ಸರ್ಜಾ ಕುಟುಂಬಕ್ಕೆ ಮಗನ ಮದುವೆಯ ಕರೆಯೋಲೆ ನೀಡಿದ ರಾಘಣ್ಣ

ಡಾ ರಾಜ್ ಕುಟುಂಬದಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆ ಮಾಡಿದೆ. ರಾಘವೇಂದ್ರ ರಾಜ್ ಕುಮಾರ್ ಎರಡನೆ ಮಗ ಯುವರಾಜ್ ಕುಮಾರ್ ವಿವಾಹ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೆ ಮದುವೆ ಆಮಂತ್ರಣ ಪತ್ರಿಕೆ ಹಂಚುವ ಕಾರ್ಯದಲ್ಲಿ ರಾಜ್ ಫ್ಯಾಮಿಲಿ ಬ್ಯುಸಿಯಾಗಿದೆ.

ರಾಘವೇಂದ್ರ ರಾಜ್ ಕುಮಾರ್ ದಂಪತಿ ಮತ್ತು ವಿನಯ್ ರಾಜ್ ಕುಮಾರ್ ಚಿತ್ರರಂಗದ ಗಣ್ಯರಿಗೆ ಮದುವೆ ಮಮತೆಯ ಕರೆಯೋಲೆ ಮಾಡುತ್ತಿದ್ದಾರೆ. ಯುವರಾಜ್ ಕುಮಾರ್ ಮದುವೆ ಆಮಂತ್ರಣ ಚಿತ್ರರಂಗದವರಿಗೆ ಮಾತ್ರವಲ್ಲದೆ ರಾಜಕೀಯ ಗಣ್ಯರು, ಸ್ನೇಹಿತರು ಮತ್ತು ಸಂಬಂಧಿಕರರುಗೂ ಆಹ್ವಾನ ನೀಡುತಿದ್ದಾರೆ.

ಇದೆ ತಿಂಗಳು ನಡೆಯುವ ಯುವರಾಜ್ ಮತ್ತು ಶ್ರೀದೇವಿ ವಿವಾಹ ಉತ್ಸವಕ್ಕೆ ಈಗಾಗಲೆ ತಯಾರಿ ಜೋರಾಗಿದೆ. ಸೈಲೆಂಟ್ ಆಗಿ ಆಮಂತ್ರಣ ಪತ್ರಿಕೆ ಹಂಚುತ್ತಿರುವ ರಾಜ್ ಕುಟುಂಬ ಇತ್ತೀಚಿಗೆ ಸತೀಶ್ ನೀನಾಸಂ ಅವರನ್ನು ಆಹ್ವಾನ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈಗ ಸರ್ಜಾ ಕುಟುಂಬದವರಿಗೂ ಯುವರಾಜ್ ಕುಮಾರ್ ಮದುವೆ ಆಮಂತ್ರಣ ಸಿಕ್ಕಿದೆ. ಮುಂದೆ ಓದಿ..

ಸರ್ಜಾ ಮನೆಯಲ್ಲಿ ರಾಘಣ್ಣ ದಂಪತಿ

ಸರ್ಜಾ ಮನೆಯಲ್ಲಿ ರಾಘಣ್ಣ ದಂಪತಿ

ರಾಘವೇಂದ್ರ ರಾಜ್ ಕುಮಾರ್ ಮಗನ ಮದುವೆ ಸಂಭ್ರಮದಲ್ಲಿದ್ದಾರೆ. ಈಗಾಗಲೆ ಮದುವೆ ಆಮಂತ್ರಣ ಪತ್ರಿಕೆ ಹಂಚುವ ಕಾರ್ಯದಲ್ಲಿ ನಿರತರಾಗಿರುವ ರಾಘವೇಂದ್ರ ರಾಜ್ ಕುಮಾರ್ ಇತ್ತೀಚಿಗಷ್ಟೆ ನಟ ಧ್ರುವ ಸರ್ಜಾ ಮನೆಗೆ ಭೇಟಿ ನೀಡಿ ಯುವರಾಜ್ ಕುಮಾರ್ ಮದುವೆ ಆಮಂತ್ರಣ ನೀಡಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಜೊತೆಗೆ ಪತ್ನಿ ಮಂಗಳ ಕೂಡ ತೆರಳಿದ್ದಾರೆ. ನಟ ಧ್ರುವ ಸರ್ಜಾ ಮತ್ತು ಅರ್ಜುನ್ ಸರ್ಜಾ ತಾಯಿ ಲಕ್ಷ್ಮೀ ದೇವಿ ಅವರ ಜೊತೆ ಮಾತುಕತೆ ನಡೆಸಿ ಮದುವೆಗೆ ಆಮಂತ್ರಣ ನೀಡಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮೇ 25 ಮತ್ತು 26ರಂದು ನಡೆಯಲಿದೆ ಮದುವೆ

