ಪ್ರಜ್ವಲ್ ಪತ್ನಿ ರಾಗಿಣಿ ಚಂದ್ರನ್ ಬಗ್ಗೆ ಕೇಳಿಬಂದ ಹೊಸ ಸುದ್ದಿ ಇದು.!
Recommended Video

ಸ್ಯಾಂಡಲ್ ವುಡ್ ನ ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಹುಡುಗ ಪ್ರಜ್ವಲ್ ದೇವರಾಜ್ ಮದುವೆ ಆಗಿ ಮೂರು ವರ್ಷಗಳು ಕಳೆದಿವೆ. ಮಾಡೆಲ್ ಮತ್ತು ಡ್ಯಾನ್ಸರ್ ಆಗಿದ್ದ ರಾಗಿಣಿ ಚಂದ್ರನ್ ಅವರನ್ನ ಪ್ರಜ್ವಲ್ ದೇವರಾಜ್ ಪ್ರೀತಿಸಿ, ವಿವಾಹವಾದರು.
ಮಾಡೆಲಿಂಗ್ ಲೋಕದಲ್ಲಿ ಯಶಸ್ಸು ಕಂಡಿದ್ದ ರಾಗಿಣಿ ಚಂದ್ರನ್ ಕಿರುಚಿತ್ರದಲ್ಲಿ ಅಭಿನಯಿಸಿದ್ದರು. ಆರ್.ಜೆ.ಮಯೂರ್ ನಿರ್ದೇಶನದ 'ರಿಷಭಾಪ್ರಿಯ' ಎಂಬ ಶಾರ್ಟ್ ಮೂವಿಯಲ್ಲಿ ರಾಗಿಣಿ ಚಂದ್ರನ್ ಸಂಪ್ರದಾಯಸ್ತ ಹುಡುಗಿಯಾಗಿ ಕಾಣಿಸಿಕೊಂಡಿದ್ದರು.
ರಚಿತಾ ರಾಮ್ ಬಂಡವಾಳ ಹಾಕಿದ್ದ ಈ 'ರಿಷಭಾಪ್ರಿಯ' ಕಿರುಚಿತ್ರದ ಬಳಿಕ ಇದೀಗ ರಾಗಿಣಿ ಚಂದ್ರನ್ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಅದೇನಪ್ಪಾ ಅಂದ್ರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಪ್ರಜ್ವಲ್ ದೇವರಾಜ್ ಜೊತೆಗೆ ಪತ್ನಿ ನಟನೆ.?
ಪತಿ ಪ್ರಜ್ವಲ್ ದೇವರಾಜ್ ಜೊತೆಗೆ ನಟಿಸಬೇಕು ಎಂಬ ಆಸೆ ರಾಗಿಣಿ ಚಂದ್ರನ್ ಗಿದೆ. ಇನ್ನೂ ಪತ್ನಿ ರಾಗಿಣಿ ಜೊತೆಗೆ ಸ್ಕ್ರೀನ್ ಶೇರ್ ಮಾಡಬೇಕು ಎಂಬ ಬಯಕೆ ಪ್ರಜ್ವಲ್ ದೇವರಾಜ್ ರವರಿಗೂ ಇದೆ. ಇದೀಗ ಪತಿ-ಪತ್ನಿಯ ಈ ಆಸೆ ಈಡೇರುವ ಹಂತದಲ್ಲಿದೆ.

'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದಲ್ಲಿ ರಾಗಿಣಿ ಚಂದ್ರನ್.?
'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಜೊತೆಗೆ ರಾಗಿಣಿ ಚಂದ್ರನ್ ತೆರೆಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೀಗಷ್ಟೇ ಗಾಂಧಿನಗರದಿಂದ ಬಂದಿದೆ.

ಹೀರೋಯಿನ್ ಅಲ್ಲ.!
'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರಕ್ಕೆ ಈಗಾಗಲೇ ನಾಯಕಿ ಆಗಿ ಭಾವನಾ ಮೆನನ್ ಆಯ್ಕೆ ಆಗಿದ್ದಾರೆ. ಹೀಗಾಗಿ, ಈ ಸಿನಿಮಾದಲ್ಲಿ ರಾಗಿಣಿ ಚಂದ್ರನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿಲ್ಲ. ಬದಲಾಗಿ, ವಿಶೇಷ ಪಾತ್ರವೊಂದರಲ್ಲಿ ಪ್ರಜ್ವಲ್ ದೇವರಾಜ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ.

ಹಲವು ಸ್ಪೆಷಾಲಿಟಿಗಳು
'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಕೇಮಿಯೋ ಮಾಡ್ತಿದ್ದಾರೆ. ವಿಲನ್ ಪಾತ್ರಕ್ಕೆ ರಮೇಶ್ ಅರವಿಂದ್ ಬಣ್ಣ ಹಚ್ಚಿದ್ದಾರೆ. ಇದೀಗ ಚಿತ್ರತಂಡಕ್ಕೆ ರಾಗಿಣಿ ಚಂದ್ರನ್ ಕೂಡ ಸೇರಿಕೊಂಡಿದ್ದಾರೆ. ನರಸಿಂಹ ನಿರ್ದೇಶನದ 'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.


Click it and Unblock the Notifications











