'ತಬ್ಬಿಕೊಂಡು, ಮುತ್ತುಕೊಡಲು ಪ್ರಯತ್ನ ಮಾಡಿದ್ದು ನಿಜ', ಆದರೆ.. : ರಘು ದೀಕ್ಷಿತ್ ನೇರ ಸ್ಪಷ್ಟನೆ

Recommended Video

ತಪ್ಪೊಪ್ಪಿಕೊಂಡ ರಘು ದೀಕ್ಷಿತ್..! | FILMIBEAT KANNADA

ಬಾಲಿವುಡ್ ನಲ್ಲಿ ಶುರುವಾದ Metoo ಅಭಿಯಾನ ಈಗ ಸ್ಯಾಂಡಲ್ ವುಡ್ ಗೆ ಬಂದಿದೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮೇಲೆ ಈಗ ಗಾಯಕಿಯೊಬ್ಬರು ಆರೋಪ ಮಾಡಿದ್ದರು.

ಚಿನ್ಮಯಿ ಶ್ರೀ ಪಾದ್ ಎಂಬ ಗಾಯಕಿ ರಘು ದೀಕ್ಷಿತ್ ಮೇಲೆ ನಿನ್ನೆ ಗಂಭೀರ ಆರೋಪ ಮಾಡಿದ್ದರು. Metoo ಅಭಿಮಾನಕ್ಕೆ ಕೈ ಜೋಡಿಸಿದ್ದ ಚಿನ್ಮಯಿ, ರಘು ದೀಕ್ಷಿತ್ ತನ್ನ ಸ್ನೇಹಿತೆಯಾಗಿರುವ ಒಬ್ಬ ಗಾಯಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದಿದ್ದರು.

ಇದೀಗ ಈ ಗಾಯಕಿಯ ಆರೋಪದ ಬಗ್ಗೆ ರಘು ದೀಕ್ಷಿತ್ ಸಹ ಟ್ವೀಟ್ ಮಾಡಿದ್ದಾರೆ. ''ಆ ಘಟನೆ ನಡೆದಿರುವುದು ನಿಜ. ತಬ್ಬಿಕೊಂಡು, ಮುತ್ತುಕೊಡಲು ಯತ್ನಿಸಿದ್ದು ನಿಜ ಆದರೆ, ಚಿನ್ಮಯಿ ಅವರು ಹೇಳಿದ ಎಲ್ಲವೂ ಸತ್ಯವಲ್ಲ'' ಎಂದಿದ್ದಾರೆ.

ತಮ್ಮ ಬಗ್ಗೆ ಬಂದ ಆರೋಪದ ಬಗ್ಗೆ ಸಂಪೂರ್ಣವಾದ ಸ್ಪಷ್ಟನೆಯನ್ನು ಅವರು ನೀಡಿದ್ದಾರೆ. ಮುಂದೆ ಓದಿ...

ನನ್ನ ಬಗ್ಗೆ ಬಂದ ಆರೋಪದ ಬಗ್ಗೆ ನನಗೆ ತಿಳಿದಿದೆ

ನನ್ನ ಬಗ್ಗೆ ಬಂದ ಆರೋಪದ ಬಗ್ಗೆ ನನಗೆ ತಿಳಿದಿದೆ

''ನನ್ನ ವಿರುದ್ಧ ಬಂದಿರುವ ಆರೋಪದ ಬಗ್ಗೆ ನನಗೆ ತಿಳಿದಿದೆ. ಈಗ ಅದರ ಬಗ್ಗೆ ಕ್ಷಮಾಪಣೆ ಕೋರಲು ಬಯಸುತ್ತೇನೆ. ಚಿನ್ಮಯಿ ಶ್ರೀಪಾದ್​ ಅವರ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿ. ಬೇರೆಯವರಿಗೋಸ್ಕರ ಚಿನ್ಮಯಿ ಅವರ ಧ್ವನಿ ಎತ್ತಿರುವುದು ಒಳ್ಳೆಯದೇ. ನನಗೂ ಕೂಡ ಅವರು ಒಳ್ಳೆಯವರೇ. ಹೈದರಾಬಾದ್​​ನಲ್ಲಿ ಒಮ್ಮೆ ನನ್ನ ಕಛೇರಿಗೆ ಅವರು ಬಂದಿದ್ದು ನೆನಪಿದೆ. ಆಗ ಊಟಕ್ಕೆ ಬರುವಂತೆ ತಮ್ಮ ಮನೆಗೆ ಆಕೆ ಆಹ್ವಾನ ನೀಡಿದ್ದರು.''

