'ಚಿಲ್ಲಂ' ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದ ರಾಘವೇಂದ್ರ ರಾಜ್ ಕುಮಾರ್

By Naveen

Recommended Video

ಇದೇನಿದು ರಾಘವೇಂದ್ರ ರಾಜ್‌ಕುಮಾರ್ ಹೀಗ್ ಹೇಳಿಬಿಟ್ರು..!! | Filmibeat Kannada

ನಟ ರಾಘವೇಂದ್ರ ರಾಜ್ ಕುಮಾರ್ 'ಚಿಲ್ಲಂ' ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹೆಚ್ಚಾಗಿತ್ತು. ಈ ಚಿತ್ರದ ಮೂಲಕ 'ಸ್ಪಸ್ತಿಕ್' ಸ್ಟಾರ್ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈಗ ಈ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ನಟಿಸುತ್ತಿಲ್ಲವಂತೆ.

'ಚಿಲ್ಲಂ' ಚಿತ್ರದಲ್ಲಿ ನಾನು ಅಭಿನಯಿಸುತ್ತಿಲ್ಲ ಎಂದು ನಟ ರಾಘವೇಂದ್ರ ರಾಜ್ ಕುಮಾರ್ ಅವರೇ ತಿಳಿಸಿದ್ದಾರೆ. ಈ ಮೂಲಕ ಚಿತ್ರದ ಬಗ್ಗೆ ಇದ್ದ ಎಲ್ಲ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದಾರೆ. ಅಂದಹಾಗೆ, 'ಚಿಲ್ಲಂ' ನಟ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಮೂರನೇ ಸಿನಿಮಾವಾಗಿದೆ.

'ಚಿಲ್ಲಂ' ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ನಟಿಸುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ಆಗುವಂತಿಲ್ಲ. ಏಕೆಂದರೆ, ರಾಷ್ಟ್ರ ಪ್ರಶಸ್ತಿ ವಿಜೇತ ನಿಖಿಲ್ ಮಂಜು ನಿರ್ದೇಶನದ 'ಅಮ್ಮನ ಮನೆ' ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ನಟಿಸುತ್ತಿದ್ದಾರೆ.

Raghavendra Rajkumar clarifies that he is not acting in Chillam movie

'ಅಮ್ಮನ ಮನೆ' ಸಿನಿಮಾದ ಮುಹೂರ್ತ ಆಗಸ್ಟ್ 15 ರಂದು ರಾಘವೇಂದ್ರ ರಾಜ್ ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ಲಾಂಚ್ ಆಗಲಿದೆಯಂತೆ. ಇದೊಂದು ಕೌಟುಂಬಿಕ ಸಿನಿಮಾವಾಗಿದ್ದು, ಕೆಲಸ ಮತ್ತು ಸಂಸಾರ ಎರಡು ನಿಭಾಯಿಸುವ ಗೃಹಸ್ಥನ ಪಾತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Kannada actor Raghavendra Rajkumar clarifies that he is not acting in 'Chillam' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X