ಅಪ್ಪು- ದರ್ಶನ್ ಸ್ನೇಹದ ಬಗ್ಗೆ ಹೇಳಿದ ರಾಘಣ್ಣ!
ಸ್ಯಾಂಡಲ್ವುಡ್ನಲ್ಲಿ ಸ್ಟಾರ್ಗಳ ಫ್ಯಾನ್ಸ್ ವಾರ್ ನಡೆಯುತ್ತಲೇ ಇದೆ. ಒಂದಲ್ಲಾ ಒಂದು ಕಾರಣಕ್ಕೆ ನಟರ ಅಭಿಮಾನಿಗಳು ವಾರ್ ಗೆ ಇಳಿಯುತ್ತಿದ್ದಾರೆ. ಸಾಕಷ್ಟು ಬಾರಿ ನಟ ದರ್ಶನ್ ಮತ್ತು ಸುದೀಪ್ ವಿಚಾರಗಳಲ್ಲಿ ಹಲವು ಬಾರಿ ಫ್ಯಾನ್ ವಾರ್ ನಡೆದಿದೆ. ಇದು ಈಗ ಕಡಿಮೆ ಆಗಿದೆ. ಆದರೆ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ದರ್ಶನ್ ಮತ್ತು ಪುನೀತ್ ಫ್ಯಾನ್ ವಾರ್.
ನಟ ದರ್ಶನ್ ಕೊಟ್ಟ ಹೇಳಿಕೆ ಪುನೀತ್ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿತ್ತು. ದರ್ಶನ್, ಪುನೀತ್ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ. ಅದು ಹಲವು ಅಪ್ಪು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿ, ಹಲವರು ವಿಡಿಯೋ ಮಾಡಿ ದರ್ಶನ್ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದರು. ಬಳಿಕ ಕೆಲವರು ದರ್ಶನ್ ಬಗ್ಗೆ ಅವಾಚ್ಯ ಪದ ಬಳಸಿ ಮಾತನಾಡಿದ್ದವರು ಕ್ಷಮೆ ಕೇಳಿದ್ದಾರೆ.
ಮತ್ತೆ ಈ ಫ್ಯಾನ್ ವಾರ್ ಬಗ್ಗೆ ಮಾತನಾಡಲು ಕಾರಣ ದರ್ಶನ್, ಪುನೀತ್ ರಾಜ್‍ಕುಮಾರ್ ಸ್ನೇಹ. ಹೌದು ದರ್ಶನ್ ಹಾಗೂ ಅಪ್ಪು ನಡುವೆ ಅಪಾರ ಸ್ನೇಹವಿತ್ತು. ಅಪ್ಪು ಇದ್ದರೆ ಫ್ಯಾನ್ಸ್ ವಾರ್ ಅವರಿಗೆ ಸ್ವಲ್ಪವೂ ಸೇರುತ್ತಿರಲ್ಲಿಲ್ಲ. ರಾಜಕುಮಾರ್ ಮನೆಗೆ ಹಾಗೂ ಡಿಬಾಸ್ ನಡುವೆ ಅಪಾರ ಪ್ರೀತಿ ಸ್ನೇಹ ಇದೆ. ಎನ್ನುವ ಬಗ್ಗೆ ನಟ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿದ್ದಾರೆ.

ಫ್ಯಾನ್ ವಾರ್ ಯಿಂದ ಬೇಸರಗೊಂಡ ರಾಘಣ್ಣ, ಅಪ್ಪು ಹಾಗೂ ದರ್ಶನ್ ನಡುವಿನ ಸಂಬಂಧ ಎಂತಹದ್ದು ಎಂದು ತಿಳಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿನಯದ 'ಅರಸು' ಸಿನಿಮಾದಲ್ಲಿ ನಟ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅರಸು ಸಿನಿಮಾ ಕ್ಲೈಮ್ಯಾಕ್ಸ್ ನ ಒಂದು ದೃಶ್ಯದಲ್ಲಿ ಬಂದು ಹೋಗುವ ಪಾತ್ರವದು. ಈ ಪಾತ್ರದ ಬಗ್ಗೆ ರಾಘಣ್ಣ ತಿಳಿಸಿದ್ದಾರೆ.
ಅಪ್ಪು ಸಿನಿಮಾವೊಂದರಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಬೇಕು ಎಂದು ದರ್ಶನ್ ಬಳಿ ಕೇಳಿದಾಗ, ಆ ಕ್ಷಣಕ್ಕೆ ಅವರು ಏನನ್ನೂ ಯೋಚನೆ ಮಾಡಿದರೆ ಆಯ್ತು ರಾಘಣ್ಣ, ಪಾತ್ರ ಮಾಡುತ್ತೀನಿ ಎಂದು ಮರು ಉತ್ತರ ನೀಡಿದ್ದರಂತೆ ದರ್ಶನ್. ಮರುಕ್ಷಣವೇ ನನ್ನದು ಒಂದು ಕಂಡೀಷನ್ ಇದೆ. ಯಾವುದೇ ಕಾರಣಕ್ಕೂ ಹಣ ಕೊಡ್ತೀನಿ ಅನ್ನಬಾರದು ಎಂದು ಹೇಳಿ ಬಿಟ್ಟಿದ್ದರಂತೆ ದರ್ಶನ್.

ದುಡ್ಡು ತಗೋಬೇಕು ಅಂತ ಅವರ ಮನವೊಲಿಸುವ ಪ್ರಯತ್ನ ಮಾಡಿದರೂ, ಆದರೆ ದರ್ಶನ್ ಒಪ್ಪಲೇ ಇಲ್ಲ. ಬಹಳ ಬಲವಂತ ಮಾಡಿದಾಗ, ನಮ್ಮ ತಂದೆ ನಿಮ್ಮ ಕಂಪನಿಯಲ್ಲಿ ಸಿನಿಮಾ ಮಾಡುತ್ತಿದ್ದಾಗ, ಯಾವತ್ತೂ ದುಡ್ಡಿನ ಬಗ್ಗೆ ಮಾತನಾಡಿಲ್ಲ. ಅಂಥದ್ರಲ್ಲಿ ನಾನ್ ಹೇಗೆ ದುಡ್ಡಿನ ಬಗ್ಗೆ ಮಾತನಾಡಲಿ ಎಂದುಬಿಟ್ಟರಂತೆ. ಆಗ ನಮಗೆ ಒಂದು ಕ್ಷಣ ವಿಸ್ಮಯವಾಯಿತು. ತಂದೆಯ ಗುಣ ಹಾಗೆಯೇ ಮಗನಲ್ಲಿ ಇತ್ತು. ನಂತರ ನಾವು ಹೇಳಿದ ಬಂದು ಅಚ್ಚುಕಟ್ಟಾಗಿ ಪಾತ್ರ ಮಾಡಿಕೊಟ್ಟು ಹೋದರು ದರ್ಶನ್. ಎಂದು ರಾಘವೇಂದ್ರ ರಾಜ್ಕುಮಾರ್ ಮಾಧ್ಯಮ ಸಂದರ್ಶನದಲ್ಲಿ ತಿಳಿಸಿದ್ದಾರೆ.


Click it and Unblock the Notifications











