twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ ಕುಮಾರ್ ಚಿತ್ರಗಳ ಹೆಸರನ್ನು ಮರುಬಳಸದಂತೆ ರಾಘಣ್ಣ ಮನವಿ

    By ಶಶಿಕರ ಪಾತೂರು
    |

    Recommended Video

    ಡಾ.ರಾಜ್ ಕುಮಾರ್ ಚಿತ್ರದ ಹೆಸರನ್ನ ಬಳಸಬೇಡಿ..! | FILMIBEAT KANNADA

    "ಅಪ್ಪಾಜಿಯವರು ಯಾವಾಗಲೂ ಅಭಿಮಾನಿಗೆ ಪ್ರಾಮುಖ್ಯತೆ ಕೊಟ್ಟಿದ್ದರು. ಇಂದು ಅವರ ಹೆಸರಿನಲ್ಲೇ ಬದುಕುತ್ತಿರುವ ನಾವು ಕೂಡ ಅವರ ಅಭಿಮಾನಿಗಳ ಮಾತಿಗೆ ಬೆಲೆ ನೀಡಲೇಬೇಕಾಗಿದೆ. ಹಾಗಾಗಿ ಅವರ ಚಿತ್ರಗಳ ಹೆಸರನ್ನು ಈಗ ಬರುವ ಹೊಸ ಚಿತ್ರಗಳು ಮರುಬಳಕೆ ಮಾಡದಂತಹ ನಿಯಮ ತರಲು ವಾಣಿಜ್ಯ ಮಂಡಳಿಗೆ ಮನವಿ ಮಾಡಲಿದ್ದೇವೆ'' ಎಂದಿದ್ದಾರೆ ರಾಘವೇಂದ್ರ ರಾಜಕುಮಾರ್.‌

    ರಾಜಕುಮಾರ್ ಅವರಿಗೆ ಅಭಿಮಾನಿಗಳು ಹೇಗೆ ದೇವರೋ, ಅಭಿಮಾನಿಗಳಿಗೆ ಅಣ್ಣಾವ್ರು ಕೂಡ ದೇವರೇ. ಅದರಲ್ಲೂ ಅವರು ಭೌತಿಕವಾಗಿ ನಮ್ಮೊಂದಿಗೆ ಇರದ ಈ ದಿನಗಳಲ್ಲಿ ಅವರ ಚಿತ್ರಗಳ ಮೂಲಕ ಮತ್ತು ಅಭಿಮಾನಿಗಳ ಮೂಲಕವೇ ಇಂದಿಗೂ ಜೀವಂತವಾಗಿದ್ದಾರೆ.

    ಇಂಥ ಸಂದರ್ಭದಲ್ಲಿ ಅವರ ಯಶಸ್ವಿ ಚಿತ್ರಗಳ ಹೆಸರುಗಳನ್ನು ಇಂದು ಹೊಸಬರ ಚಿತ್ರಗಳಿಗೆ, ಯುವತಾರೆಯರ ಚಿತ್ರಗಳಿಗೆ ಕೇವಲ ಸುಲಭದ ಪ್ರಚಾರದ ದೃಷ್ಟಿಯಿಂದಲೋ ಅಥವಾ ಅಭಿಮಾನದಿಂದಲೋ ಇಡಲಾಗುತ್ತಿದೆ. ಆದರೆ ಅಣ್ಣಾವ್ರ ಅಭಿಮಾನಿ ಪ್ರೇಕ್ಷಕರಿಗೆ ಇದರಿಂದ ನೋವಾಗುತ್ತಿದೆ.

    ಉದಾಹರಣೆಗೆ ಇದುವರೆಗೆ ಗೂಗಲ್ ನಲ್ಲಿ ಅಣ್ಣಾವ್ರ ಸಿನಿಮಾ ಹೆಸರುಗಳನ್ನು ಹುಡುಕುತ್ತಿದ್ದಂತೆ ಹಳೆಯ ವರ್ಲ್ಡ್ ಕ್ಲಾಸ್ ಚಿತ್ರಗಳು ಪ್ರತ್ಯಕ್ಷವಾಗುತ್ತಿದ್ದವು. ಆದರೆ ಹೊಸಬರು ತಮ್ಮ ಚಿತ್ರಗಳಿಗೆ ಅಂಥ ಹೆಸರುಗಳನ್ನು ಇಡುವುದರಿಂದ ಆ ಚಿತ್ರದ ಮೌಲ್ಯಗಳಿಗೆ ಕುಂದಾಗಿದೆ. ಮುಂದೆ ಓದಿರಿ...

