ಆಕ್ಷನ್, ಕಾಮಿಡಿ, ಐತಿಹಾಸಿಕ: ಈ ವಾರ ಸಿನಿರಸಿಕರಿಗೆ ಬಗೆ ಬಗೆಯ ಸಿನಿಮಾ ದರ್ಶನ

ಮತ್ತೊಂದು ಸಿನಿಶುಕ್ರವಾರ ಬಂದಿದೆ. ಸಿನಿರಸಿಕರ ಮುಂದೆ ಈ ವಾರ ಆಕ್ಷನ್, ಕಾಮಿಡಿ, ಹಿಸ್ಟಾರಿಕಲ್ ಸಿನಿಮಾಗಳು ಬರ್ತಿವೆ. ಕನ್ನಡದಲ್ಲಿ ಜಗ್ಗಣ್ಣನ 'ರಾಘವೇಂದ್ರ ಸ್ಟೋರ್ಸ್' ಜೊತೆಗೆ ವಿಜಯ್ ರಾಘವೇಂದ್ರ ನಟನೆಯ 'ರಾಘು' ಸಿನಿಮಾ ತೆರೆಗಪ್ಪಳಿಸುತ್ತಿದೆ. ತೆಲುಗಿನ 'ಏಜೆಂಟ್' ಸಿನಿಮಾ ಕೂಡ ನಿರೀಕ್ಷೆ ಹುಟ್ಟಾಕ್ಕಿದೆ. ಇದೆಲ್ಲದರ ನಡುವೆ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಪೊನ್ನಿಯಿನ್ ಸೆಲ್ವನ್' ಸೀಕ್ವೆಲ್ ಕೂಡ ಬೆಳ್ಳಿಪರದೆ ಅಲಂಕರಿಸುತ್ತಿದೆ.

ಸ್ಯಾಂಡಲ್‌ವುಡ್‌ನಲ್ಲಿ ನವರಸ ನಾಯಕ ಜಗ್ಗೇಶ್ ನಟನೆಯ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಸಿನಿಮಾ ಸೆಲೆಬ್ರೆಟಿ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ನೋಡಿದವರು ಜಗ್ಗಣ್ಣ ನವರಸ ಪಾಕಕ್ಕೆ ಫಿದಾ ಆಗಿದ್ಧಾರೆ. ಸಂತೋಷ್ ಆನಂದ್‌ ರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ಧಾರೆ. ವಯಸ್ಸು 40 ದಾಟಿದ ಅಡುಗೆ ಭಟ್ಟ ಹಯವದನನ ಮದುವೆಯ ಪ್ರಯತ್ನದ ಕಥೆ ಚಿತ್ರದಲ್ಲಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದೆ. ಜಗ್ಗೇಶ್ ಅಭಿಮಾನಿಗಳಿಗೆ ಹೇಳಿಮಾಡಿಸಿದಂತಹ ಸಿನಿಮಾ ಇದು.

Raghavendra Stores, Ponniyin Selvan, Raghu, Agent: These 4 movies Releasing In Theatre s this Week

'ರಾಘವೇಂದ್ರ ಸ್ಟೋರ್ಸ್' ಜೊತೆಗೆ ವಿಜಯ್ ರಾಘವೇಂದ್ರ ನಟನೆಯ 'ರಾಘು' ಸಿನಿಮಾ ಕೂಡ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಎಲ್ಲರೂ ವಿಜಯ್ ರಾಘವೇಂದ್ರ ಅವರನ್ನು 'ರಾಘು' ಅಂತ ಕರೆಯುತ್ತಾರೆ. ಅದೇ ಟೈಟಲ್‌ ಸಿನಿಮಾದಲ್ಲಿ ಅವರು ನಟಿಸಿರೋದು ವಿಶೇಷ. ಡಿಕೆಎಸ್ ಸ್ಟುಡಿಯೋಸ್ ಮತ್ತು ಕೋಟಾ ಫಿಲ್ಮ್ ಫ್ಯಾಕ್ಟರಿ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಒಂದು ರಾತ್ರಿ ನಡೆಯುವ ಕಥೆ ಇದಾಗಿದ್ದು ಮೆಡಿಸಿನ್ ಡೆಲಿವರಿ ಎಕ್ಸಿಕ್ಯೂಟಿವ್‌ ಸುತ್ತಾ ಸುತ್ತುತ್ತದೆ. ಚಿತ್ರದ ಉದ್ದಕ್ಕೂ ವಿಜಯ್ ರಾಘವೇಂದ್ರ ಒಬ್ಬರೇ ಕಾಣಿಸಿಕೊಳ್ಳುತ್ತಾರೆ. ಇದು ಕನ್ನಡದಲ್ಲಿ ಬಹಳ ವಿಭಿನ್ ಪ್ರಯತ್ನ ಎನ್ನಬಹುದು.

