14 ವರ್ಷಗಳ ಬಳಿಕ ರಾಘಣ್ಣ ಒಪ್ಪಿಕೊಂಡ ಈ ಚಿತ್ರ ಯಾವುದು?

By Naveen

Recommended Video

ಸಖತ್ ಡಿಫರೆಂಟ್ ಆಗಿದೆ ರಾಘಣ್ಣನ ಹೊಸ ಅವತಾರ.! | Filmibeat Kannada

ನಟ ರಾಘವೇಂದ್ರ ರಾಜ್ ಕುಮಾರ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. 14 ವರ್ಷಗಳ ನಂತರ ಮತ್ತೆ ಬೆಳ್ಳಿ ಪರದೆ ಮೇಲೆ ಅವರು ಕಾಣಿಸಿಕೊಳ್ಳುತ್ತಿದ್ದಾರೆ. 2004ರಲ್ಲಿ ಬಂದ 'ಪಕ್ಕದ ಮನೆ' ಹುಡುಗಿ ಚಿತ್ರ ಅವರ ಕೊನೆಯ ಸಿನಿಮಾ ಆಗಿತ್ತು.

'ಅಮ್ಮನ ಮನೆ' ಸಿನಿಮಾದ ಮೂಲಕ ರಾಘಣ್ಣ ಮತ್ತೆ ತಮ್ಮ ಸಿನಿ ಜರ್ನಿಯನ್ನು ಮುಂದುವರೆಸುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ನಿಖಿಲ್ ಮಂಜು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಒಂದು ಒಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ ಎಂದಿದ್ದಾರೆ.

raghavendra rajkumars Ammana Mane movie first look released

ಇನ್ನು ನಿನ್ನೆ ರಾಘವೇಂದ್ರ ರಾಜ್ ಕುಮಾರ್ ಅವರ ಕೆಲ ಫೋಟೋಗಳು ಬಿಡುಗಡೆಯಾಗಿದ್ದು, ಸಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅವರ ಲುಕ್ ಎಲ್ಲರ ಗಮನ ಸೆಳೆದಿದ್ದು, ಅವರ ಪಾತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಅಂದಹಾಗೆ, ಈ ಸಿನಿಮಾ ಸ್ವಾತಂತ್ರ್ಯ ದಿನದಂದು ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿ ಲಾಂಚ್ ಆಗಲಿದೆ. ವಿಶೇಷ ಅಂದರೆ ಅಂದು ರಾಘವೇಂದ್ರ ರಾಜ್ ಕುಮಾರ್ ಅವರ ಹುಟ್ಟುಹಬ್ಬ ಕೂಡ ಇದೆ.

raghavendra rajkumars Ammana Mane movie first look released

ಶ್ರೀ ಲಲಿತ 'ಅಮ್ಮನ ಮನೆ' ಚಿತ್ರದ ಕಥೆ ಬರೆದಿದ್ದಾರೆ. ಆತ್ಮ ಶ್ರೀ ಮುತ್ತು ಆರ್ ಎನ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಕೌಟುಂಬಿಕ ಸಿನಿಮಾವಾಗಿದ್ದು, ಕೆಲಸ ಮತ್ತು ಸಂಸಾರ ಎರಡು ನಿಭಾಯಿಸುವ ಗೃಹಸ್ಥನ ಪಾತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Kannada actor Raghavendra Rajkumar's 'Ammana Mane' movie first look released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X