ಜೇಮ್ಸ್ ಚಿತ್ರದ ವಿಚಾರದಲ್ಲಿ ನಾನು ಗಿಮಿಕ್ ಮಾಡಲ್ಲ: ರಾಘವೇಂದ್ರ ರಾಜ್‌ಕುಮಾರ್ ಹೇಳಿಕೆ!
ಜೇಮ್ಸ್ ಚಿತ್ರ ಪ್ರೇಕ್ಷಕರು ಮತ್ತು ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ. ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡಿದೆ. ಕುಂಬಳಕಾಯಿ ಒಡೆಯುವ ಮೂಲಕ ಚಿತ್ರ ತಂಡ ಈ ವಿಚಾರವನ್ನು ಬಹಿರಂಗಪಡಿಸಿದೆ. ಜೇಮ್ಸ್ ಪ್ರೇಕ್ಷಕರ ಹತ್ತಿರ ಬರುವ ದಿನಗಳು ಇನ್ನೂ ತುಂಬಾ ದೂರ ಇಲ್ಲ.
Recommended Video
ಈ ಹಿಂದೆ ಚಿತ್ರದ ಎಲ್ಲಾ ಕೆಲಸಗಳನ್ನು ಚಿತ್ರ ತಂಡ ಆರಂಭಿಸಿದೆ. ಸದ್ಯ ಬಾಕಿ ಇದ್ದ ಸಣ್ಣ ಪುಟ್ಟ ದೃಶ್ಯಗಳ ಶೂಟಿಂಗ್‌ಗಳನ್ನು ಕೂಡ ಮಾಡಿ ಮುಗಿಸಿದೆ. ಹಾಗಾಗಿ ಸದ್ಯದಲ್ಲಿಯೇ ಚಿತ್ರದ ರಿಲೀಸ್ ಬಗ್ಗೆ ಚಿತ್ರ ತಂಡ ಮಾಹಿತಿ ನೀಡುವ ನಿರೀಕ್ಷೆ ಹುಟ್ಟಿ ಕೊಂಡಿದ್ದೆ. ಇದರ ಜೊತೆಗೆ ಮತ್ತೊಂದು ಉತ್ತಮ ಸಮಾಚಾರ ಅಂದರೆ ಈ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರು ಕೂಡ ಇರಲಿದ್ದಾರೆ.
ಈ ಬಗ್ಗೆ ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಮಾತನಾಡಿದ್ದಾರೆ. ಜೇಮ್ಸ್ ಸಿನಿಮಾದಲ್ಲಿ ಅಭಿನಯಿಸಿರುವ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್ ಅವರು ಮಾತನಾಡಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗು ರಾಘವೇಂದ್ರ ರಾಜ್‌ಕುಮಾರ್ ಅವರು ವಿಶೇಷ ಪಾತ್ರಗಳಲ್ಲಿ ಅಭಿನಯಿಸಿರುವ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ.

ಅಪ್ಪು ಚಿತ್ರಕ್ಕೆ ಗಿಮಿಕ್ ಅನಗತ್ಯ: ರಾಘಣ್ಣ!
ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಜೇಮ್ಸ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಮಾತು ಆರಂಭಕ್ಕೂ ಮೊದಲು ರಾಘವೇಂದ್ರ ರಾಜ್‌ಕುಮಾರ್ ಅವರು "ನಾವು ಗಿಮಿಕ್ ಮಾಡಬಾರದು.. ಈ ಚಿತ್ರದಲ್ಲಿ ಮೂವರು ಇದ್ದೀವಿ ಅಂತ ಗಿಮಿಕ್ ಮಾಡಬಾರದು. ಅದು ತಪ್ಪಾಗುತ್ತದೆ. ಹೌದು ನಿಜ ನಾವು ಮೂವರು ಈ ಚಿತ್ರದಲ್ಲಿ ಇದೀವಿ. ಜೊತೆಗೆ ಒಂದೇ ಸೀನ್ ಇಲ್ಲ ಆದರೆ ಮೂವರು ಒಂದೇ ಚಿತ್ರದಲ್ಲಿ ಇದೀವಿ. ಎಂದು ರಾಘವೇಂದ್ರ ರಾಜ್‌ಕುಮಾರ್ ಅವರು ಹೇಳಿಕೊಂಡಿದ್ದಾರೆ.