    ರಾಘಣ್ಣ ಬಳಿ ಅಭಿಮಾನಿಗಳ ಮನವಿ

    ರಾಘಣ್ಣ ಬಳಿ ಅಭಿಮಾನಿಗಳ ಮನವಿ

    ಇಂದು ಗೂಗಲ್ ನಲ್ಲಿ 'ಶ್ರೀನಿವಾಸ ಕಲ್ಯಾಣ' ಎಂದು ಸರ್ಚ್ ಕೊಟ್ಟರೆ ಅಲ್ಲಿ ಬೇರೆಯೇ ಲವ್ ಕಾಮಿಡಿ ಸಿನಿಮಾ ಕಾಣುತ್ತದೆ. ಆಗ ಅಣ್ಣಾವ್ರ ಭಕ್ತಿ ಪ್ರಧಾನ ಚಿತ್ರದ ವೀಕ್ಷಕರಿಗೆ ನೋವಾಗುತ್ತದೆ. ಅದೇ ರೀತಿ ಇತ್ತೀಚೆಗೆ 'ಎರಡು ಕನಸು', 'ತಾಯಿಗೆ ತಕ್ಕ ಮಗ' ಎನ್ನುವ ಚಿತ್ರಗಳ ಶೀರ್ಷಿಕೆ ಹುಡುಕಿದರೆ ಇಂದಿನ ಹೊಸ ಚಿತ್ರಗಳೇ ಮೊದಲು ಗೋಚರಿಸುತ್ತವೆ. ಇವು ಹಳೆಯ ಚಿತ್ರಗಳಿಗೆ ಮಾಡಲಾಗುತ್ತಿರುವ ಅಪಚಾರ ಎಂದು ಅಭಿಮಾನಿಗಳು ರಾಘವೇಂದ್ರ ರಾಜ್ ಕುಮಾರ್ ಅವರಲ್ಲಿ ಮನವಿ ಮಾಡಿಕೊಂಡರು.

    ತಾತ ಡಾ.ರಾಜ್ ಅಂತೆ 'ದಾರಿ ತಪ್ಪಿದ ಮಗ'ನಾದ ಮೊಮ್ಮಗ ಧೀರೇನ್.!ತಾತ ಡಾ.ರಾಜ್ ಅಂತೆ 'ದಾರಿ ತಪ್ಪಿದ ಮಗ'ನಾದ ಮೊಮ್ಮಗ ಧೀರೇನ್.!

    ಹೊರಗಿನವರಿಂದ ಈ ಕೆಲಸ ನಡೆಯದಿರಲಿ..

    ಹೊರಗಿನವರಿಂದ ಈ ಕೆಲಸ ನಡೆಯದಿರಲಿ..

    ಆರಂಭದಲ್ಲಿ ಅವರ ಮನವಿಯನ್ನು ತಪ್ಪಾಗಿ ಅರ್ಥೈಸಿಕೊಂಡ ರಾಘವೇಂದ್ರ ರಾಜಕುಮಾರ್ ಅವರು ತಾವು ತಮ್ಮ ಕುಟುಂಬದವರಿಗೆ ಅಪ್ಪಾಜಿ ಚಿತ್ರಗಳ ಹೆಸರನ್ನು ಬಳಸಿ ಚಿತ್ರ ಮಾಡದಂತೆ ಮನವಿ ಮಾಡುವುದಾಗಿ ಹೇಳಿದರು. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಅಭಿಮಾನಿಗಳು "ಅಣ್ಣಾವ್ರ ಕುಟುಂಬದಿಂದ ಅಣ್ಣಾವ್ರ ಚಿತ್ರಗಳ ಹೆಸರು ಬಳಸಿದಲ್ಲಿ ಅದು ಖುಷಿಯೇ. ಆದರೆ ಹೊರಗಿನವರಿಂದ ಈ ಕೆಲಸ ನಡೆಯದಿರಲಿ" ಎಂದರು.

    ಡಾ ರಾಜ್ ಕುಮಾರ್ ಕಂಡಿದ್ದ ಈ ಕನಸು ಇನ್ನು ನನಸಾಗಿಲ್ಡಾ ರಾಜ್ ಕುಮಾರ್ ಕಂಡಿದ್ದ ಈ ಕನಸು ಇನ್ನು ನನಸಾಗಿಲ್

    ಗಿಮಿಕ್ ಗಾಗಿ ಟೈಟಲ್ ಮರು ಬಳಕೆ ಆಗುತ್ತಿದ್ಯಾ.?

    ಗಿಮಿಕ್ ಗಾಗಿ ಟೈಟಲ್ ಮರು ಬಳಕೆ ಆಗುತ್ತಿದ್ಯಾ.?

