ಆ ಚೇರ್ ಕೊಟ್ಟುಬಿಡ್ರಯ್ಯಾ ಸಾಕು.. 'ಲಕ್ಕಿಮ್ಯಾನ್' ಸಿನ್ಮಾ ನಾನು ಹೋದ ಮೇಲೂ ನನ್ನ ಜೊತೆ ಇರುತ್ತೆ: ರಾಘಣ್ಣ

ರಾಘವೇಂದ್ರ ರಾಜ್‌ಕುಮಾರ್‌ 'ಲಕ್ಕಿಮ್ಯಾನ್' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ನಗರದ ನರ್ತಕಿ ಥಿಯೇಟರ್‌ನಲ್ಲಿ ಇಡೀ ಫ್ಯಾಮಿಲಿ ಕೂತು ಸಿನಿಮಾ ನೋಡಿದರು. ರಾಘಣ್ಣ ಪುಟ್ಟ ಮಕ್ಕಳ ರೀತಿ ತೆರೆಮೇಲೆ ಸಹೋದರನನ್ನು ನೋಡಿ ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು, ಕೇಕೆ ಹಾಕಿ ಎಂಜಾಯ್ ಮಾಡಿದರು. ಪತ್ನಿ ಮಂಗಳ, ಪುತ್ರ ಯುವರಾಜ್‌ ಕುಮಾರ್, ಸೊಸೆ ಶ್ರೀದೇವಿ ಸಿನಿಮಾ ನೋಡಿ ಭಾವುಕರಾದರು. ಸಿನಿಮಾ ನೋಡಿ ಮಾತನಾಡಿದ್ದ ರಾಘಣ್ಣ, 'ಚಿತ್ರದಲ್ಲಿ ಅಪ್ಪು ಕೂತಿದ್ದ ಆ ಚೇರ್ ಕೊಟ್ಟುಬಿಡ್ರಯ್ಯಾ, ದಿನ ಪೂಜೆ ಮಾಡ್ತೀನಿ' ಎಂದರು.

ಪುನೀತ್ ರಾಜ್‌ಕುಮಾರ್ ನಟನೆಯ ಎಲ್ಲಾ ಸಿನಿಮಾಗಳನ್ನು ರಾಘವೇಂದ್ರ ರಾಜ್‌ಕುಮಾರ್ ಥಿಯೇಟರ್‌ನಲ್ಲಿ ನೋಡುತ್ತಾ ಬಂದಿದ್ದಾರೆ. 'ಜೇಮ್ಸ್' ಚಿತ್ರವನ್ನು ಕೂಡ ಫ್ಯಾಮಿಲಿ ಸಮೇತ ಮಾಗಡಿ ರಸ್ತೆಯ 'ವೀರೇಶ್' ಥಿಯೇಟರ್‌ನಲ್ಲಿ ವೀಕ್ಷಿಸಿದ್ದರು. ಇವತ್ತು(ಸೆಪ್ಟೆಂಬರ್ 9) 'ಲಕ್ಕಿಮ್ಯಾನ್' ಚಿತ್ರದಲ್ಲಿ ಅಪ್ಪುನ ಕಣ್ತುಂಬಿಕೊಂಡರು. ಮೊದಲೇ ನಿರ್ಧರಿಸಿದಂತೆ ಹೆಚ್ಚು ಭಾವುಕರಾಗದೇ ಸಿನಿಮಾ ನೋಡಿ ಖುಷಿಪಟ್ಟರು. ಆದರೆ ರಾಘಣ್ಣನ ಮಾತುಗಳಲ್ಲಿ ನೋವು ತುಂಬಿತ್ತು. ಇನ್ನು ಮೂರ್ನಾಲ್ಕು ಬಾರಿ ಥಿಯೇಟರ್‌ನಲ್ಲಿ ಸಿನಿಮಾ ನೋಡುವುದಾಗಿ ಹೇಳಿದ್ದಾರೆ.

ರಾಜ್ಯಾದ್ಯಂತ ಥಿಯೇಟರ್‌ಗಳಲ್ಲಿ 'ಲಕ್ಕಿಮ್ಯಾನ್' ಕರಾಮತ್ತು ನಡೀತಿದೆ. ಎಲ್ಲಾಕಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಪ್ರೇಕ್ಷಕರು ಅಪ್ಪುನ ಕೊನೆ ಸಿನಿಮಾದಲ್ಲಿ ಕಣ್ತುಂಬಿಕೊಂಡು ಭಾವುಕರಾಗುತ್ತಿದ್ದಾರೆ. ಸಿನಿಮಾ ನೋಡಿ ಅಪ್ಪು ನೆನೆದು ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡು ಥಿಯೇಟರ್‌ಗಳಿಂದ ಹೊರ ಬರುತ್ತಿದ್ದಾರೆ.

