ಸುಮಲತಾ ವಿಜಯ : ರಾಗಿಣಿ, ಹರಿಪ್ರಿಯಾ ಶುಭಾಶಯ
ನಟಿ ಸುಮಲತಾ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜಯ ಸಾಧಿಸಿದ್ದಾರೆ. ಬರೀ ಪೈಪೋಟಿಯ ನಡುವೆ ಗೆದ್ದು ಬಂದ ಸುಮಲತಾಗೆ ನಟಿ ಹರಿಪ್ರಿಯಾ ಹಾಗೂ ರಾಗಿಣಿ ದ್ವಿವೇದಿ ಶುಭಾಶಯ ತಿಳಿಸಿದ್ದಾರೆ.
ಸುಮಲತಾ ಬಗ್ಗೆ ಟ್ವೀಟ್ ಮಾಡಿರುವ ರಾಗಿಣಿ ''ಒಂದು ಹೆಣ್ಣಿನ ವಿಜಯದ ಮುಖ ತೋರಿಸಿದ್ದಕ್ಕೆ ಸುಮಲತಾ ಮೇಡಮ್ ನಿಮಗೆ ಅಭಿನಂದನೆ. ಕೀಪ್ ರಾಕಿಂಗ್.'' ಎಂದಿದ್ದಾರೆ.
ಜೊತೆಗೆ ಬಿಜೆಪಿ ಪಕ್ಷಕ್ಕೆ ಹಾಗೂ ನರೇಂದ್ರ ಮೋದಿ ಅವರಿಗೆ ಶುಭಾಶಯ ತಿಳಿಸಿ, ಇನ್ನು ಐದು ವರ್ಷ ಅದ್ಭುತ ಕೆಲಸ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.

ನಟಿ ಹರಿಪ್ರಿಯಾ, ''ಬಹು ನಿರೀಕ್ಷೆಯ ಹಾಗೂ ದೊಡ್ಡ ಗೆಲುವಿಗೆ ಅಭಿನಂದನೆಗಳು ಅಮ್ಮ'' ಎಂದು ಟ್ವೀಟ್ ಮಾಡಿದ್ದಾರೆ. 'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾದಲ್ಲಿ ಹರಿಪ್ರಿಯಾರ ತಾಯಿಯ ಪಾತ್ರದಲ್ಲಿ ಸುಮಲತಾ ಕಾಣಿಸಿಕೊಂಡಿದ್ದು, ಟ್ವಿಟ್ಟರ್ ನಲ್ಲಿಯೂ ಅಮ್ಮ ಎಂದು ಕರೆದಿದ್ದಾರೆ.
ಸುಮಲತಾ ಹಾಗೂ ಹರಿಪ್ರಿಯಾ ಅವರ 'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾ ನಾಳೆ (ಮೇ 24) ರಂದು ರಾಜ್ಯಾದಂತ್ಯ ಬಿಡುಗಡೆಯಾಗಲಿದೆ. ಇದು ಹರಿಪ್ರಿಯಾ ನಟನೆಯ 25ನೇ ಸಿನಿಮಾವಾಗಿದೆ.


Click it and Unblock the Notifications











