For Quick Alerts
  ALLOW NOTIFICATIONS  
  For Daily Alerts

  ಗೌರಿ-ಗಣೇಶ ಹಬ್ಬಕ್ಕೆ ರಾಘಣ್ಣನ 'ಆಡಿಸಿದಾತ' ಚಿತ್ರದ ಟ್ರೈಲರ್

  |

  ರಾಘವೇಂದ್ರ ರಾಜ್ ಕುಮಾರ್ ಅಭಿನಯಿಸುತ್ತಿರುವ 25ನೇ ಚಿತ್ರದ ಟ್ರೈಲರ್ ಗೌರಿ ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆಯಾಗುತ್ತಿದೆ. ತ್ರಯಂಬಕ ಚಿತ್ರದ ಬಳಿಕ ರಾಘಣ್ಣ ನಟಿಸುತ್ತಿರುವ ಚಿತ್ರ ಇದಾಗಿದ್ದು, ಸಹಜವಾಗಿ ಕುತೂಹಲ ಮೂಡಿಸಿದೆ.

  Upendra ತೆಲುಗು, ತಮಿಳಿನಲ್ಲಿ ಹೆಚ್ಚಾಗಿ ಸಿನಿಮಾ ಮಾಡದಿರಲು ಇದೇ ಕಾರಣ

  ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಫಣೀಶ್ ಭಾರದ್ವಾಜ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ದುರ್ಗದ ಹುಲಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಹೆಚ್.ಹಾಲೇಶ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

  ಶಿವರಾಜ್ ಕುಮಾರ್ ಮಗಳಿಗೆ ಭಾವುಕ ಶುಭಾಶಯ ಹೇಳಿದ ರಾಘವೇಂದ್ರ ರಾಜ್‌ಕುಮಾರ್ಶಿವರಾಜ್ ಕುಮಾರ್ ಮಗಳಿಗೆ ಭಾವುಕ ಶುಭಾಶಯ ಹೇಳಿದ ರಾಘವೇಂದ್ರ ರಾಜ್‌ಕುಮಾರ್

  ಮೊದಲ ಹಂತದ ಟಾಕಿ ಪೋಷನ್ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯದಲ್ಲೇ ಎರಡನೇ ಹಂತದ ಶೂಟಿಂಗ್‌ನ್ನು ಬೆಂಗಳೂರಿನಲ್ಲಿ ಆರಂಭಿಸಲಿದೆ. ಈಗಾಗಲೇ ಎರಡು ಹಾಡುಗಳು ಚಿತ್ರೀಕರಣ ಸಹ ಮುಕ್ತಾಯವಾಗಿದೆ.

  ರಾಘವೇಂದ್ರ ರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಹಿರಿಯ ನಿರ್ದೇಶಕ ದೊರೆ ಭಗವಾನ್ ಸಹ ವಿಶೇಷ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ. ಇನ್ನುಳಿದಂತೆ ಗುರುದತ್, ಬಾಲರಾಜ್, ಸುಶ್ಮಿತ ದಾಮೋದರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

  ಮಣಿಕಾಂತ್ ಕದ್ರಿ ಸಂಗೀತ ಒಳಗೊಂಡಿರುವ ಈ ಚಿತ್ರಕ್ಕೆ ಆನಂದ್ ಇಳಯರಾಜ ಅವರ ಛಾಯಾಗ್ರಹಣವಿದೆ. ಹರೀಶ್ ಕೊಮ್ಮಿ (ಮಫ್ತಿ) ಸಂಕಲನ ಹಾಗೂ ಬಾಲ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ.

  English summary
  Actor Raghavendra Rajkumar is all set for his 25th film, which will be a suspense thriller. The teaser of 'Aadisidaata' directed by Phaneesh Bharadwaj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X