ಆಕೆಗೆ ಹಿಂದೆಯೇ ಕ್ಷಮಾಪಣೆ ಕೇಳಿದ್ದೆ

ಆಕೆಗೆ ಹಿಂದೆಯೇ ಕ್ಷಮಾಪಣೆ ಕೇಳಿದ್ದೆ

''ಚಿನ್ಮಯಿ ಈಗ ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿರುವ ಪ್ರಕರಣ ನನಗೆ ತಿಳಿದಿದೆ. ಅದರಲ್ಲಿ ಹೇಳಿರುವ ವ್ಯಕ್ತಿ ಯಾರೆಂಬುದು ಸಹ ನನಗೆ ಗೊತ್ತಿದೆ. ಈ ಬಗ್ಗೆ ಆಕೆಗೆ ಹಿಂದೆಯೇ ಕ್ಷಮಾಪಣೆ ಕೇಳಿದ್ದೆ. ಮತ್ತೊಮ್ಮೆ ಈಗ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿಕೊಳ್ಳುವುದರ ಜೊತೆಗೆ ಮತ್ತೊಮ್ಮೆ ಅವರಲ್ಲಿ ಕ್ಷಮೆ ಕೇಳುವೆ. ಘಟನೆ ನಡೆದಿರುವುದು ನಿಜ. ಆದರೆ ಅವರು ಹೇಳಿರುವ ಎಲ್ಲವೂ ನಡೆದಿಲ್ಲ.''

ಆಕೆಯನ್ನು ನಾನು ತಬ್ಬಿಕೊಂಡೆ

ಆಕೆಯನ್ನು ನಾನು ತಬ್ಬಿಕೊಂಡೆ

''ಅದು ನನ್ನ ಕಡೆಯಿಂದ ಆದ ಸಿಲ್ಲಿ ಮಿಸ್​ ಜಡ್ಜ್​ಮೆಂಟ್​. ಒಂದು ಸುಂದರ ಹಾಡು ಆಕೆಯ ಜೊತೆಗೆ ರೂಪಗೊಂಡಿತ್ತು. ಅದರ ಬಗ್ಗೆಯೇ ನಾವು ಮಾತನಾಡುತ್ತಿದ್ದೆವು. ಆಕೆಯನ್ನು ನಾನು ತಬ್ಬಿಕೊಂಡೆ. ಅದರಿಂದಾಗಿ ಆಕೆಗೆ ಕಿಸ್​ ಕೊಡುವಂತಾಯ್ತು. ಆಗ ಆಕೆ ನನ್ನ ಸ್ಟುಡಿಯೋದಿಂದಲೂ ಹೊರ ಹೋದಳು. ನಂತರ ಆಕೆ ನನಗೆ ಮೆಸೇಜ್ ಕಳಿಸಿ, ನಾನು ನಡೆದುಕೊಂಡಿದ್ದು ಸರಿಯಿಲ್ಲವೆಂದು ತಿಳಿಸಿದಳು. ಆಗಲೇ ತಕ್ಷಣ ನಾನು ಕ್ಷಮೆ ಕೇಳಿಕೊಂಡೆ''.

ಹೆಂಡತಿ ಜೊತೆ ನನ್ನ ಸಂಬಂಧ ಚೆನ್ನಾಗಿರಲಿಲ್ಲ.

ಹೆಂಡತಿ ಜೊತೆ ನನ್ನ ಸಂಬಂಧ ಚೆನ್ನಾಗಿರಲಿಲ್ಲ.

''ಆ ವೇಳೆ ನನ್ನ ಹೆಂಡತಿ ಮತ್ತು ನನ್ನ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿರಲಿಲ್ಲ. ನನಗೆ ಒಂದು ಕಂಫರ್ಟ್​ ಬೇಕಾಗಿತ್ತು. ಆ ಕ್ಷಣವನ್ನು ನಾನು ತಪ್ಪಾಗಿ ಅರ್ಥ ಮಾಡಿಕೊಂಡೆ. ಆದರೆ, ಚಿನ್ಮಯಿ ತಮ್ಮ ಪೋಸ್ಟ್​ನಲ್ಲಿ ತಿಳಿಸಿರುವ ಎಲ್ಲ ಅಂಶಗಳನ್ನು ನಾನು ಒಪ್ಪುವುದಿಲ್ಲ. ನಾನೊಬ್ಬ ಭಕ್ಷಕನೇ..? ಖಂಡಿತಾ ಅಲ್ಲ.''

