ಬೆಂಗಳೂರಿನಲ್ಲಿ ರಘು ದೀಕ್ಷಿತ್ ಲೈವ್ ಕಾನ್ಸರ್ಟ್; ಈಗ್ಲೇ ಟಿಕೆಟ್ ಬುಕ್ ಮಾಡಿ

ಕನ್ನಡದ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ತಮ್ಮ ವಿಭಿನ್ನ ಹಾಡುಗಳಿಂದ ಸಂಗೀತ ಪ್ರೇಮಿಗಳ ಮನಗೆದ್ದಿದ್ದಾರೆ. ಜಾನಪದ ಗೀತೆಗಳಿಗೆ ರಾಕ್ ಟಚ್ ಕೊಟ್ಟು ಕೇಳುಗರು ಮೈಮರೆಯುವಂತೆ ಹಾಡುವ ಜಾದೂಗಾರ ರಘು ದೀಕ್ಷಿತ್. ದೇಶ ವಿದೇಶಗಳಲ್ಲಿ ತಮ್ಮ ಸಂಗೀತ ಕಾರ್ಯಕ್ರಮಗಳಿಂದ ಮೋಡಿ ಮಾಡಿದವರು.

ಮತ್ತೊಮ್ಮೆ ಬೆಂಗಳೂರಿನಲ್ಲಿ ಲೈವ್ ಕಾನ್ಸರ್ಟ್ ನಡೆಸಿ ಸಂಗೀತ ಪ್ರೇಮಿಗಳನ್ನು ರಂಜಿಸಲು ರಘು ದೀಕ್ಷಿತ್ ತಯಾರಿ ನಡೆಸಿದ್ದಾರೆ. ಡಿಸೆಂಬರ್ 1ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಫೀನಿಕ್ಸ್ ಮಾರ್ಕೆಟ್‌ಸಿಟಿ ಮಾಲ್‌ನಲ್ಲಿ ರಘು ದೀಕ್ಷಿತ್ ಮ್ಯೂಸಿಕ್ ಕಾನ್ಸರ್ಟ್ ನಡೀತಿದೆ. 'ಶಕ್ಕರ್' ಎಂಬ ಆಲ್ಬಮ್ ಅನ್ನು ಕೂಡ ಲಾಂಚ್ ಮಾಡಲಾಗುತ್ತಿದೆ. ಫಿಲ್ಮಿಬೀಟ್ ಈ ಲೈವ್ ಕಾನ್ಸರ್ಟ್ ಆನ್‌ಲೈನ್ ಪಾರ್ಟ್ನರ್ ಆಗಿದೆ. ಕಾರ್ಯಕ್ರಮದ ಎಲ್ಲಾ ಎಕ್ಸ್‌ಕ್ಲೂಸಿವ್ ಕವರೇಜ್ ಇಲ್ಲಿ ಸಿಗಲಿದೆ.

Raghu dixit to perform at live concert celebrating New Album Shakkar in Bengaluru

ಬಹಳ ದೊಡ್ಡಮಟ್ಟದಲ್ಲಿ ಈ ಲೈವ್ ಕಾನ್ಸರ್ಟ್ ಪ್ಲ್ಯಾನ್ ನಡೀತಿದೆ. ಈಗಾಗಲೇ ಬುಕ್‌ಮೈ ಶೋನಲ್ಲಿ ಕಾರ್ಯಕ್ರಮದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಆಸಕ್ತರು ಕೂಡ ಟಿಕೆಟ್ ಬುಕ್ ಮಾಡಿ ಸೀಟ್ ಕಾದಿರಿಸಬಹುದಾಗಿದೆ. ಈಗಾಗಲೇ 'ಶಕ್ಕರ್' ಆಲ್ಬಮ್ ಕೇಳುಗರ ಮನಗೆದ್ದಿದೆ. ಇದೀಗ ಭಾರತದಲ್ಲಿ 'ಶಕ್ಕರ್' ಆಲ್ಬಮ್ ಲಾಂಚ್ ಟೂರ್ ನಡೀತಿದೆ. ಫೀನಿಕ್ಸ್ ಮಾರ್ಕೆಟ್‌ಸಿಟಿ ಮಾಲ್‌ನಲ್ಲಿ ನಡೆಯುವ ಕಾನ್ಸರ್ಟ್‌ನಲ್ಲಿ ತಮ್ಮ ಭಾವಪೂರ್ಣ ಗಾಯನದಿಂದ ನಿಮ್ಮನ್ನು ಬೇರೆ ಲೋಕಕ್ಕೆ ರಘು ಕರೆದೊಯ್ಯಲಿದ್ದಾರೆ.

ಇನ್ನು ಅಂದಿನ ಕಾನ್ಸರ್ಟ್‌ನಲ್ಲಿ ರಘು ದೀಕ್ಷಿತ್ ಅವರ ಜನಪ್ರಿಯ 'ಮೈಸೂರು ಸೇ ಆಯಿ ಹಾಗೂ 'ಹೇ ಭಗವಾನ್' ರೀತಿಯ ಹಾಡುಗಳನ್ನು ಹಾಡಲಾಗುತ್ತದೆ. ರಘು ದೀಕ್ಷಿತ್ ಕಂಚಿನ ಕಂಠದ ಗಾಯನ, ಉಲ್ಲಾಸಭರಿತ ಉಪಸ್ಥಿತಿ ಜೊತೆಗೆ ಫ್ಯೂಷನ್ ಹಾಗೂ ಸಾಂಪ್ರದಾಯಿಕ ಸೌಂಡ್ ಸಮ್ಮಿಳನದೊಂದಿಗೆ ಎಲ್ಲಾ ವರ್ಗದ ಸಂಗೀತ ಪ್ರೇಮಿಗಳನ್ನು ರಘು ರಂಜಿಸಲು ಸಿದ್ಧರಾಗಿದ್ದಾರೆ.

https://www.instagram.com/stories/theraghudixitproject/3510626716773977541/?hl=en

ಅಕಾರ್ ಅಡ್ವರ್ಟೈಸಿಂಗ್ & ಮಾರ್ಕೆಟಿಂಗ್ ಈ ಲೈವ್ ಕಾನ್ಸರ್ಟ್‌ಗೆ ಕೈ ಜೋಡಿಸಿದೆ. ಕನ್ನಡ ಚಿತ್ರರಂಗದಲ್ಲಿ ರಘು ದೀಕ್ಷಿತ್ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಇದೀಗ ತಮ್ಮ ಸಂಗೀತ ಕಾರ್ಯಕ್ರಮದ ಮೂಲಕ ಜನರಿಗೆ ಹತ್ತಿರಕ್ಕೆ ಬರ್ತಿದ್ದಾರೆ. ನೀವೂ ಕೂಡ ಈ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಭಾಗಿ ಆಗಿ ಎಂಜಾಯ್ ಮಾಡಿ.

More from Filmibeat

English summary
Bengaluru all set for raghu dixit's grand Music concert
Read more about: raghu dixit sandalwood music
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X