ಈಗ ನಮ್ಮನ್ನು ದೇವರ ಮನೆಯವವ್ರು ಅಂತಾರೆ

ಈಗ ನಮ್ಮನ್ನು ದೇವರ ಮನೆಯವವ್ರು ಅಂತಾರೆ

"ಇದನ್ನು ನನ್ನ ತಮ್ಮನ ಸಿನಿಮಾ ಎಂದು ಹೇಳುವುದಕ್ಕಿಂತ ಒಂದೊಳ್ಳೆ ಸಿನಿಮಾದಲ್ಲಿ ನನ್ನ ತಮ್ಮ ನಟಿಸಿದ್ದಾನೆ ಎಂದು ಹೇಳ್ತೀನಿ. ಸಿನಿಮಾ ಬಹಳ ಚೆನ್ನಾಗಿದೆ. ಅದರಲ್ಲಿ ನನ್ನ ತಮ್ಮನೂ ಇದ್ದಾನೆ ಎಂದು ಹೇಳಲು ಇಷ್ಟಪಡ್ತೀನಿ. ನಮ್ಮ ತಂದೆ ಇದ್ದಾಗ ನಮ್ಮನ್ನು ದೊಡ್ಮನೆ ಎಂದು ಕರೆದರು. ಇವನು ಬಂದಮೇಲೆ ನಮ್ಮನ್ನು ದೇವರ ಮನೆಯವರು ಎಂದು ಕರೀತಾರೆ. ಇನ್ನೇನು ಕೊಟ್ಟುಬಿಟ್ಟು ಹೋಗಿದ್ದಾನೆ ಅವನು. ಒಬ್ಬ ಪ್ರೇಕ್ಷಕ ಇದ್ದಾನೆ ಒಳಗಡೆ. ಅಣ್ಣ ಆಗಿದ್ದೀನಿ. ನನಗೆ ಮಗ ಆಗಿದ್ದ ಅವನು. ನಿಜಕ್ಕೂ ಕಷ್ಟ ಆಗುತ್ತೆ. ಆದರೂ ಇವನ ಜೊತೆ ನಾನು ಬದುಕ್ಕಿದ್ದೆ, ಇವನಿಗೆ ಅಣ್ಣನಾಗಿದ್ದೆ, ಇವನು ನನ್ನ ಕಾಲಿಗೆ ನಮಸ್ಕಾರ ಮಾಡ್ತಿದ್ದ."

ಅಪ್ಪುನ ಪ್ರೀತಿಸೋದಲ್ಲ, ಪೂಜಿಸಬೇಕು

ಅಪ್ಪುನ ಪ್ರೀತಿಸೋದಲ್ಲ, ಪೂಜಿಸಬೇಕು

"ನಾವು ಇನ್ನು ಮೇಲೆ ಅವನನ್ನು ಪೂಜಿಸಬೇಕು. ಅವನನ್ನು ಪ್ರೀತಿಸೋದಲ್ಲ, ಇನ್ನು ಮುಂದೆ ಪೂಜಿಸಬೇಕು. ನೋ ಮೋರ್ ಎಮೋಷನ್, ಒನ್ಲಿ ಡಿವೋಷನ್. ಇನ್ನು ಅವನನ್ನು ಸೆಲೆಬ್ರೇಟ್ ಮಾಡಬೇಕು. ಸಾಕಷ್ಟು ಒಳ್ಳೆ ಕೆಲಸಗಳನ್ನು ಬಿಟ್ಟು ಹೋಗಿದ್ದಾನೆ. ಅವನು ಒಳ್ಳೆ ಜಾಗದಲ್ಲಿ ಇದ್ದಾನೆ. ಅವನು ಮನುಷ್ಯ ಅಲ್ಲ, ದೇವರು. ಅವನು ದೇವರ ಜೊತೆ ಇದ್ದಾನೋ ಇಲ್ಲವೋ ದೇವರು ಅವನ ಜೊತೆ ಇದ್ದಾನೆ. ಪುನೀತ್ ದೇವರಾಗಿದ್ದಾನೆ. ಅವನನ್ನು ಪೂಜಿಸೋಣ. ಸಾಕಷ್ಟು ಬಿಟ್ಟು ಹೋಗಿದ್ದಾನೆ. ಇನ್ನು ಒಂದು ಸಿನಿಮಾ ಬಿಟ್ಟು ಹೋಗಿದ್ದಾನೆ. ಹೋಗಿ ಒಂದು ವರ್ಷ ಆದರೂ ಮೂರ್ಮೂರು ಸಿನಿಮಾ ಕೊಟ್ಟಿದ್ದಾನೆ. ನಮ್ಮ ಜೊತೆ ಇದ್ದೀನಿ ಎಂದು ಹೇಳಿ ಹೋಗಿದ್ದಾನೆ. ಈ ಪಾತ್ರ ದೇವರು ಅವನಿಗೆ ಹೇಗೆ ಕೊಟ್ಟಿದ್ದಾನೆ ನೋಡಿ."

ಅವನಿಗೆ ದೇವರು ಒಂದು ಚಾನ್ಸ್ ಕೊಡಬಾರದಿತ್ತಾ?

ಅವನಿಗೆ ದೇವರು ಒಂದು ಚಾನ್ಸ್ ಕೊಡಬಾರದಿತ್ತಾ?

