'ತಾಯಿಗೆ ತಕ್ಕ ಮಗ'ನ ಜೊತೆ 'ರಾಘು' ಮೊದಲ ಹೆಜ್ಜೆ

'ಒಂದು ಆಲ್ಬಂನಲ್ಲಿ ಐದು ಹಾಡುಗಳಿರುತ್ತೆ. ನಾಲ್ಕು ಹಾಡುಗಳನ್ನ ನುರಿತ ಲೇಖಕರು ಬರೆಯಿಲಿ. ಒಂದು ಹಾಡನ್ನ ಬರೆಯಲು ಒಬ್ಬ ಹೊಸ ಪ್ರತಿಭೆಗೆ ಅವಕಾಶ ಕೊಡೋಣ. ನೂರು ಸಿನಿಮಾ ಬಂದ್ರೆ, ನೂರು ಜನ ಹೊಸ ಲೇಖಕರು ಚಿತ್ರರಂಗಕ್ಕೆ ಸಿಕ್ತಾರೆ' ಎಂದು ಜಯಂತ್ ಕಾಯ್ಕಿಣಿ 'ತಾಯಿಗೆ ತಕ್ಕ ಮಗ' ಚಿತ್ರದ ಆಡಿಯೋ ಸಕ್ಸಸ್ ಪ್ರೆಸ್ ಮೀಟ್ ಸಲಹೆ ನೀಡಿ ಅನೇಕರಿಗೆ ಯುವ ಲೇಖಕರಿಗೆ ಸ್ಫೂರ್ತಿಯಾದರು.

ಈ ಮಾತಿನಂತೆ 'ತಾಯಿಗೆ ತಕ್ಕ ಮಗ' ಚಿತ್ರದಿಂದ ಸ್ಯಾಂಡಲ್ ವುಡ್ ಗೆ ಹೊಸ ಪ್ರತಿಭೆಯೊಂದು ಪರಿಚಯವಾಗಿದೆ. 'ತಾಯಿಗೆ ತಕ್ಕ ಮಗ' ಚಿತ್ರದ ಐದು ಹಾಡುಗಳಲ್ಲಿ ಒಂದು ಹಾಡನ್ನ ಹೊಸ ಸಾಹಿತಿ ಬರೆದಿದ್ದು, ಆ ಹಾಡು ಈಗ ಎಲ್ಲರ ಮನ ಮುಟ್ಟಿದೆ.

'ಎದೆಯ ಒಳಗೆ ಬಲಗಾಲಿಟ್ಟು ಬಂದೆ ನೀನು....ಎಂದು ಇರದ ಒಂದು ಖುಷಿಯ ತಂದೆ ನೀನು.....' ಎಂಬ ಅದ್ಭುತ ಗೀತೆಯನ್ನ ರಾಘವೇಂದ್ರ ಸಿವಿ ಎಂಬ ಯುವ ಸಾಹಿತಿ ರಚಿಸಿದ್ದಾರೆ. ರಾಘವೇಂದ್ರ ಅವರು ಈ ಸಾಲುಗಳಿಗೆ ಸ್ವತಃ ಜಯಂತ್ ಕಾಯ್ಕಿಣಿ ಅವರೇ ಶಬ್ಬಾಶ್ ಗಿರಿ ನೀಡಿರುವುದು ನಿಜಕ್ಕೂ ವಿಶೇಷ. ಚಿತ್ರದ ನಿರ್ದೇಶಕ ಶಶಾಂಕ್ ಕೂಡ ರಾಘವೇಂದ್ರ ಅವರ ಹಾಡನ್ನ ಮೆಚ್ಚಿಕೊಂಡಿದ್ದಾರೆ.

