ಮಕ್ಕಳಲ್ಲಿ ತಮ್ಮಿಬ್ಬರನ್ನೇ ನೋಡಿಕೊಂಡು ಹಿರಿ ಹಿರಿ ಹಿಗ್ಗಿದ ರಾಧಿಕಾ ಪಂಡಿತ್
ಅಭಿಮಾನಿಗಳು 'ಟಾಕ್ಸಿಕ್' ಅಪ್‌ಡೇಟ್ ಕೇಳಿ ಕೇಳಿ ಸೈಲೆಂಟ್ ಆಗಿಬಿಟ್ಟಿದ್ದಾರೆ. ಮತ್ತೊಂದು ಕಡೆ ತೆರೆ ಮರೆಯಲ್ಲಿ ಯಶ್ ಮುಂದಿನ ಸಿನಿಮಾ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಸದ್ದಿಲ್ಲೇ 'ಟಾಕ್ಸಿಕ್' ಚಿತ್ರೀಕರಣ ಶುರುವಾಗಿದೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಯಶ್ ಅಷ್ಟಾಗಿ ಆಕ್ಟೀವ್ ಆಗಿಲ್ಲ. ಆಗೊಮ್ಮೆ ಈಗೊಮ್ಮೆ ಪೋಸ್ಟ್ ಮಾಡಿ ಸುಮ್ಮನಾಗುತ್ತಾರೆ. ಇತ್ತೀಚೆಗೆ 'ಕಲ್ಕಿ 2898 AD' ಸಿನಿಮಾ ನೋಡಿ ಯಶ್ ಟ್ವೀಟ್ ಮಾಡಿ ಚಿತ್ರತಂಡವನ್ನು ಅಭಿನಂದಿಸಿದ್ದರು. ಭಾರತ ಕ್ರಿಕೆಟ್ ತಂಡ ಟಿ20 ವರ್ಲ್ಡ್ ಕಪ್ ಗೆದ್ದಿದ್ದನ್ನು ಸಂಭ್ರಮಿಸಿ ಪೋಸ್ಟ್ ಮಾಡಿದ್ದರು.

ಮತ್ತೊಂದು ಕಡೆ ಪತ್ನಿ ರಾಧಿಕಾ ಪಂಡಿತ್ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು ಆಗಾಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅಭಿಮಾನಿಗಳ ಜೊತೆ ಆಸ್ಕ್ ಎನಿಥಿಂಗ್ ಸೆಷನ್ ನಡೆಸಿದ್ದರು. ಒಂದಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದರು. ಇದೀಗ ಬಹಳ ದಿನಗಳ ಬಳಿಕ ಮತ್ತೊಂದು ಪೋಸ್ಟ್ ಮಾಡಿದ್ದಾರೆ.
ಐರಾ, ಯಥರ್ವ್ ಫೋಟೊ ಹಂಚಿಕೊಂಡು ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಮಕ್ಕಳಿಬ್ಬರೂ ಅಪ್ಪ ಅಮ್ಮನ ಶೂ, ಚಪ್ಪಲಿ ಧರಿಸಿ ಸನ್ ಗ್ಲಾಸ್ ತೊಟ್ಟು ಪೋಸ್ ಕೊಟ್ಟಿದ್ದಾರೆ. ಆ ಫೋಟೋ ಹಂಚಿಕೊಂಡಿರುವ ರಾಧಿಕಾ ಪಂಡಿತ್ "ನಮ್ಮ ಶೂಗಳಲ್ಲಿ ಜಾರಿ ಹೋಗುವ ಪಾದಗಳು ಚಿಕ್ಕದಾಗಿರಬಹುದು, ಆದರೆ ಅವರ ಆಟಿಟ್ಯೂಡ್ ಸಂಪೂರ್ಣವಾಗಿ ಸರಿಹೊಂದುತ್ತದೆ" ಎಂದು ಬರೆದುಕೊಂಡಿದ್ದಾರೆ.
ರಾಧಿಕಾ ಪಂಡಿತ್ ಇಂಟ್ರೆಸ್ಟಿಂಗ್ ಪೋಸ್ಟ್‌ಗೆ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇಬ್ಬರು ಪೋಷಕರ ಆಟಿಟ್ಯೂಡ್ ತೋರಿಸುತ್ತಿದ್ದಾರೆ ಎಂದು ಒಬ್ಬರು, ಸೇಮ್ ಸೇಮ್ ಯಶ್ ಸರ್, ರಾಧಿಕಾ ಮೇಡಂ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವರು ಕ್ಯೂಟ್ ಎಂದು ಬರೆದ ಹಾರ್ಟ್ ಸಿಂಬಲ್ ಎಮೋಜಿಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
'ಟಾಕ್ಸಿಕ್' ಅಪ್‌ಡೇಟ್ ಕೊಡೋಕೆ ಹೇಳಿ ಮೇಡಂ ಎಂದು ಕೆಲವರು ರಾಧಿಕಾ ಪಂಡಿತ್ ಬಳಿ ಮನವಿ ಮಾಡಿದ್ದಾರೆ. ಸದ್ಯ ರಾಧಿಕಾ ಪೋಸ್ಟ್ ಮಾತ್ರ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ರಾಧಿಕಾ ಪಂಡಿತ್ ಅವರನ್ನು ಮತ್ತೆ ತೆರೆಮೇಲೆ ನೋಡಲು ಕಾಯುತ್ತಿದ್ದಾರೆ. ಇತ್ತೀಚೆಗೆ ಅಭಿಮಾನಿಯೊಬ್ಬರು ಈ ಬಗ್ಗೆ ಪ್ರಶ್ನೆ ಕೇಳಿದಾಗ "ಸರಿಯಾದ ಸಮಯ ಬಂದಾಗ ಮತ್ತೆ ನಟಿಸುತ್ತೇನೆ" ಎಂದಿದ್ದರು.
ಕಿರುತೆರೆಯಲ್ಲಿ ನಟನೆ ಆರಂಭಿಸಿದ ರಾಧಿಕಾ ಪಂಡಿತ್ 'ಮೊಗ್ಗಿನ ಮನಸು' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದರು. ಅದೇ ಚಿತ್ರದಲ್ಲಿ ಯಶ್ ಸಹ ಹೀರೊ ಆಗಿ ಮೋಡಿ ಮಾಡಿದ್ದರು. ಮುಂದೆ ಈ ಜೋಡಿ 'ಡ್ರಾಮಾ' ಹಾಗೂ 'ಮಿ. & ಮಿ. ರಾಮಾಚಾರಿ', 'ಸಂತು ಸ್ಟ್ರೈಟ್ ಫಾರ್ವಡ್' ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಪರಸ್ಪರ ಪ್ರೀತಿಸಿ 2016ರಲ್ಲಿ ಇಬ್ಬರು ಮದುವೆ ಆಗಿದ್ದರು.
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಕೆವಿಎಲ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಸಿನಿಮಾ ನಿರ್ಮಿಸುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











