂಹ, ಡಾಲಿ ಧನಂಜಯ್ ಮತ್ತು ಅರು ಗೌಡ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ 'ಯುವರತ್ನ' ಅಭಿಮಾನಿಗಳ ನಿರೀಕ್ಷೆಯ ಮಟ್ಟವನ್ನು ಹೆಚ್ಚು ಮಾಡಿದೆ.

More from Filmibeat

English summary
Multilingual actress Radhika Sharath kumar in Kannada actor Puneeth Rajkumar starrer 'Yuvaratna' sett. Puneeth takes a selfie with Radhika Shrath kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X