ಇದು ರಾಘವೇಂದ್ರ ರಾಜ್‌ಕುಮಾರ್ ಜೊತೆಗಿನ ಅಪ್ಪು ಕಡೆಯ ಸೆಲ್ಫಿ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಲ್ಲವಾಗಿ ಐದು ದಿನಗಳು ಕಳೆದಿವೆ. ಇಡೀ ಕರುನಾಡು ಇದೆ ಕಹಿ ಸತ್ಯದೊಂದಿಗೆ ದಿನವನ್ನು ನೋಡುವಂತಹ ಕಾಲಬಂದಿದೆ. ಅಪ್ಪು ಇಲ್ಲ ಎನ್ನುವುದು ಅಭಿಮಾನಿಗಳಿಂದ ಹಿಡಿದು, ಆಪ್ತರಿಂದ ಹಿಡಿದು, ಇಡೀ ಕರುನಾಡಿಗೆ ದೊಡ್ಡ ವಿಷಾದಕರ ಸಂಗತಿ. ಎಷ್ಟೇ ಹೇಳಿದರು ಪುನೀತ್ ರಾಜಕುಮಾರ್ ಅವರ ಬಗ್ಗೆ ಮುಗಿಯುವುದಿಲ್ಲ, ಎಷ್ಟೇ ಅವರ ಬಗ್ಗೆ ಮಾತನಾಡಿದರು ಅವರ ಹೊಸ ನೆನಪುಗಳು ಬರುತ್ತಲೇ ಇರುತ್ತವೆ. ಹಾಗಾಗಿಯೇ ಸಿನಿಮಾ ರಂಗದವರು ಆಗಲಿ, ಅಭಿಮಾನಿಗಳು ಆಗಲಿ ಸಾಮಾಜಿಕ ಜಾಲತಾಣದಲ್ಲಿ ಪ್ರತೀ ಕ್ಷಣದಕ್ಕೂ ಅವರ ಬಗ್ಗೆ ಒಂದಲ್ಲಾ ಒಂದು ವಿಚಾರವನ್ನು ಪ್ರಸ್ತಾಪ ಮಾಡುತ್ತಲೇ ಇದ್ದಾರೆ. ಇನ್ನು ಕುಟುಂಬಸ್ಥರ ಪರಿಸ್ಥಿತಿ ಹೇಳತೀರದು. ಒಂದುಕಡೆ ಶಿವಣ್ಣ ನೋವನ್ನು ನುಂಗಿ ಭಜರಂಗಿ ಅಂತೆಯೇ ನಿಂತುಕೊಂಡಿದ್ದಾರೆ.
ಮತ್ತೊಂದು ಕಡೆ ರಾಘಣ್ಣ ಅಪ್ಪು ಇಲ್ಲದ ನೋವು ಅನುಭವಿಸುತ್ತಿದ್ದಾರೆ. ಸದ್ಯ ರಾಘವೇಂದ್ರ ರಾಜಕುಮಾರ್ ಪುನೀತ್ ರಾಜಕುಮಾರ್ ಜೊತೆಗಿನ ಅಪರೂಪದ ನೆನಪೊಂದನ್ನು ಹಂಚಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಜೊತೆಗೆ ತೆಗೆದು ಕೊಂಡಂತಹ ಕಟ್ಟ ಕಡೆಯ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ರಾಘವೇಂದ್ರ ರಾಜ್‌ಕುಮಾರ ಹಂಚಿಕೊಂಡಿದ್ದಾರೆ. ಪುನೀತ್ ಅವರಿಗೆ ರಾಘಣ್ಣ ಅಂದ್ರೆ ವಿಶೇಷ ಪ್ರೀತಿ. ರಾಘವೇಂದ್ರ ರಾಜಕುಮಾರ್ ಅವರಿಗೆ ದೊಡ್ಡ ಬಲವಾಗಿದ್ದರು ಪುನೀತ್ ರಾಜಕುಮಾರ್. ಈ ಮಾತನ್ನು ಅವರು ಸಹ ಹಲವು ಬಾರಿ ಹೇಳಿಕೊಂಡಿದ್ದಾರೆ. ಆರೋಗ್ಯ ಸರಿಯಿಲ್ಲದಿದ್ದಾಗ ಸಾವಿನ ದವಡೆಯಿಂದ ನನ್ನನ್ನು ಪಾರು ಮಾಡಿರುವುದೇ ಪುನೀತ್ ಎಂದು ರಾಘಣ್ಣ ಹೇಳಿಕೊಂಡಿದ್ದಾರೆ.

