Just In
Don't Miss!
- Automobiles
ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ
- News
ರೈತರ ಹೋರಾಟ ಬೆಂಬಲಿಸಿ ಜ.20ರಂದು ರಾಜ್ ಭವನ ಚಲೋ
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿರ್ದೇಶಕ ರಾಜಮೌಳಿಯನ್ನು ಭೇಟಿಯಾದ ರಾಜ್ಕುಮಾರ್ ಮೊಮ್ಮಗ
ರಾಜ್ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್ಕುಮಾರ್ ಪುತ್ರ ಯುವರಾಜ್ ಕುಮಾರ್, ಖ್ಯಾತ ನಿರ್ದೇಶಕ ರಾಜಮೌಳಿಯನ್ನು ಭೇಟಿ ಮಾಡಿದ್ದಾರೆ.
'ಯುವ ರಣಧೀರ ಕಂಠೀರವ' ಸಿನಿಮಾದಲ್ಲಿ ನಟಿಸಿರುವ ಯುವರಾಜ್ ಕುಮಾರ್, ಆ ಸಿನಿಮಾದ ಟೀಸರ್ ಅನ್ನು ರಾಜಮೌಳಿ ಅವರಿಗೆ ತೋರಿಸಿದ್ದಾರೆ. ಟೀಸರ್ ನೋಡಿದ ರಾಜಮೌಳಿ ಅವರು, ಯುವರಾಜ್ ಕುಮಾರ್ ಬೆನ್ನು ತಟ್ಟಿದ್ದಾರಂತೆ.
ಬಾಲಿವುಡ್ ಸ್ಟಾರ್ ನಟ ಆರ್ಆರ್ಆರ್ ಸಿನಿಮಾದಲ್ಲಿ?
ಆರ್ಆರ್ಆರ್ ಸಿನಿಮಾದ ಸೆಟ್ನಲ್ಲಿ ರಾಜಮೌಳಿ ಅವರನ್ನು ಯುವರಾಜ್ ಕುಮಾರ್ ಭೇಟಿಯಾಗಿದ್ದಾರೆ. ಈ ಸಮಯ ಯುವ ರಣಧೀರ ಕಂಠೀರವ ಸಿನಿಮಾದ ನಿರ್ದೇಶಕ ಪುನೀತ್ ರುದ್ರನಾಗ್ ಸಹ ಇದ್ದಾರೆ.
'ಯುವ ರಣಧೀರ ಕಂಠೀರವ' ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದೆ. ಅದ್ಭುತವಾಗಿ ಫೈಟ್ ದೃಶ್ಯವುಳ್ಳ ಟೀಸರ್ ಈಗಾಗಲೇ ಸಖತ್ ಗಮನ ಸೆಳೆದಿದೆ.
ವಿಡಿಯೋ: ಚಿತ್ರೀಕರಣದ ವೇಳೆ ಥರ-ಥರ ನಡುಗಿದ ಜೂ.ಎನ್ಟಿಆರ್-ರಾಜಮೌಳಿ
'ಯುವ ರಣಧೀರ ಕಂಠೀರವ' ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾ ಆಗಿದ್ದು, ಯುವರಾಜ್ ಕುಮಾರ್ ಅವರ ಅಣ್ಣ ವಿನಯ್ರಾಜ್ಕುಮಾರ್ ಅವರು ನಾಯಕನಾಗಿ ನಟಿಸಿರುವ ಮೂರು ಸಿನಿಮಾಗಳು ಈಗಾಗಲೇ ಬಿಡುಗಡೆ ಆಗಿವೆ.