ಪರಮಾತ್ಮನ ಎಂಟ್ರಿಗೆ ರಾಘಣ್ಣ ಶಿಳ್ಳೆ, ಜೈಕಾರ: ಅಪ್ಪು ಡ್ಯಾನ್ಸ್ ನೋಡಿ ಮಂಗಳಕ್ಕ ಭಾವುಕ!

ಎಲ್ಲೆಡೆ 'ಲಕ್ಕಿಮ್ಯಾನ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ನಗರದ ನರ್ತಕಿ ಥಿಯೇಟರ್‌ನಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿತ್ತು. ರಾಘವೇಂದ್ರ ರಾಜ್‌ಕುಮಾರ್ ಪತ್ನಿ, ಮಕ್ಕಳ ಸಮೇತ ನರ್ತಕಿ ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಸಹೋದರನನ್ನು ತೆರೆಮೇಲೆ ಕಂಡು ರಾಘಣ್ಣ ಶಿಳ್ಳೆ ಹೊಡೆದು, ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಡ್ಯಾನ್ಸ್ ನೋಡಿ ರಾಘಣ್ಣ ಪತ್ನಿ ಮಂಗಳ ಕಣ್ಣೀರು ಹಾಕಿದ್ದಾರೆ.

ನಾಗೇಂದ್ರ ಪ್ರಸಾದ್ ನಿರ್ದೇಶನದ 'ಲಕ್ಕಿಮ್ಯಾನ್' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ದೇವರಾಗಿ ಕಾಣಿಸಿಕೊಂಡಿದ್ದಾರೆ. ಅಪ್ಪು ಎಂಟ್ರಿ ವೇಳೆ ಥಿಯೇಟರ್‌ಗಳಲ್ಲಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಅಪ್ಪುನ ನೋಡಿ ಕಣ್ತುಂಬಿಕೊಂಡು ಖುಷಿಪಡುತ್ತಿರುವ ಪ್ರೇಕ್ಷಕರು ಮತ್ತೊಂದು ಕಡೆ ಅಪ್ಪು ಇಲ್ಲ ಎನ್ನುವ ನೋವಿನಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಸಿನಿಮಾ ನೋಡಿ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ. ಎಲ್ಲಾ ವಿಭಾಗಗಳಲ್ಲೂ ಫಸ್ಟ್ ಕ್ಲಾಸ್ ಎನ್ನಿಸಿಕೊಂಡಿರುವ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.

Raghavendra Rajkumar And Family Watched Puneeth Rajkumar Starrer Lucky Man Movie

ನರ್ತಕಿ ಥಿಯೇಟರ್‌ನಲ್ಲಿ 'ಲಕ್ಕಿಮ್ಯಾನ್' ಸಿನಿಮಾ ರಿಲೀಸ್ ಸೆಲೆಬ್ರೇಷನ್ ಜೋರಾಗಿದೆ. 10 ತಿಂಗಳಿನಿಂದ ಸಿನಿಮಾ ಪ್ರದರ್ಶನ ನಿಲ್ಲಿಸಿದ ನರ್ತಕಿ ಇಂದು ಓಪನ್ ಆಗಿತ್ತು. ಇದು ಪುನೀತ್ ರಾಜ್‌ಕುಮಾರ್ ಲಕ್ಕಿ ಥಿಯೇಟರ್. ಒಂದು ದಿನ ಮೊದಲೇ ಅಪ್ಪು ಭಾವಚಿತ್ರ ಇಟ್ಟು ಚಿತ್ರಮಂದಿರದಲ್ಲಿ ಪೂಜೆ ನೆರವೇರಿಸಲಾಗಿತ್ತು. ತೆರೆಮೇಲೆ ಅಪ್ಪು ಎಂಟ್ರಿ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದರು. ಪುನೀತ್ ರಾಜ್‌ಕುಮಾರ್ ಎಂಟ್ರಿ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದ್ದಾರೆ. 'ಬಾರೋ ರಾಜಾ' ಸಾಂಗ್‌ನ ಎಲ್ಲರೂ ಎದ್ದು ನಿಂತು ನೋಡಿ ಖುಷಿಪಟ್ಟರು. ರಾಘಣ್ಣ ಪುಟ್ಟ ಮಗುವಿನಂತೆ ಶಿಳ್ಳೆ ಚಪ್ಪಾಳೆ ಹೊಡೆದು ಅಪ್ಪು ಅಪ್ಪು ಎಂದು ಕೂಗಿ ಸಂಭ್ರಮಿಸಿದರು. ಪತ್ನಿ ಮಂಗಳ ಹಾಗೂ ಸೊಸೆ ಶ್ರೀದೇವಿ ಸಿನಿಮಾ ನೋಡಿ ಭಾವುಕರಾದರು.