ಆದರೀಗ ರಾಘವೇಂದ್ರ ರಾಜ್‌ಕುಮಾರ ಜೊತೆಗೆ ಅಪ್ಪು ಇಲ್ಲ ಅವರ ನೆನಪುಗಳು ಮಾತ್ರ ಉಳಿದಿವೆ. ಅಂತಹ ನೆನಪೊಂದನ್ನು ರಾಘವೇಂದ್ರ ರಾಜ್‌ಕುಮಾರ ಹಂಚಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ರಾಘವೇಂದ್ರ ರಾಜಕುಮಾರ್ ಜೊತೆಗೆ ತೆಗೆದುಕೊಂಡಂತಹ ಸೆಲ್ಫಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಭಾವುಕ ನುಡಿಗಳನ್ನು ಕೂಡ ಬರೆದುಕೊಂಡಿದ್ದಾರೆ ರಾಘವೇಂದ್ರ ರಾಜಕುಮಾರ್. "ಇತ್ತೀಚಿಗೆ ನನಗೆ ದಾದಾಸಾಹೇಬ್ ಫಾಲ್ಕೆ ಎಂಎಸ್‌ಕೆ ಟ್ರಸ್ಟ್ ವತಿಯಿಂದ ಜೀವನ ಸಾಧನೆ ಪ್ರಶಸ್ತಿ ಬಂದಿತ್ತು. ಅದು ಅಪ್ಪುಗೆ ಎಲ್ಲಿಲ್ಲದ ಸಂತಸವನ್ನು ತಂದುಕೊಟ್ಟಿತ್ತು. ನನ್ನನ್ನು ತಕ್ಷಣ ಭೇಟಿ ಮಾಡಿ ರಾಘಣ್ಣ ನೀವು ಕೂಡ ಈ ಮೂರ್ತಿಯ ಹಾಗೆಯೇ ಅಪ್ಪಾಜಿಯವರ ಮೂರ್ತಿಯನ್ನು ಮಾಡಿ ಎಂದಿನಂತೆ ಡಾಕ್ಟರ್ ರಾಜಕುಮಾರ್ ಟ್ರಸ್ಟ್ ವತಿಯಿಂದ ನೀಡುವ ಪ್ರಶಸ್ತಿಯನ್ನು ಇದೇ ರೂಪದಲ್ಲಿ ಮಾಡೋಣ ಎಂದು ಹೇಳಿದನು. ಅಪ್ಪು ನಿನ್ನ ಆಲೋಚನೆಗೆ ನನ್ನದೊಂದು ನಮನ.. ಲವ್ ಯು ಮಗನೇ".ಎಂದು ರಾಘವೇಂದ್ರ ರಾಜ್‌ಕುಮಾರ್ ಬರೆದುಕೊಂಡಿದ್ದಾರೆ.

ಪುನೀತ್ ರಾಜಕುಮಾರ್ ಅವರ ಕನಸುಗಳಲ್ಲಿ ಇದು ಕೂಡ ಒಂದಾಗಿತ್ತು. ಡಾಕ್ಟರ್ ರಾಜಕುಮಾರ್ ಅವರ ಪ್ರತಿರೂಪವನ್ನ ಪ್ರಶಸ್ತಿಯಾಗಿ ಡಾಕ್ಟರ್ ರಾಜಕುಮಾರ್ ಟ್ರಸ್ಟ್ ವತಿಯಿಂದ ಕೊಡಬೇಕು ಎನ್ನುವ ಆಸೆ ಇತ್ತು. ಅದನ್ನು ರಾಘವೇಂದ್ರ ರಾಜಕುಮಾರ್ ಅವರ ಬಳಿ ಪುನೀತ್ ರಾಜಕುಮಾರ್ ಹಂಚಿಕೊಂಡಿದ್ದರು. ಈ ವಿಚಾರವನ್ನು ಸಾಮಾಜಿಕ ಜಾಲತಾಣದ ಜಾಲತಾಣದಲ್ಲಿ ಹಂಚಿಕೊಂಡು ಪುನೀತ್ ರಾಜಕುಮಾರ್ ಕೊನೆಯದಾಗಿ ರಾಜಕುಮಾರ ತೆಗೆದುಕೊಂಡಿದ್ದಾರೆ. ಇದು ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಬಹಳ ಪವಿತ್ರ ನೆನಪಾಗಿ ಉಳಿಯುತ್ತೆ. ಯಾಕಂದ್ರೆ ಇನ್ನು ಯಾವತ್ತೂ ಕೂಡ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದಿಲ್ಲ.


Click it and Unblock the Notifications