ಮೇ 25 ಮತ್ತು 26ರಂದು ನಡೆಯಲಿದೆ ಮದುವೆ

ರಾಘವೇಂದ್ರ ರಾಜ್ ಕುಮಾರ್ ಮಗ ಯುವರಾಜ್ ಕುಮಾರ್ ಹಸೆಮಣೆ ಏರುತ್ತಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿರೋದೆ. ಜೊತೆಗೆ ಆಮಂತ್ರಣ ಪತ್ರಿಕೆ ಕೂಡ ಸೈಲೆಂಟ್ ಆಗೆ ಗಣ್ಯರ ಮನೆ ಸೇರುತ್ತಿದೆ. ಆದ್ರೆ ಮದುವೆ ಯಾವತ್ತು? ಎಲ್ಲಿ ನಡೆಯುತ್ತೆ? ಎನ್ನುವ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಯುವ ರಾಜ್ ಕುಮಾರ್ ಮದುವೆ ಇದೇ ತಿಂಗಳು ಕೊನೆಯ ವಾರ ಮೇ 25 ಮತ್ತು 26ರಂದು ನಡೆಯಲಿದೆ.

ಮದುವೆಗೆ ಸಿದ್ಧವಾಗಿದೆ ಅರಮನೆ ಮೈದಾನ

ಮದುವೆಗೆ ಸಿದ್ಧವಾಗಿದೆ ಅರಮನೆ ಮೈದಾನ

ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಶಿವರಾಜ್ ಕುಮಾರ್ ಮಗಳ ಮದುವೆ ಕೂಡ ಅರಮನೆ ಮೈದಾನದಲ್ಲೇ ಅದ್ಧೂರಿಯಾಗಿ ನೆರವೇರಿತ್ತು. ಈಗ ರಾಘಣ್ಣನ ಮಗನ ಮದುವೆ ಕೂಡ ಅದೆ ಸ್ಥಳದಲ್ಲಿ ನಡೆಯುತ್ತಿದೆ. ಈಗಾಗಲೆ ಯುವ ರಾಜ್ ಕುಮಾರ್ ಮದುವೆಗೆ ಅರಮನೆ ಮೈದಾನ ಸಿದ್ಧವಾಗಿದೆ. ಮೇ 25 ಮತ್ತು 26 ಎರಡು ದಿನಗಳು ಅರಮನೆ ಮೈದಾನ ಯುವರಾಜ್ ಕುಮಾರ್ ಮದುವೆಯಿಂದ ಕಂಕೊಳಿಸಲಿದೆ.

ಮೇ 26 ಸಂಜೆ ನಡೆಯಲಿದೆ ಅದ್ಧೂರಿ ಆರತಕ್ಷತೆ

ಮೇ 26 ಸಂಜೆ ನಡೆಯಲಿದೆ ಅದ್ಧೂರಿ ಆರತಕ್ಷತೆ

ಮೇ 26ರ ಸಂಜೆ 6.30ರಿಂದ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಆರತಕ್ಷತೆಯಲ್ಲಿ ಚಿತ್ರರಂಗದ ಮತ್ತು ರಾಜಕೀಯ ಗಣ್ಯರು ಸುಂದರ ಮದುವೆ ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ. ಇನ್ನು ರಾಜ್ ಮೊಮ್ಮಗನ ಮದುವೆ ಅಂದ್ಮೇಲೆ ಬೇರೆ ಬೇರೆ ಭಾಷೆಯ ಸ್ಟಾರ್ ನಟರು ಸಹ ಭಾಗಿಯಾಗುವ ಸಾಧ್ಯತೆ ಇದೆ.

