For Quick Alerts
  ALLOW NOTIFICATIONS  
  For Daily Alerts

  'ಯಾರ್ ಮಗ' ಎನ್ನುತ್ತಾ ಬೆಳ್ಳಿತೆರೆ ಪ್ರವೇಶಿಸಿದ ರಘು ಪಡುಕೋಟೆ

  By ದಿವ್ಯಶ್ರೀ.ವಿ
  |

  'ಯಾರ್ ಮಗ' ಚಿತ್ರದ ಮೂಲಕ ಉತ್ತರ ಕರ್ನಾಟಕದ ಸುರಪುರದ ಹೈದ ರಘು ಪಡುಕೋಟೆ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಕಳೆದ ವರ್ಷ ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಈಗ ಶಿವರಾತ್ರಿ ಮಹೋತ್ಸವದ ಸಂಭ್ರಮದಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ.

  ಮಹಾ ಶಿವರಾತ್ರಿ ಮಹೋತ್ಸವ ಪ್ರಯಕ್ತ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಕಮ್ಯುನಿಟಿ ಹಾಲ್‌ನಲ್ಲಿ 'ಯಾರ್ ಮಗ' ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ನೆರವೇರಿದೆ.

  ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿರುವ ಸಿನಿಮಾಗಳು ಯಾವುದು?

  ಯಾರು ಈ ರಘು ಪಡುಕೋಟೆ

  ದ್ವಿತೀಯ ಪಿಯುಸಿ ಓದಿರುವ ರಘು ಪಡುಕೋಟೆಗೆ ಚಿಕ್ಕ ವಯಸ್ಸಿನಿಂದಲು ನಟನಾಗುವ ಆಸೆ. ಶಾಲಾ-ಕಾಲೇಜು ದಿನಗಳಿಂದಲೆ ಕಥೆ ಪದ್ಯ ಬರೆಯುವುದರಲ್ಲಿ ಹಾಗೂ ನಾಟಕ ನೃತ್ಯದಲ್ಲಿ ಬಹಳಷ್ಟು ಆಸಕ್ತಿಯನ್ನು ಹೊಂದಿದ್ದರು ಮತ್ತು ನಾಟಕದಲ್ಲಿ ಭಾಗವಹಿಸಿದ್ದರು.

  ರಘು ಪಡುಕೋಟೆ ಅವರು ಬೆಂಗಳೂರಿನಲ್ಲಿರುವ ನಾಟ್ಯಾಂತರ ಡ್ಯಾನ್ಸ್ ಸ್ಟುಡಿಯೋ ಹಾಗು ಚಾಮರಾಜ್ ಮಾಸ್ಟರ್ ಇನ್ಸ್ಟಿಟ್ಯೂಷನ್‌ನಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿ ವಾಸವಾಗಿದ್ದು, ಶಿವಾಜಿನಗರದಲ್ಲಿ ಕಚೇರಿ ಹೊಂದಿದ್ದಾರೆ.

  ರಘು ಅವರು 2019 ರಲ್ಲಿ 'ಏ ಸೋನಾ' ಎಂಬ ಆಲ್ಬಂ ಸಾಂಗ್ ನಿರ್ದೇಶಿಸಿದ್ದರು. ಇದರಲ್ಲಿ ಸರಿಗಮಪ ಖ್ಯಾತಿಯ ಸುನಿಲ್ ಅವರು ಗೀತೆಯನ್ನು ರಚಿಸಿ ಅಭಿನಯಿಸಿದ್ದರು.

  'ಯಾರ್ ಮಗ' ಚಿತ್ರಕ್ಕೆ ನಾಯಕ ನಟ ರಘು ಅವರೇ. ಜೊತೆಗೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ತಮ್ಮ ಸ್ವಂತ ಬ್ಯಾನರ್ ಆದ 'ಪಡುಕೋಟೆ ಪ್ರೊಡಕ್ಷನ್' ಅಡಿ ಈ ಸಿನಿಮಾ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ರಘು ಅವರ ತಂದೆ ಬಸವರಾಜ್ ಪಡುಕೋಟೆ ಅವರೇ ನಿರ್ಮಾಪಕರು.

  'ಯಾರ್ ಮಗ' ಚಿತ್ರದಲ್ಲಿ ಹಲವು ಕುತೂಹಲಕಾರಿಯಾದ ವಿಷಯಗಳಿವೆ. ಈ ಚಿತ್ರದಲ್ಲಿ ಜನರು ನೀರಿಕ್ಷಿಸುವ ಎಲ್ಲತರಹದ ಸನ್ನಿವೇಶ ಹಾಗೂ ಪಾತ್ರಗಳು ಇದೆ ಎಂದಿದ್ದಾರೆ ರಘು ಪಡುಕೋಟೆ. ಒಂದು ಚಿತ್ರಕ್ಕೆ ಬೇಕಾದ ಎಲ್ಲಾ ತರಹದ ಮನರಂಜನೆಯು ಅಂದರೆ ಮಾಸ್, ಕಮರ್ಷಿಯಲ್, ತಾಯಿಯ ಭಾವನಾತ್ಮಕವಾದ ವಾತ್ಸಲ್ಯ ಮತ್ತು ಹದಿಹರೆಯದಲ್ಲಿ ಆಗುವ ಪ್ರೀತಿ ಮತ್ತು ಬಿರುಕು ಅದರಿಂದ ಆಗುವ ನೋವು ಮತ್ತು ಹಾಸ್ಯ ಈ ಚಿತ್ರದಲ್ಲಿ ನೀವೆಲ್ಲರೂ ನೋಡಬಹುದು.

  ಈ ಚಿತ್ರದಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯ ಅಂಜಲಿ, ಸುಕೃತ ನಾಗ್ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಫೈಟ್ ಮಾಸ್ಟರ್ ಆಗಿ ರಾಮ್ ಲಕ್ಷ್ಮಣ್ ಮತ್ತು ಅಲ್ಟಿಮೇಟ್ ಶಿವ ಮತ್ತು ಪ್ರವೀಣ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

  ಇದು ನಾಚಿಕೆಗೇಡು ಎಂದು ಜೊಮ್ಯಾಟೊಗೆ ಬೈದ ಪರಿಣಿತಿ ಚೋಪ್ರಾ | Filmibeat Kannada

  ಆಂಟನಿ ದಾಸ್, ಅನನ್ಯ ಭಟ್, ವಿಜಯಪ್ರಕಾಶ್, ಚಿನ್ಮಯ್, ಮತ್ತು ಕಾರ್ತಿಕ್ ಇವರೆಲ್ಲರೂ 'ಯಾರ್ ಮಗ' ಚಿತ್ರಕ್ಕೆ ಗಾಯಕರಾಗಿದ್ದಾರೆ.

  English summary
  Raghu Padukote Sandalwood Debut with Yar Maga Movie under his own banner Padukote productions.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X