ನಾಟ್ಯಲೋಕ ಡ್ಯಾನ್ಸ್ ತಂಡದ ಮಕ್ಕಳು ನರ್ತಕಿ ಚಿತ್ರಮಂದಿರದ ಆವರಣದಲ್ಲಿ ಡ್ಯಾನ್ಸ್ ಮಾಡಿದರು. ಪುನೀತ್‌ ರಾಜ್‌ಕುಮಾರ್ ನಾಟ್ಯನಮನ ಸಲ್ಲಿಸಿದರು. ನಿನ್ನೆ ರಾತ್ರಿ ಪೇಯ್ಡ್ ಪ್ರೀಮಿಯರ್ ಶೋಗಳಿಗೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. 'ಲಕ್ಕಿಮ್ಯಾನ್' ಸಿನಿಮಾ ನೋಡಿದ ಪ್ರೇಕ್ಷಕರು ಕಣ್ಣೀರು ಹಾಕಿದರು. ಥಿಯೇಟರ್‌ನಿಂದ ಭಾವುಕರಾಗಿ ಹೊರಬಂದ ಸಾಕಷ್ಟು ಜನ ಅಭಿಮಾನಿಗಳಿಗೆ ಅಪ್ಪು ಇನ್ನಿಲ್ಲ ಅನ್ನುವ ನೋವು ಕಾಡಿತ್ತು. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹಿರೋ ಆಗಿ ನಟಿಸಿದ್ದು, ರಾತ್ರಿ ಜೆಪಿ ನಗರದ ಸಿದ್ದಲಿಂಗೇಶ್ವರ ಥಿಯೇಟರ್‌ನಲ್ಲಿ ಪ್ರೇಕ್ಷಕರ ಜೊತೆ ಸಿನಿಮಾ ನೋಡಿ ಸಂಭ್ರಮಿಸಿದ್ದರು.

Raghavendra Rajkumar And Family Watched Puneeth Rajkumar Starrer Lucky Man Movie

400ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಲಕ್ಕಿಮ್ಯಾನ್' ಸಿನಿಮಾ ರಿಲೀಸ್ ಆಗಿದೆ. ಜಾಕ್‌ ಮಂಜು ಚಿತ್ರದ ವಿತರಣೆ ಹಕ್ಕುಗಳನ್ನು ಖರೀದಿಸಿದ್ದು, ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಿದ್ದಾರೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಆಗಿರುವ ಚಿತ್ರದಲ್ಲಿ ಒಂದೊಳ್ಳೇ ಮೆಸೇಜ್ ಕೂಡ ಇದೆ. ಪುನೀತ್ ರಾಜ್‌ಕುಮಾರ್‌ - ಸಾಧುಕೋಕಿಲ ಜೊತೆ ಸೇರಿ ಪ್ರೇಕ್ಷಕರನ್ನು ನಗಿಸಿದ್ದಾರೆ. ಪ್ರೇಕ್ಷಕರು ಅಪ್ಪು ತೆರೆಮೇಲೆ ಇರುವ ಅಷ್ಟು ಹೊತ್ತು ಥಿಯೇಟರ್‌ನಿಂದ ಹೊರಗೆ ಬರೋದೇ ಇಲ್ಲ. ಕೊನೆ ಸಿನಿಮಾದಲ್ಲಿ ನೆಚ್ಚಿನ ನಟನನ್ನು ಕಣ್ತಿಂಬಿಕೊಂಡು ಖುಷಿಪಟ್ಟಿದ್ದಾರೆ. ಮತ್ತೆ ಮತ್ತೆ ಸಿನಿಮಾ ನೋಡಲು ಮನಸ್ಸು ಮಾಡಿದ್ದಾರೆ.

More from Filmibeat

English summary
Raghavendra Rajkumar And Family Watched Puneeth Rajkumar Starrer Lucky Man Movie. Fans Massive Celebration At KG Road Narthaki Theatre. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X