ಸಿದ್ಧಗಂಗಾ ಮಠಕ್ಕೆ ರಾಘಣ್ಣ ಭೇಟಿ: 112 ಮಕ್ಕಳಿಗೆ ಶಿವಕುಮಾರ ಶ್ರೀ ಹೆಸರು
'ನಡೆದಾಡುವ ದೇವರು' ಎಂದೇ ಕರೆಸಿಕೊಳ್ಳುತ್ತಿದ್ದ ಡಾ ಶಿವಕುಮಾರ ಸ್ವಾಮೀಜಿ ಅವರ 112ನೇ ಹುಟ್ಟುಹಬ್ಬದ ಪ್ರಯುಕ್ತ ನಟ ರಾಘವೇಂದ್ರ ರಾಜ್ ಕುಮಾರ್ ನಿನ್ನೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರು.
ಈ ವೇಳೆ 112 ಮಕ್ಕಳಿಗೆ ಶಿವಕುಮಾರಶ್ರೀ ಎಂದು ಹೆಸರಿಡಲಾಯಿತು. ಸಿದ್ಧಗಂಗಾ ಸ್ವಾಮೀಜಿಯ 112ನೇ ಜನುಮದಿನ ಆದ ಕಾರಣ 112 ಮಕ್ಕಳಿಗೆ ಹೆಸರಿಡುವಂತಹ ಕಾರ್ಯಕ್ರಮವನ್ನ ಮಠದಿಂದ ಹಮ್ಮಿಕೊಳ್ಳಲಾಗಿತ್ತು. ರಾಘವೇಂದ್ರ ರಾಜ್ ಕುಮಾರ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮಕ್ಕಳಿಗೆ ಹೆಸರಿಟ್ಟರು.
ಅಣ್ಣಾವ್ರ ಕುಟುಂಬಕ್ಕೆ ಮೊದಲಿನಿಂದಲೂ ಶಿವಕುಮಾರ ಸ್ವಾಮೀಜಿ ಅವರ ಮೇಲೆ ಹೆಚ್ಚು ನಂಬಿಕೆ, ಗೌರವ, ಪ್ರೀತಿ ಇದೆ. ರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹೀಗೆ ದೊಡ್ಮನೆ ಸದಸ್ಯರೆಲ್ಲರೂ ಸಿದ್ಧಗಂಗಾ ಮಠದ ಭಕ್ತರು ಎನ್ನುವುದು ವಿಶೇಷ.

ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಶ್ರೀಗಳ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಂದ್ಹಾಗೆ, ಸಿದ್ಧಗಂಗಾ ಮಠದ ಡಾ ಶಿವಕುಮಾರ ಸ್ವಾಮೀಜಿ ಅವರು ಜನವರಿ 21ರಂದು ಶಿವೈಕ್ಯರಾಗಿದ್ದರು.


Click it and Unblock the Notifications