ಕನ್ನಡದಲ್ಲಿ ಎರಡು ಸಿನಿಮಾಗಳು ರಿಲೀಸ್ ಆಗ್ತಿದ್ರೆ, ತೆಲುಗಿನಲ್ಲಿ ಅಖಿಲ್ ಅಕ್ಕಿನೇನಿ ನಟನೆಯ 'ಏಜೆಂಟ್' ಕೂಡ ತೆರೆಗೆ ಬರ್ತಿದೆ. ನಾಗಾರ್ಜುನ ಕಿರಿಪುತ್ರ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲು ಸಾಕಷ್ಟು ಶ್ರಮಪಡುತ್ತಿದ್ಧಾರೆ. ಆದರೆ ಯಾವುದೇ ಸಿನಿಮಾ ಕೈ ಹಿಡಿಯುತ್ತಿಲ್ಲ. ಇದೀಗ 'ಏಜೆಂಟ್' ಆಗಿ ಅಖಿಲ್ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಸುರೇಂದರ್ ರೆಡ್ಡಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಮಲಯಾಳಂ ನಟ ಮಮ್ಮುಟಿ ಕೂಡ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ.

ಈ ಮೂರು ಸಿನಿಮಾಗಳ ಜೊತೆಗೆ ಭಾರೀ ಕುತೂಹಲ ಕೆರಳಿಸಿರುವುದು ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್- 2'. ಕಳೆದ ವರ್ಷ ಈ ಸರಣಿಯ ಮೊದಲ ಸಿನಿಮಾ ರಿಲೀಸ್ ಆಗಿ ಪ್ರೇಕ್ಷಕರ ಗಮನ ಸೆಳೆದಿತ್ತು. ಕಲ್ಕಿ ಕೃಷ್ಣಮೂರ್ತಿ ಬರೆದ 'ಪೊನ್ನಿಯಿನ್ ಸೆಲ್ವನ್' ಕಾದಂಬರಿ ಆಧರಿಸಿ ಈ ಸಿನಿಮಾ ಕಟ್ಟಿಕೊಡಲಾಗಿದೆ. ಚಿಯಾನ್ ವಿಕ್ರಮ್, ಐಶ್ವರ್ಯ ರೈ, ಕಾರ್ತಿ, ಜಯಂ ರವಿ, ತ್ರಿಷಾ, ಪ್ರಕಾಶ್ ರೈ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಬಹುಕೋಟಿ ವೆಚ್ಚದಲ್ಲಿ ಈ ಐತಿಹಾಸಿಕ ಕಥಾಹಂದರದ ಸಿನಿಮಾ ನಿರ್ಮಿಸಲಾಗಿದೆ.

Raghavendra Stores, Ponniyin Selvan, Raghu, Agent: These 4 movies Releasing In Theatre s this Week

ಸರಣಿಯ ಮೊದಲ ಭಾಗ ರಿಲೀಸ್ ಆಗಿ 6 ತಿಂಗಳು ಕಳೆಯುವಷ್ಟರಲ್ಲಿ ಎರಡನೇ ಚಿತ್ರವನ್ನು ತೆರೆಗೆ ತರುತ್ತಿರುವುದು ವಿಶೇಷ. ಲೈಕಾ ಪ್ರೊಡಕ್ಷನ್ಸ್ ಹಾಗೂ ಮದ್ರಾಸ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ರಹಮಾನ್ ಸಂಗೀತ ಚಿತ್ರಕ್ಕಿದೆ. ಈ ಚಿತ್ರವನ್ನು ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಡಬ್ ಮಾಡಿ ರಿಲೀಸ್ ಮಾಡಲಾಗ್ತಿದೆ. ಚಿತ್ರದ ಮೊದಲ ಭಾಗ 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಅದನ್ನು ಮೀರಿ ಸೀಕ್ವೆಲ್ ಗಳಿಕೆ ಮಾಡುತ್ತಾ ಕಾದು ನೋಡಬೇಕಿದೆ.

More from Filmibeat

English summary
Raghavendra Stores, Ponniyin Selvan, Raghu, Agent: These 4 movies Releasing In Theatres this Week. maniratnam Directed PS- 2 to release in 5 languages. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X