»   » ಪ್ರಜ್ವಲ್ ದೇವರಾಜ್ ಪತ್ನಿ ಅಭಿನಯದ 'ರಿಷಭಪ್ರಿಯ' ಪೋಸ್ಟರ್ ಬಿಡುಗಡೆ

ಪ್ರಜ್ವಲ್ ದೇವರಾಜ್ ಪತ್ನಿ ಅಭಿನಯದ 'ರಿಷಭಪ್ರಿಯ' ಪೋಸ್ಟರ್ ಬಿಡುಗಡೆ

Posted By:
Subscribe to Filmibeat Kannada

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ಅಭಿನಯದ 'ರಿಷಭಪ್ರಿಯ' ಕಿರುಚಿತ್ರ ಹಂತ ಹಂತವಾಗಿ ಕುತೂಹಲ ಹೆಚ್ಚಿಸುತ್ತಿದೆ. ಸದ್ದಿಲ್ಲದೇ ಶೂಟಿಂಗ್ ಮಾಡುತ್ತಿರುವ 'ರಿಷಭಪ್ರಿಯ' ಈಗ ಚಿತ್ರದ ಫಸ್ಟ್ ಲುಕ್ ಪೊಸ್ಟರ್ ಬಿಡುಗಡೆ ಮಾಡಿದೆ.

ರಾಗಿಣಿ ಚಂದ್ರನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶ್ರೀಮಹಾದೇವ್ ನಾಯಕರಾಗಿದ್ದಾರೆ. ಇವರ ಜೊತೆ ಸಿಹಿಕಹಿ ಚಂದ್ರು, ಸಿಹಿಕಹಿ ಗೀತಾ, ಸೋಮಶೇಖರ್ ಜೋಯಿಸ್, ಚಿನ್ಮಯಿ ಆಥ್ರೇಯಸ್, ಸ್ಪರ್ಶಾ ಆರ್.ಕೆ ಸೇರಿದಂತೆ ಹಲವು ಕಲಾವಿದರು ಅಭಿನಯಿಸುತ್ತಿದ್ದಾರೆ.

ಬಣ್ಣ ಹಚ್ಚಿ ಶೂಟಿಂಗ್ ಗೆ ಹಾಜರಾದ ಪ್ರಜ್ವಲ್ ಪತ್ನಿ ರಾಗಿಣಿ ಚಂದ್ರನ್

Ragini Chandran Starrer Rishabapriya First Look Poster Release

ಅಂದ್ಹಾಗೆ, 'ರಿಷಭಪ್ರಿಯ' ಮ್ಯೂಸಿಕಲ್ ಕಿರುಚಿತ್ರವಾಗಿದ್ದು, ಆರ್ ಜೆ ಮಯೂರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚರಣ್ ರಾಜ್ ಸಂಗೀತ ನೀಡುತ್ತಿದ್ದಾರೆ. ಇನ್ನು ಈ ಕಿರುಚಿತ್ರದ ಸ್ಪೆಷಾಲಿಟಿ ಅಂದ್ರೆ, ಡಿಂಪಲ್ ಕ್ವೀನ್ ರಚಿತಾ ರಾಮ್ ಚೊಚ್ಚಲ ಬಾರಿಗೆ ನಿರ್ಮಾಣದಲ್ಲಿ ತೊಡಗಿಕೊಂಡಿದ್ದು, 'ರಿಷಭಪ್ರಿಯ' ಕಿರುಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ದೇವರಾಜ್ ಸೊಸೆ ರಾಗಿಣಿ ಚಂದ್ರನ್ ಬಗ್ಗೆ ಗಾಂಧಿನಗರದಲ್ಲಿ ಕಿವಿಗೆ ಬಿದ್ದ ಹೊಸ ಸುದ್ದಿ ಇದು.!

English summary
Kannada Actor Prajwal Devaraj Wife Ragini Chandran Starrer Rishabapriya Short Film First Look Poster Released. The Movie Directed by RJ Mayur and Produced By Actress Rachita Ram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada