For Quick Alerts
  ALLOW NOTIFICATIONS  
  For Daily Alerts

  ಮಾಸ್ ಆಗಿ ‘ಟಕ್ಕರ್’ ಕೊಡೋಕೆ 'ರನ್ ಆಂಟೋನಿ' ನಿರ್ದೇಶಕ ರಘು ಶಾಸ್ತ್ರಿ ರೆಡಿ

  |

  'ಟಕ್ಕರ್' ಸದ್ಯ ಬಿಡುಗಡೆಗೆ ಸಿದ್ದವಾಗಿ ಸಖತ್ ಸುದ್ದಿಯಲ್ಲಿರುವ ಸ್ಯಾಂಡಲ್‌ವುಡ್‌ ಸಿನಿಮಾ. ಮಾಸ್ ಟೈಟಲ್, ಟೈಟಲ್ ಮೀರಿಸೋ ಕಥೆ, ಚಿತ್ರಕಥೆಯೊಂದಿಗೆ ಎರಡನೇ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ ರಘು ಶಾಸ್ತ್ರಿ. ವಿನಯ್ ರಾಜ್ ಕುಮಾರ್ ನಟಿಸಿದ್ದ 'ರನ್ ಆಂಟನಿ'ಯಂತಹ ವಿಶಿಷ್ಟ ಸಿನಿಮಾವನ್ನು ಸ್ಯಾಂಡಲ್‌ವುಡ್‌ ಕೊಟ್ಟಿದ್ದರು. ಈ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದ ರಘು ಶಾಸ್ತ್ರಿ, ಇದೀಗ ಮಾಸ್ ಫೀಲ್‌ನಲ್ಲಿ ಎರಡನೇ ಸಿನಿಮಾವನ್ನು ನಿರ್ದೇಶಿಸಿದ್ದು, ಮೇ 6ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ

  'ಟಕ್ಕರ್' ಸಿನಿಮಾದಲ್ಲಿ ಸೈಬರ್ ಕ್ರೈಂ ಕಥಾಹಂದರವಿದೆ. ಹಾಗಂತ ಬರೀ ಥ್ರಿಲ್ಲಿಂಗ್ ಎಲಿಮೆಂಟ್‌ಗಳೇ ತುಂಬಿಲ್ಲ. ಈ ಭಾರಿ ಮಾಸ್ ಆಗಿ ಪಕ್ಕಾ ಕಮರ್ಶಿಯಲ್ ಆಗಿ ಸೈಬರ್ ಕ್ರೈಂ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ ರಘು ಶಾಸ್ತ್ರಿ. ಆದ್ರಿಂದ ಥ್ರಿಲ್ಲಿಂಗ್ ಎಲಿಮೆಂಟ್ ಜೊತೆಗೆ ಮಾಸ್ ಆಕ್ಷನ್ ಕೂಡ ಸಿನಿಮಾದಲ್ಲಿರಲಿದೆ. ಟೀಸರ್ ನೋಡಿದವರಿಗೆ ಈಗಾಗಲೇ ಇದು ಗಮನಕ್ಕೂ ಬಂದಿದೆ.

  ಇವರ ಈ ಪ್ರಯತ್ನಕ್ಕೆ ಪ್ರೋತ್ಸಾಹವಾಗಿ ನಿಂತವರು ನಿರ್ಮಾಪಕ ನಾಗೇಶ್ ಕೋಗಿಲು. ಸಿನಿಮಾ ಬಗ್ಗೆ ಅಪಾರ ಪ್ಯಾಷನ್ ಇರುವ ನಾಗೇಶ್ ಕೋಗಿಲು ನಿರ್ಮಿಸುತ್ತಿರುವ ಎರಡನೇ ಸಿನಿಮಾವಿದು. ಕಥೆಗೆ ಬೇಕಾದ ಎಲ್ಲಾ ಅದ್ಧೂರಿತನವೂ ಚಿತ್ರದಲ್ಲಿದ್ದು ಎಸ್ ಎಲ್ ಎನ್ ಕ್ರಿಯೇಷನ್ಸ್ ಬ್ಯಾನರ್ ನಡಿ ಸಿನಿಮಾವನ್ನು ನಿರ್ಮಿಸಿದ್ದಾರೆ.

  Raghu Shastri Directed Manoj Kumar and Rajani Raghvan Starrer Takkar Movie Facts

  ರಘು ಶಾಸ್ತ್ರಿ ಈ ಕಥೆಗೆ ಹೊಸ ನಟ ಮನೋಜ್ ಕುಮಾರ್ ನಾಯಕ, ರಂಜನಿ ರಾಘವನ್ ನಾಯಕಿ. ಮನೋಜ್ ಮೊದಲ ಸಿನಿಮಾವಾದರೂ ಅನುಭವಿ ಕಲಾವಿದನಂತೆ ಅಭಿನಯಿಸಿದ್ದು, ಸಿನಿಮಾಗೆ ಬೇಕಾದ ಎಲ್ಲಾ ತಯಾರಿಯೊಂದಿಗೆ ನಾಯಕ ನಟನಾಗಿ ಎಂಟ್ರಿಕೊಟ್ಟಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಸಂಬಂಧಿಯಾಗಿದ್ದರೂ, ತನ್ನ ಪ್ರತಿಭೆಯಿಂದಲೇ ಚಿತ್ರರಂಗದಲ್ಲಿ ನೆಲೆಯೂರಲು ನಿರ್ಧರಿಸಿದ್ದರೆ.

  ಸಾಧುಕೋಕಿಲ, ಜೈಜಗದೀಶ್, ಶ್ರೀಧರ್, ಸುಮಿತ್ರ, ಕುರಿ ಸುನೀಲ್ ಹೀಗೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತ, ಕೆ.ಎಂ ಪ್ರಕಾಶ್ ಸಂಕಲನ ವಿಲಿಯಂ ಡೇವಿಡ್ ಸಿನಿಮಾಟೋಗ್ರಫಿ ಟಕ್ಕರ್ ಚಿತ್ರಕ್ಕಿದೆ.

  English summary
  Raghu Shastri Directed Manoj Kumar and Rajani Raghvan Starrer Takkar Movie Facts, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X