    ಮಾತ್ರವಲ್ಲ, ಅವರೆಲ್ಲ ಗಿಮಿಕ್ ಗಾಗಿ ಆ ಹೆಸರುಗಳನ್ನು ಬಳಸುತ್ತಿರಬಹುದು. ಆದರೆ ಆ ಹೆಸರಿನ ಚಿತ್ರಗಳು ಒಂದು ಕೂಡ ಯಶಸ್ವಿಯಾದ ಉದಾಹರಣೆ ಇಲ್ಲ. ಹೀಗಿರಬೇಕಾದರೆ ಅದು ಲೆಜೆಂಡ್ ಚಿತ್ರಗಳ ಹೆಸರಿಗೆ ಕಳಂಕ ತರುವ ಪ್ರಯತ್ನದಂತೆ ಕಾಣುತ್ತಿದೆ. ಹಾಗಾಗಿ ದಯವಿಟ್ಟು ಇದರ ವಿರುದ್ಧ ಏನಾದರೂ ಕ್ರಮ ಕೈಗೊಳ್ಳಿ ಎಂದು ರಾಘವೇಂದ್ರ ರಾಜ್ ಕುಮಾರ್ ಅವರಲ್ಲಿ ವಿನಂತಿಸಲಾಗಿತ್ತು.

    'ಅಭಿಮಾನಿ ದೇವರಿಗೆ' ಡಾ.ರಾಜ್ ಕುಮಾರ್ ಬರೆದಿದ್ದ ಅಪರೂಪದ ಪತ್ರ ನೋಡಿದ್ದೀರಾ.?'ಅಭಿಮಾನಿ ದೇವರಿಗೆ' ಡಾ.ರಾಜ್ ಕುಮಾರ್ ಬರೆದಿದ್ದ ಅಪರೂಪದ ಪತ್ರ ನೋಡಿದ್ದೀರಾ.?

    ರಾಘಣ್ಣ ಏನಂದರು.?

    ರಾಘಣ್ಣ ಏನಂದರು.?

    ಈ ಒತ್ತಡಕ್ಕೆ ಉತ್ತರಿಸಿದ ರಾಘಣ್ಣ "ಅಭಿಮಾನಿಗಳು ಈ ಬಗ್ಗೆ ಒಂದು ಸಹಿ ಸಂಗ್ರಹಣಾ ಅಭಿಯಾನ ನಡೆಸಲಿ.‌ ನಾನು ‌ಕೂಡ ಅಭಿಮಾನಿಗಳು ಹೀಗೆ ಬಯಸುತ್ತಿದ್ದಾರೆ ಎಂದು ಹೇಳಿ ಅವರ ಬೇಡಿಕೆ ಈಡೇರಿಸುವಂತೆ ವಾಣಿಜ್ಯ ಮಂಡಳಿಗೆ ಪತ್ರ ಬರೆಯುತ್ತೇನೆ'' ಎಂದು ಭರವಸೆ ನೀಡಿದ್ದಾರೆ.

    ಡಾ ರಾಜ್ ಸುಮಧುರ ಕಂಠದ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ರಾಘಣ್ಣ ಡಾ ರಾಜ್ ಸುಮಧುರ ಕಂಠದ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ರಾಘಣ್ಣ

    ಮುತ್ತುರಾಜ್ ಅಭಿಮಾನಿ ಬಳಗ

    ಮುತ್ತುರಾಜ್ ಅಭಿಮಾನಿ ಬಳಗ

    'ಆರಾಧ್ಯ ದೈವ ಮುತ್ತುರಾಜ್' ಅಭಿಮಾನಿಗಳ ಬಳಗದ ಪರಮ್ ಗುಬ್ಬಿ, ನವೀನ್ ಕುಮಾರ್ ಮೊದಲಾದವರ ನೇತೃತ್ವದಲ್ಲಿ ಈ ಮನವಿಯನ್ನು ರಾಘವೇಂದ್ರ ರಾಜಕುಮಾರ್ ಅವರಲ್ಲಿ ನಿವೇದಿಸಲಾಗಿತ್ತು. ಮಂಗಳಾ ರಾಜಕುಮಾರ್ ಅವರ ಜನ್ಮದಿನದ ಪ್ರಯುಕ್ತ ಶುಕ್ರವಾರ ರಾಘಣ್ಣನ ಮನೆಗೆ ಆಗಮಿಸಿದ್ದ ರಾಜ್ ಕುಮಾರ್ ಅಭಿಮಾನಿಗಳು ಈ‌ ಮನವಿಯನ್ನು ಮುಂದಿಟ್ಟಿದ್ದರು.

    English summary
    Raghavendra Rajkumar requests to not to reuse Dr Rajkumar film Titles .
    Saturday, December 22, 2018, 10:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X