ಮೇ 18ರಿಂದ ಪ್ರಾರಂಭವಾಗಲಿದೆ ಶಾಸ್ತ್ರಗಳು

ಮೇ 18ರಿಂದ ಪ್ರಾರಂಭವಾಗಲಿದೆ ಶಾಸ್ತ್ರಗಳು

ಮದುವೆ ಸಂಭ್ರಮ ಅಂದ್ರೇನೆ ಶಾಸ್ತ್ರಗಳು ಗಮನ ಸೆಳೆಯುತ್ತವೆ. ತರಹೇವಾರಿ ಶಾಸ್ತ್ರಗಳು ನಡೆಸಲಾಗುತ್ತೆ. ಯುವರಾಜ್ ಕುಮಾರ್ ಕೂಡ ಶಾಸ್ತ್ರೋಕ್ತವಾಗಿ ಹಸೆಮಣೆ ಏರುತ್ತಿದ್ದಾರೆ. ಇದೆ ತಿಂಗಳು 18ರಿಂದನೆ ಶಾಸ್ತ್ರಗಳು ಪ್ರಾರಂಭವಾಗಲಿದೆ. ಮೊದಲು ಎಣ್ಣೆ ಶಾಸ್ತ್ರ ನಡೆಯಲಿದೆಯಂತೆ. ಯುವರಾಜ್ ಕುಮಾರ್ ಅವರ ದೊಡ್ಡಪ್ಪ ಶಿವರಾಜ್ ಕುಮಾರ್, ಚಿಕ್ಕಪ್ಪ ಪುನೀತ್ ರಾಜ್ ಕುಮಾರ್ ಮತ್ತು ಚಿಕ್ಕಮ್ಮನ ಮನೆಯಲ್ಲಿ ಎಣ್ಣೆ ಶಾಸ್ತ್ರ ನಡೆಯಲಿದೆ. ನಂತರ ಮೆಹಂದಿ ಶಾಸ್ತ್ರ ಸೇರಿದಂತೆ ಅನೇಕ ಶಾಸ್ತ್ರಗಳು ನಡೆಯಲಿದೆ.

ಸರಳವಾಗಿ ಮಿಂಚಲಿದ್ದಾರೆ ಯುವರಾಜ್ ಕುಮಾರ್

ಸರಳವಾಗಿ ಮಿಂಚಲಿದ್ದಾರೆ ಯುವರಾಜ್ ಕುಮಾರ್

ಮದುಮಗ ಯುವರಾಜ್ ಕುಮಾರ್ ಮದುವೆಯಲ್ಲಿ ಸರಳವಾಗಿ ಮಿಂಚಲಿದ್ದಾರಂತೆ. ಅದ್ಧೂರಿ ತನವಿಲ್ಲದೆ ದೇಸಿ ಕಾಸ್ಟ್ಯೂಮ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯುವ ರಾಜ್ ಕುಮಾರ್ ಸಾಂಪ್ರದಾಯಿಕ ಉಡುಗೆಯಾದ ಪಂಚೆ ಮತ್ತು ಜುಬ್ಬ ಧರಿಸಲಿದ್ದಾರಂತೆ. ಈಗಾಗಲೆ ಮದುವೆ ಕಾಸ್ಟ್ಯೂಮ್ ತಯಾರಿಯಲ್ಲಿ ಬ್ಯುಸಿಯಾಗಿದ್ದಾರಂತೆ ಯುವರಾಜ್ ಕುಮಾರ್.

More from Filmibeat

English summary
Kannada actor raghavendra Raj kumar and his wife mangala invited sarja family to their son's marriage. Yuva Rajkumar is all set to tie the knot with his fiancee Sridevi Bhyrappa on may 26th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X