ಡೈವೋರ್ಸ್​ ಪ್ರಕ್ರಿಯೆ ನಡೆಯುತ್ತಿದೆ

ಡೈವೋರ್ಸ್​ ಪ್ರಕ್ರಿಯೆ ನಡೆಯುತ್ತಿದೆ

''ನಾನು ನನ್ನ ಹೆಂಡತಿಗೆ ಒಳ್ಳೆಯ ಗಂಡ ಆಗಿರಲಿಲ್ಲ. ನಾನು ಮೂರು ವರ್ಷಗಳಿಂದ ಆಕೆಯಿಂದ ದೂರವಿದ್ದೇನೆ. ನಾವು ಇನ್ನೇನು ಡೈವೋರ್ಸ್​ ಪ್ರಕ್ರಿಯೆಯನ್ನು ಕೊನೆಯ ಹಂತದಲ್ಲಿ ಇದ್ದೇವೆ. ನನ್ನ ಕಡೆಯಿಂದ ಡೈವೋರ್ಸ್​ ಪ್ರಕ್ರಿಯೆ ಸರಾಗವಾಗಿ ನಡೆಯಲೆಂದು ಕೆಲವು ವೃತ್ತಿಪರ ಸಲಹೆಗಾರರ ಸಂಪರ್ಕವನ್ನು ಪಡೆದಿದ್ದೇನೆ.''

ನನ್ನ ಹೆಂಡತಿಗೆ ನಾನು ಕ್ಷಮೆ ಕೇಳುವೆ

ನನ್ನ ಹೆಂಡತಿಗೆ ನಾನು ಕ್ಷಮೆ ಕೇಳುವೆ

''ನನ್ನಿಂದ ದೂರವಾದ ನನ್ನ ಹೆಂಡತಿಗೆ ನಾನು ಕ್ಷಮೆ ಕೇಳುವೆ. ಆಕೆ ನಿಜಕ್ಕೂ ಅದ್ಭುತ ವ್ಯಕ್ತಿ. ಹೃದಯದಿಂದ ಸೌಂದರ್ಯವತಿಯೂ ಹೌದು. ನನ್ನ ಅಭಿಮಾನಿಗಳು, ನನ್ನ ಸಂಗೀತವನ್ನು ಪ್ರೀತಿಸುವ ಮತ್ತು ನನ್ನನ್ನು ಇಷ್ಟಪಡುವ ಎಲ್ಲರಿಗೂ ನಾನು ಕ್ಷಮೆ ಕೇಳುತ್ತೇನೆ. ಮುಂದೊಂದು ದಿನ ಇದನ್ನು ಸರಿಯಾಗುತ್ತದೆ ಎಂಬ ಭರವಸೆ ಇದೆ.''

MeToo ಅಭಿಯಾನಕ್ಕೆ ನನ್ನ ಬೆಂಬಲವಿದೆ

MeToo ಅಭಿಯಾನಕ್ಕೆ ನನ್ನ ಬೆಂಬಲವಿದೆ

''MeToo ಅಭಿಯಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಈ ಪ್ರಕರಣದ ಬಗ್ಗೆ ಯಾವುದೇ ಕಾನೂನಾತ್ಮಕ ತನಿಖೆಗೆ ನಾನು ಸಹಕಾರ ನೀಡುತ್ತೇನೆ. ಈ ಪ್ರಕರಣದಲ್ಲಿ ನಾನೇ ಮುಖ್ಯ ವ್ಯಕ್ತಿ. ಅದು ಈ ಕ್ಷಣದ ಸತ್ಯ. ನಮ್ಮಿಂದಾಗುತ್ತಿರುವ ತಪ್ಪುಗಳಿಂದ ನಾವು ಪಾಠ ಕಲಿಯಲೇಬೇಕು. ನಾವು ಮಹಿಳೆಯರನ್ನು ಸಶಕ್ತೀಕರಣಗೊಳಿಸಲೇಬೇಕು. ಯಾವುದೇ ತನಿಖೆಯನ್ನು ನಾನು ಖುಷಿಯಿಂದಲೇ ಎದುರಿಸುವೆ.''

More from Filmibeat

English summary
Music director and singer Raghu Dixit reaction about Chinmayi Sripaada's sexual harassment claim.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X