Just In
Don't Miss!
- News
ಚಿನ್ನದ ಬೆಲೆ ಏರಿಳಿತ: ಜನವರಿ 25ರ ಬೆಲೆ ಹೀಗಿದೆ
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Sports
"ಸಿಡ್ನಿಯಲ್ಲಿ ನಾನು 30 ನಿಮಿಷ ಹೆಚ್ಚು ಬ್ಯಾಟಿಂಗ್ ಮಾಡಿದ್ದರೆ ಭಾರತ ಗೆಲ್ಲುವ ಸಾಧ್ಯತೆಯಿತ್ತು"
- Automobiles
ಪವರ್ಫುಲ್ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆದುಕೊಳ್ಳಲಿದೆ ಸ್ಕೋಡಾ ಕುಶಾಕ್
- Lifestyle
ನಿಮ್ಮ ದೇಹದ ಮೇಲಿನ ಕೂದಲು ಹೇಳುತ್ತೆ ನಿಮ್ಮ ಆರೋಗ್ಯದ ಭವಿಷ್ಯ
- Education
Indian Air Force Recruitment 2021: ಏರ್ಮೆನ್ ಗ್ರೂಪ್ X & Y ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
SSLCಯಲ್ಲಿ ಮಗಳ ಸಾಧನೆ: ನಿರ್ದೇಶಕ ರಘುರಾಮ್ ಸಂತೋಷಕ್ಕೆ ಪಾರವೇ ಇಲ್ಲ
ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದೆ. ಇಬ್ಬರು ವಿದ್ಯಾರ್ಥಿಗಳು ಔಟ್ ಆಫ್ ಔಟ್ 625ಕ್ಕೆ 625 ಮಾರ್ಕ್ಸ್ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇನ್ನು ಅನೇಕ ವಿದ್ಯಾರ್ಥಿಗಳು 625ಕ್ಕೆ 624 ಮರ್ಕ್ಸ್ ಪಡೆದು ಸಾಧನೆ ಮಾಡಿದ್ದಾರೆ. SSLC ಓದುತ್ತಿದ್ದ ಮಕ್ಕಳಿದ್ದರೆ ಪ್ರತಿಯೊಬ್ಬ ಪೋಷಕರಿಗೂ ಮಕ್ಕಳ ಫಲಿತಾಂಶ ಮೇಲೆ ಕುತೂಹಲ ಹೆಚ್ಚಾಗಿರುತ್ತೆ.
ಆ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಇದ್ರ ಜೊತೆಗೆ ನಟ-ನಟಿಯರ ಮಕ್ಕಳು ಯಾರಾದ್ರು ಇದ್ದಾರಾ ಎನ್ನುವ ಕುತೂಹಲ ಸಹಜವಾಗಿಯೆ ಕಾಡುತ್ತೆ. ಯಾಕೆಂದ್ರೆ ಮೊನ್ನೆ ಮೊನ್ನೆಯಷ್ಟೆ ಪಿಯುಸಿ ಫಲಿತಾಂಶ ಪ್ರಕಟವಾಗಿತ್ತು. ನಟ ನೆನಪಿರಲು ಪ್ರೇಮ್ ಪುತ್ರಿ ಅಮೃತಾ 91% ಮಾರ್ಕ್ಸ್ ಪಡೆಯುವ ಮೂಲಕ ಪೊಷಕರಿಗೆ ಸಂತಸ ತಂದಿದ್ದರು.
ದ್ವಿತೀಯ ಪಿಯುಸಿಯಲ್ಲಿ ಅಪ್ಪನಿಗೆ ಕೀರ್ತಿ ತಂದ ಪ್ರೇಮ್ ಪುತ್ರಿ
ಆದ್ರೀಗ SSLCಯಲ್ಲಿ ನಟ ಮತ್ತು ನಿರ್ದೇಶಕ ರಾಘುರಾಮ್ ಪುತ್ರಿ ನನಸು ಪೋಷಕರಿಗೆ ಕೀರ್ತಿ ತಂದಿದ್ದಾರೆ. ನನಸು SSLCಯಲ್ಲಿ 92% ಪಡೆದುಕೊಂಡಿದ್ದಾರೆ. ಈ ಸಂತಸವನ್ನು ನಟ ಮತ್ತು ನಿರ್ದೇಶಕ ರಘರಾಮ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಗಳು ನನಸು ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಮಗಳ ಸಾಧನೆಯ ಖುಷಿಯನ್ನು ಹಂಚಿಕೊಂಡಿದ್ದಾರೆ."ಸಮೀಕ್ಷೆ ಅನ್ನೋ ವಿದ್ಯಾರ್ಹತೆಯ SSLC ಪರೀಕ್ಷೆಯಲ್ಲಿ ನನ್ನ ಮಗಳು ನನಸು ಶೇಕಡಾ 92% ನಲ್ಲಿ ಉತೀರ್ಣ ಹೊಂದಿದ್ದಾಳೆ ಎಂದು ತಿಳಿಸಲು ಖುಷಿ ಮತ್ತು ಹೆಮ್ಮೆ ಪಡುತ್ತೇನೆ" ಎಂದು ಮಗಳ ಸಾಧನೆ ಮತ್ತು ಸಂತಸವನ್ನು ಹಂಚಿಕೊಂಡಿದ್ದಾರೆ.