ಮಾದೇಶನಿಗೆ ಮತ್ತೆ ಸಿನಿಮಾ ಡೈರೆಕ್ಟ್ ಮಾಡುತ್ತಿರುವ ಯೋಗೇಶ

ಸ್ಯಾಂಡಲ್ ವುಡ್ ನಲ್ಲಿ ಮಾದೇಶ ಮತ್ತು ಯೋಗೇಶ ಅಂತಾನೆ ಖ್ಯಾತಿ ಗಳಿಸರುವ ನಟ ಮತ್ತು ನಿರ್ದೇಶಕ ರಘುರಾಮ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೆ ಒಟ್ಟಿಗೆ ಬರುತ್ತಿದ್ದಾರೆ. ಅಂದ್ರೆ ಸೆಂಚುರಿ ಸ್ಟಾರ್ ಗೆ ರಘುರಾಮ್ ಸಿನಿಮಾ ನಿರ್ದೇಶನ ಮಾಡುವ ಪ್ಲಾನ್ ಮಾಡಿದ್ದಾರೆ. ಈ ಮೊದಲು ಶಿವರಾಜ್ ಕುಮಾರ್ ಅವರ 'ಚೆಲುವೆ ನಿನ್ನ ನೋಡಲು' ಚಿತ್ರವನ್ನು ನಿರ್ದೇಶನ ಮಾಡಿದ್ದ ರಘುರಾಮ್ ಈಗ ಎರಡನೇ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ.

ರಘುರಾಮ್ ಇತ್ತೀಚಿಗೆ 'ಮಿಸ್ಸಿಂಗ್ ಬಾಯ್' ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದರು. ಕಷ್ಟದಲ್ಲಿದ್ದ ರಘುರಾಮ್ ಬೆನ್ನಿಗೆ ನಿಂತು ಹ್ಯಾಟ್ರಿಕ್ ಹೀರೋ ಸಹಾಯ ಮಾಡಿದ್ದರು. 'ಮಿಸ್ಸಿಂಗ್ ಬಾಯ್' ಚಿತ್ರದ ಟ್ರೈಲರ್ ಗೆ ಹಿನ್ನಲೆ ದ್ವನಿ ನೀಡುವ ಮೂಲಕ ರಘುರಾಮ್ ಗೆ ಸಾಥ್ ನೀಡಿದ್ದರು. 'ಮಿಸ್ಸಿಂಗ್ ಬಾಯ್' ಚಿತ್ರಕ್ಕೆ ಚಿತ್ರಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಈಗ ಶಿವಣ್ಣ ಅವರಿಗೆ ಸಿನಿಮಾ ನಿರ್ದೇಶನ ಮಾಡಲು ಸ್ಕ್ರಿಪ್ಟ್ ತಯಾರಿ ನಡೆಸುತ್ತಿದ್ದಾರೆ. ಈಗಾಗಲೆ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ರಘುರಾಮ್ ಇದೇ ತಿಂಗಳು 27ರಿಂದ ರಘುರಾಮ್ ಮಗಳು ಹುಟ್ಟುಹಬ್ಬದ ದಿನದಿಂದ ಅಧಿಕೃತವಾಗಿ ಚಿತ್ರದ ಕೆಲಸ ಶುರು ಮಾಡಿಕೊಳ್ಳಲಿದ್ದಾರಂತೆ. ಈ ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಆಗಿರಲಿದೆಯಂತೆ.

raghuram direct a movie to hatrick hero shivaraj kumar

ನಾಯಕನ ಪಾತ್ರದಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ಶೇಡ್ ಗಳು ಇರಲಿದೆಯಂತೆ. ಇನ್ನು ವಿಶೇಷ ಅಂದ್ರೆ ಚಿತ್ರದಲ್ಲಿ ಅಕ್ರಮ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಕಾನೂನು ಸಲಹೆಗಾರನ ಪಾತ್ರ ಆಗಿರಲಿದೆಯಂತೆ. ಸದ್ಯ ಒಂದು ಲೈನ್ ಕತೆ ಸಿದ್ಧಮಾಡಿಕೊಂಡಿರುವ ರಘುರಾಮ್ ಇನ್ನು ಐದಾರು ತಿಂಗಳಲ್ಲಿ ಸ್ಕ್ರಿಪ್ಟ್ ಕೆಲಸ ಸಂಪೂರ್ಣಗೊಳಿಸುವ ಪ್ಲಾನ್ ಮಾಡಿದ್ದಾರೆ.

ಈ ಕಥೆ ಶಿವಣ್ಣನಿಗೆ ಇಷ್ಟ ಆದ್ರೆ ಮುಂದಿನ ವರ್ಷ ಚಿತ್ರ ಸೆಟ್ಟೇರುವುದು ಪಕ್ಕಾ. ಹ್ಯಾಟ್ರಿಕ್ ಹೀರೋ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ 'ರುಸ್ತುಂ' ರಿಲೀಸ್ ಗೆ ಕಾಯುತ್ತಿರುವ ಶಿವಣ್ಣ 'ಆನಂದ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 'ದ್ರೋಣ' ಸಿನಿಮಾ ಕೂಡ ಶೂಟಿಂಗ್ ಹಂತದಲ್ಲಿದೆ.

More from Filmibeat

English summary
kannada actor and director raghuram direct a movie to hatrick hero shivarajkumar. raghuram second time direct a movie to shivaraj kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X