Raghavendra cv writes song for thayige thakka maga

ಇನ್ನು ಸಾಮಾಜಿಕ ಜಾಲತಾಣದಲ್ಲೂ ರಾಘವೇಂದ್ರ ಅವರು ಬರೆದಿರುವ 'ಎದೆಯ ಒಳಗೆ ಬಲಗಾಲಿಟ್ಟು' ಹಾಡಿಗೆ ಪ್ರಶಂಸೆಗಳು ವ್ಯಕ್ತವಾಗಿದೆ. ಸದ್ಯ, ಈ ಹಾಡಿನ ಆಡಿಯೋ ಮಾತ್ರ ರಿಲೀಸ್ ಆಗಿದ್ದು, ವಿಡಿಯೋ ತುಣುಕಿನ ಮೇಲೆ ಹೆಚ್ಚು ಕುತೂಹಲ ಮೂಡಿದೆ.

ಅಂದ್ಹಾಗೆ, ಈ ರಾಘವೇಂದ್ರ ಸಿವಿ ಯಾರು ಅಂತ ಗೊತ್ತಾಗ್ಲಿಲ್ವಾ.! ಸದ್ಯಕ್ಕೆ ಇವರು, ನಮ್ಮದೇ ಅಂದ್ರೆ 'ಒನ್ ಇಂಡಿಯಾ ಕನ್ನಡ' ಮತ್ತು 'ಫಿಲ್ಮಿಬೀಟ್ ಕನ್ನಡ' ವೆಬ್ ಸೈಟ್ ನಲ್ಲಿ ಕೆಲಸ ಮಾಡ್ತಿದ್ದಾರೆ. ಹೆಚ್ಚು ಕಾಲ ಫೇಸ್ ಬುಕ್ ನಲ್ಲೇ ಕಾಲಕಳೆಯುವ ರಾಘು, 'ತೋಚಿದ್ದು ಗೀಚಿದ್ದು...' ಅಂತ ಹೊಸ ಹೊಸ ಸಾಲುಗಳನ್ನ ಬರೀತಾರೆ.

Raghavendra cv writes song for thayige thakka maga

ಕನ್ನಡದಲ್ಲಿ ಬರುವ ಹೊಸ ಹೊಸ ಚಿತ್ರಗೀತೆಗಳಿಗೆ ತಮ್ಮದೇ ಶೈಲಿಯಲ್ಲಿ ಸಾಹಿತ್ಯ ಬರೆದು ನೆಟ್ಟಿಗರ ಗಮನ ಸೆಳೆಯುತ್ತಾರೆ. ಈ ಮಧ್ಯೆ ಅಲ್ಲಿ ಇಲ್ಲಿ ಓಡಾಡುವಾಗ ತೋಚಿದ್ದನ್ನ ಕೂಡ ಫೇಸ್ ಬುಕ್ ನಲ್ಲಿ ಗೀಚುತ್ತಾರೆ. ಇವರ ಈ ಸಾಲುಗಳಿಗೆ ಹಲವರು ಅಭಿಮಾನಿಗಳು ಕೂಡ ಇದ್ದಾರೆ.

ಓದಿರೋದು ಡಿಪ್ಲೋಮಾ ಆದ್ರೂ, ಕೆಲಸ ಮಾಡ್ತಿರೋದು ಮಾಧ್ಯಮ ಲೋಕದಲ್ಲಿ. ಸಾಹಿತ್ಯದ ಮೇಲೆ ಹೆಚ್ಚು ಒಲವು ಹೊಂದಿರುವ ರಾಘವೇಂದ್ರ, ಜಯಂತ್ ಸರ್ ಅವರ ಅಪ್ಪಟ ಅಭಿಮಾನಿ ಮತ್ತು ಅನುಯಾಯಿ ಕೂಡ. ಇದೀಗ, ನೆಚ್ಚಿನ ಗುರುಗಳ ಆಶೀರ್ವಾದದಿಂದ 'ತಾಯಿಗೆ ತಕ್ಕ ಮಗ'ನ ಜೊತೆ ಸ್ಯಾಂಡಲ್ ವುಡ್ ನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ಹೆಜ್ಜೆ ನೂರಾಗಲಿ, ನೂರು ಸಾವಿರವಾಗಲಿ ಎಂದು ಹಾರೈಸೋಣ.

More from Filmibeat

English summary
Kannada actor ajay rao starrer 'thayige thakka maga' movie audio released. movie songs are get good response from music lovers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X