ನಾನು, ಶಿವಣ್ಣ ಅಪ್ಪು ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದಿವಿ!
ಮಾತು ಮುಂದುವರೆಸಿದ ರಾಘವೇಂದ್ರ ರಾಜ್‌ಕುಮಾರ್ ಅವರು, "ಇದು ಪುನೀತ್ ಅವರ ಸಿನಿಮಾನೇ ಅದರಲ್ಲಿ ನಾವಿಬ್ಬರು ಒಂದು ಸಣ್ಣ ಪಾತ್ರ ಮಾಡಿದ್ದೀವಿ. ನಮಗೆ ಸಿಕ್ಕಿದೆ ಮಾಡಿದ್ದೀವಿ. ಕೆಲಸ ಮಾಡಿದ್ದೀವಿ ಅಂತ ಹೇಳಲು ಇಷ್ಟ ಪಡ್ತೀನಿ. ಪಾತ್ರ ಮಾಡಿದ್ದೀನಿ ಅಂತ ಅಲ್ಲ. ಇನ್ನು ಇದಕ್ಕೆ ಗಿಮಿಕ್ ಮಾಡಿ ಏನೇನೋ ಮಾಡಿದ್ದೀವಿ ಅಂತ ಜನರಲ್ಲಿ ನಾವು ಏನೇನೋ ಅಭಿಪ್ರಾಯ ಕೊಡಬಾರದು. ಮಾಡದೇ ಇರುವುದನ್ನು ಮಾಡಿದಿವಿ, ಮಾಡಿದಿವಿ ಅಂತ ಗಿಮಿಕ್ ಮಾಡಬಾರದು, ಅದು ನಾನು ಮಾಡಲ್ಲ. ನಮ್ಮ ಪಾತ್ರ ನೋಡಿದಾಗ ಸಣ್ಣದಾಗಿ ಇದ್ದರು ಚೆನ್ನಾಗಿದೆ ಅಂತ ಅನಿಸುತ್ತದೆ". ಎಂದಿದ್ದಾರೆ ರಾಘವೇಂದ್ರ ರಾಜ್‌ಕುಮಾರ್.

ಕಣ್ಣೀರು ಹಾಕುತ್ತಲೇ ಶೂಟಿಂಗ್ ಮುಗಿಸಿದ ಜೇಮ್ಸ್ ಚಿತ್ರ ತಂಡ!
ಇನ್ನು ಚಿತ್ರೀಕರಣ ಮಾಡುವಾಗ ಇಡೀ ಜೇಮ್ಸ್ ಚಿತ್ರತಂಡದಲ್ಲಿ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ರಾಘವೇಂದ್ರ ರಾಜ್‌ಕುಮಾರ್ ಅವರು ವಿವರಿಸಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಕಣ್ಣೀರು ಹಾಕುತ್ತಲೇ ಸಿನಿಮಾ ಮುಗಿಸಿದ್ದಾರಂತೆ "ಅವತ್ತು ಶೂಟಿಂಗ್ ಮಾಡುವಾಗ ಎಲ್ಲರೂ ಭಾವುಕ ಆಗಿದ್ದರು. ಡೈರೆಕ್ಟರ್ ಅಂತೂ ಕಣ್ಣಲ್ಲಿ ನೀರು ಹಾಕಿಕೊಂಡು ಬಂದೆ ನನ್ನ ಪಾತ್ರ ವಿವರಿಸಿದ. ಪ್ರತಿಯೊಬ್ಬರ ಕಣ್ಣಲ್ಲು ಅಪ್ಪು ಕಾಣಿಸುತ್ತಿದ್ದ. ಅಪ್ಪು ಇಲ್ಲದೇ ನಮ್ಮಿಬ್ಬರನ್ನು ನೋಡಲು ಶೂಟಿಂಗ್ ಮಾಡುವವರಿಗೆಲ್ಲಾ ಬೇಜಾರ್ ಆಗಿತ್ತು". ಎಂದು ಜೇಮ್ಸ್ ಸಿನಿಮಾ ಶೂಟಿಂಗ್ ಅನುಭವ ಹಂಚಿಕೊಂಡಿದ್ದಾರೆ ನಟ ರಾಘವೇಂದ್ರ ರಾಜ್‌ಕುಮಾರ್.

ಜೇಮ್ಸ್ ಮೂಲಕ ಅಪ್ಪು ಬಿಗ್ ಸ್ಕ್ರೀನ್‌ಗೆ ಎಂಟ್ರಿ!
ನಟ ಪುನೀತ್ ರಾಜ್‌ಕುಮಾರ್ ಅವರನ್ನು ಬಿಗ್ ತೆರೆಯ ಮೇಲೆ ನೋಡಲು ಇನ್ನು ಹೆಚ್ಚು ದಿನಗಳು ಕಾಯಬೇಕಾಗಿಲ್ಲ. ಯಾಕೆಂದರೆ ಸಿನಿಮಾದ ಬಹುತೇಕ ಕೆಲಸಗಳು ಮುಗಿದು ಬಿಟ್ಟಿವೆ. ಆದಷ್ಟು ಬೇಗ ಸಿನಿಮಾದ ಟೀಸರ್ ಮತ್ತು ಟ್ರೇಲರ್ ರಿಲೀಸ್ ಮಾಡಲು ಚಿತ್ರ ತಂಡ ಯೋಜನೆ ರೂಪಿಸಿದೆ. ಜೊತೆಗೆ ಸಿನಿಮಾವನ್ನು ಪುನೀತ್ ರಾಜ್‌ಕುಮಾರ್ ಅವರ ಹುಟ್ಟುದಂದು, ಮಾರ್ಚ್ 17ಕ್ಕೆ ರಿಲೀಸ್ ಮಾಡಲು ಪ್ರಯತ್ನ ಮಾಡುತ್ತಿದೆ. ಆದರೆ ಇದನ್ನು ಕೆಲವೇ ದಿನಗಳಲ್ಲಿ ಚಿತ್ರ ತಂಡ ಸ್ಪಷ್ಟ ಪಡಿಸಲಿದೆ.


Click it and Unblock the Notifications











