ಅಪ್ಪು ಹೆಸರು ಟ್ಯಾಟೂ ಹಾಕಿಸಿಕೊಂಡ ರಾಘಣ್ಣ: ಟೊಟೊ, ನುಕ್ಕಿ ಅಂದ್ರೆ ಏನು?
ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವಿನಿಂದ ಅಭಿಮಾನಿಗಳು ಇನ್ನು ಹೊರಬಂದಿಲ್ಲ. ಇನ್ನು ದೊಡ್ಮನೆ ಸದಸ್ಯರಿಗೆ ಆ ನೋವು ನೂರು ಪಟ್ಟು ಹೆಚ್ಚಿದೆ. ರಾಘಣ್ಣ ಸಹೋದರನ ನೆನಪಿನಲ್ಲೇ ದಿನದೂಡುತ್ತಿದ್ದಾರೆ. ಇದೀಗ ಸಹೋದರನ ಹೆಸರನ್ನು ಎದೆಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಪ್ಪು ಜೊತೆಗೆ ಅವರ ಮಕ್ಕಳಾದ ಧೃತಿ, ವಂದಿತಾ ಮುದ್ದಿನ ಹೆಸರನ್ನು ಕೂಡ ಎದೆ ಮೇಲೆ ಅಚ್ಚೆ ಹಾಕಿಸಿಕೊಂಡಿದ್ದಾರೆ.
ಅಪ್ಪು ಅಗಲಿಕೆಯ ಆಘಾತ ಹೆಚ್ಚು ಆಗಿದ್ದು ರಾಘಣ್ಣನಿಗೆ. ಪ್ರತಿಬಾರಿ ಸಹೋದರನ ಬಗ್ಗೆ ಮಾತನಾಡುವಾಗ ರಾಘಣ್ಣ ಭಾವುಕರಾಗುತ್ತಾರೆ. ಪ್ರತಿದಿನ ಅಪ್ಪು ಫೋಟೊ ಇರುವ ಬ್ಯಾಡ್ಜ್ ಅನ್ನು ರಾಘಣ್ಣ ಧರಿಸುತ್ತಾ ಬರುತ್ತಿದ್ದಾರೆ. ಇದೀಗ ತಮ್ಮ ಎದೆ ಮೇಲೆ ಅಪ್ಪು ಟ್ಯಾಟೂ ಹಾಕಿಸಿಕೊಂಡು ಸಹೋದರನನ್ನು ತಮ್ಮ ಎದೆಯಲ್ಲಿ ಇಟ್ಟುಕೊಂಡಿದ್ದಾರೆ. 2021, ಅಕ್ಟೋಬರ್ 29ರಂದು ಅಪ್ಪು ಹೃದಯಾಘಾತದಿಂದ ಕೊನೆಯುಸರೆಳೆದಿದ್ದರು.

ಅಣ್ಣಾವ್ರಿಗೆ ಮೂವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಸೇರಿ 5 ಜನ ಮಕ್ಕಳು. ಅಪ್ಪು ಬಹಳ ಚಿಕ್ಕವರು. ಶಿವಣ್ಣ, ರಾಘಣ್ಣ ಎಲ್ಲರೂ ಅವರನ್ನು ಎತ್ತಿ ಆಡಿಸಿ ಬೆಳೆಸಿದ್ದರು. ಚಿಕ್ಕಂದಿನಲ್ಲೇ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಣ್ಣಾವ್ರ ನಂತರ ದೊಡ್ಮನೆ ಮತ್ತೊಬ್ಬ ಸ್ಟಾರ್ ಅನಿಸಿಕೊಂಡಿದ್ದರು. ಸಹೋದರನ ಬೆಳವಣಿಗೆ ನೋಡಿ ರಾಘಣ್ಣ ಖುಷಿ ಪಡುತ್ತಿದ್ದರು. ನನಗೆ ಮನೆ ಕಟ್ಟಿಸಿಕೊಟ್ಟಿದ್ದು ಕೂಡ ನಮ್ಮ ಅಪ್ಪು ಎಂದು ಇತ್ತೀಚೆಗೆ ಹೇಳಿಕೊಂಡಿದ್ದರು.


Click it and Unblock the Notifications