"ಸಿನಿಮಾ ನೋಡಿದಾಗ ಅಯ್ಯೋ ಒಂದು ಛಾನ್ಸ್ ಅವನಿಗಾಗಿ ನೀನು ಕೊಡಬಾರದಿತ್ತಾ ಅಂತ ದೇವರನ್ನು ನಾನು ಕೇಳಬೇಕು ಎಂದುಕೊಂಡೆ. ಒಂದು ಛಾನ್ಸ್ ಅವನಿಗೆ ಕೊಡಬಹುದಿತ್ತಲ್ಲ. ಈ ಸಿನಿಮಾ ನಾನು ಇರುವವರೆಗೂ ನನ್ನ ಜೊತೆ ಇರುತ್ತೆ. ನಾನೂ ಹೋದ ಮೇಲೂ ಇರುತ್ತೆ. ಅವನ ನೆನಪುಗಳನ್ನು ನನ್ನಿಂದ ದೇವರಿಂದ ಕಿತ್ತುಕೊಳ್ಳೋಕೆ ಆಗೊಲ್ಲ. ಅವನನ್ನು ಎಲ್ಲರೂ ದೇವರು ಮಾಡಿದ್ದೀವಿ. ದೇವರು ನನ್ನ ಜೊತೆ ಇರು ಎಂದು ಕರೆದುಕೊಂಡಿದ್ದಾನೆ. ಡಾರ್ಲಿಂಗ್ ಕೃಷ್ಣ ನಮ್ಮ ಸ್ನೇಹಿತ. ನಾನು, ಅಪ್ಪು, ಕೃಷ್ಣ ಒಂದೇ ಜಿಮ್‌ನಲ್ಲಿ ವರ್ಕೌಟ್‌ ಮಾಡ್ತಿದ್ವಿ. ಅವರು ಬಹಳ ಚೆನ್ನಾಗಿ ನಟಿಸಿದ್ದಾರೆ. ಅಪ್ಪು ಕೊನೆ ಸಿನಿಮಾಗಳು ಇಷ್ಟು ಚೆನ್ನಾಗಿದೆ ಎಂದು ಒಬ್ಬ ಪ್ರೇಕ್ಷಕನಾಗಿ ಹೇಳಲು ಇಷ್ಟವಾಗುತ್ತದೆ."

ನಮ್ಮ ತಂದೆ ತಾಯಿ ಜೊತೆ ಇದ್ದಾನೆ ಅಪ್ಪು

ನಮ್ಮ ತಂದೆ ತಾಯಿ ಜೊತೆ ಇದ್ದಾನೆ ಅಪ್ಪು

"ಅಪ್ಪು ನೀವು ಎಲ್ಲೂ ಹೋಗಿಲ್ಲ. ಅಭಿಮಾನಿಗಳ ಎದೆಯಲ್ಲಿ ಇದ್ದೀರಾ. ನನ್ನ ಎದೆ ಬಗೆದರೂ ನೋಡಿದರು ಇದ್ದೀರಾ ನೀವು. ಸಿನಿಮಾ ಚೆನ್ನಾಗಿದೆ. ಇಂತಹ ಅವಕಾಶ ಸಿಗಲ್ಲ. ಅಪ್ಪಿಕೊಂಡು, ತಬ್ಬಿಕೊಂಡು ನೋಡಿ. ಕಣ್ಣಲ್ಲಿ ಕಣ್ಣಿಟ್ಟು ನೋಡಿ. ನಾನೂ ನೊಂದುಕೊಳ್ಳಬಾರದು ಎಂದು ನಿರ್ಧರಿಸಿ ಬಂದಿದ್ದೆ. ಅಭಿಮಾನಿಗಳನ್ನು ನೋಯಿಸಬಾರದು ಎಂದು. ಗಣೇಶನ ಜೊತೆ ಬರ್ತಿದ್ದಾನೆ. ಎನ್ನೇನು ಬೇಕು. ನಾನು ಅಪ್ಪು ಸಿನಿಮಾದಿಂದಲೂ ಅವನ ಜೊತೆ ಸಿನಿಮಾ ನೋಡಲು ಬಂದಿದ್ದೀನಿ. ಅವನು ನನ್ನನ್ನು ಕರೆದುಕೊಂಡಿದ್ದ ಬಂದಿದ್ದಾನೆ. ಅವನು ಎಲ್ಲೂ ಹೋಗಿಲ್ಲ, ನಮ್ಮ ತಂದೆ ತಾಯಿ ಜೊತೆ ಇದ್ದಾನೆ ಅವನು. ಸಿನಿಮಾ ನೋಡಿದ್ಮೇಲೆ ಅಪ್ಪು ಕೂತಿದ್ದ ಆ ಚೇರ್ ಕೊಟ್ಟುಬಿಡ್ರಯ್ಯಾ, ಅದನ್ನು ಪೂಜೆ ಮಾಡ್ತೀನಿ ಎಂದು ಟೀಂನ ಕೇಳ್ಬೇಕು ಎಂದುಕೊಂಡಿದ್ದೇನೆ"

More from Filmibeat

English summary
Raghavendra Rajkumar Reaction after watching Puneeth Rajkumar Starrer Luckyman movie. Raghavendra Rajkumar Becomes Emotional While Speaking About Luckyman movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X