twitter
    For Quick Alerts
    ALLOW NOTIFICATIONS  
    For Daily Alerts

    ಎನ್‌ಡಿಪಿಎಸ್ ಕೋರ್ಟ್‌ ಮುಂದೆ ಮೂರು ಕೋರಿಕೆಯಿಟ್ಟ ನಟಿ ರಾಗಿಣಿ

    |

    ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಜೈಲಿನಲ್ಲಿರುವ ನಟಿ ರಾಗಿಣಿ ದ್ವಿವೇದಿ ಎನ್‌ಡಿಪಿಎಸ್ ವಿಶೇಷ ಕೋರ್ಟ್‌ ಮುಂದೆ ಮೂರು ಕೋರಿಕೆಯನ್ನಿಟ್ಟಿದ್ದಾರೆ. ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ಸೆಪ್ಟೆಂಬರ್ 28 ರಂದು ವಜಾಗೊಳಿಸಿ, ಅಕ್ಟೋಬರ್ 23ರವರೆಗೂ ನ್ಯಾಯಾಂಗ ಬಂಧನ ಮುಂದುವರಿಸುವಂತೆ ಆದೇಶಿಸಿತ್ತು.

    ಇದರಿಂದ ಮತ್ತೆ ಕಂಗಲಾದ ನಟಿ ರಾಗಿಣಿ ದ್ವಿವೇದಿ ಪರ ವಕೀಲರು ಸೋಮವಾರ ಎನ್‌ಡಿಪಿಎಸ್‌ ಕೋರ್ಟ್‌ಗೆ ಮೂರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ನಟಿ ರಾಗಿಣಿ ದ್ವಿವೇದಿ ಸಲ್ಲಿರುವ ಮೂರು ಅರ್ಜಿಗಳ ವಿಚಾರಣೆ ನಡೆಸಿಲಿರುವ ಕೋರ್ಟ್ ಅದಕ್ಕೆ ಸಮ್ಮತಿ ನೀಡುತ್ತಾ ಎಂಬ ಕುತೂಹಲ ಕಾಡಿದೆ. ಅಷ್ಟಕ್ಕೂ, ಏನದು ಮೂರು ಕೋರಿಕೆ? ಮುಂದೆ ಓದಿ...

    ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

    ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

    ಬೆನ್ನು ನೋವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕು ಎಂಬುದು ಮೊದಲ ಮನವಿಯಾಗಿದೆ. ರಾಗಿಣಿ ದ್ವಿವೇದಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಂದರ್ಭದಲ್ಲಿ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ನ್ಯಾಯಾಲಯ ಸೂಚನೆ ನೀಡಿತ್ತು. ಆದರೆ, ಈಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಮನವಿ ಮಾಡಲಾಗಿದೆ.

    ನಟಿಯರ ನ್ಯಾಯಾಂಗ ಬಂಧನ ವಿಸ್ತರಣೆ: ಹೈ ಕೋರ್ಟ್‌ ಮೊರೆ ಹೋದ ಸಂಜನಾನಟಿಯರ ನ್ಯಾಯಾಂಗ ಬಂಧನ ವಿಸ್ತರಣೆ: ಹೈ ಕೋರ್ಟ್‌ ಮೊರೆ ಹೋದ ಸಂಜನಾ

    ಕುಟುಂಬ ಸದಸ್ಯರ ಭೇಟಿಗೆ ಅವಕಾಶ

    ಕುಟುಂಬ ಸದಸ್ಯರ ಭೇಟಿಗೆ ಅವಕಾಶ

    ರಾಗಿಣಿ ದ್ವಿವೇದಿ ಸೆಪ್ಟೆಂಬರ್ 14ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ, ಕುಟುಂಬದವರನ್ನು ಭೇಟಿ ಮಾಡಲು ಅವಕಾಶ ಕೊಟ್ಟಿಲ್ಲ. ಹೀಗಾಗಿ, ಕುಟುಂಬದವರು, ವಕೀಲರ ಭೇಟಿಗೆ ಅವಕಾಶ ನೀಡುವಂತೆ ಮತ್ತೊಂದು ಅರ್ಜಿಯನ್ನು ಸಲ್ಲಿಕೆ ಮಾಡಲಾಗಿದೆ.

    ಐಪಾಡ್, ಪೆನ್ ಡ್ರೈವ್ ವಾಪಸ್ ಕೊಡಿ

    ಐಪಾಡ್, ಪೆನ್ ಡ್ರೈವ್ ವಾಪಸ್ ಕೊಡಿ

    ಸಿಸಿಬಿ ಪೊಲೀಸರು ರಾಗಿಣಿ ನಿವಾಸದ ಮೇಲೆ ದಾಳಿ ಮಾಡಿದಾಗ ಐಪಾಡ್, ಪೆನ್ ಡ್ರೈವ್ ವಶಕ್ಕೆ ಪಡೆದುಕೊಂಡಿದ್ದರು. ತಾಯಿ, ತಮ್ಮನ ಐಪಾಡ್, ಪೆನ್ ಡ್ರೈವ್ ವಾಪಸ್ ನೀಡುವಂತೆ 3ನೇ ಅರ್ಜಿಯಲ್ಲಿ ರಾಗಿಣಿ ದ್ವಿವೇದಿ ಪರ ವಕೀಲರು ಮನವಿ ಮಾಡಿದ್ದಾರೆ.

    Recommended Video

    ಅಭಿಮಾನಿಗಳ ಮುಂದೆ ಪ್ರೀತಿಯಿಂದ ಮನವಿ ಮಾಡಿಕೊಂಡ Dhruva Sarja | Filmibeat Kannada
    ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ

    ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ

    ಸೆಪ್ಟೆಂಬರ್ 28ರಂದು ರಾಗಿಣಿ ಜಾಮೀನು ಅರ್ಜಿಯನ್ನು ಎನ್‌ಡಿಪಿಎಸ್ ವಿಶೇಷ ಕೋರ್ಟ್ ವಜಾಗೊಳಿಸಿತ್ತು. ಈಗ ಜಾಮೀನು ಪಡೆಯಲು ರಾಗಿಣಿ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಬೇಕಿದೆ. ಮತ್ತೊಂದೆಡೆ ಸಂಜನಾ ಗಲ್ರಾನಿ ಪರ ವಕೀಲರು ಹೈಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

    English summary
    Actress Ragini Dwivedi appeals to NDPS court to allow private hospital treatment for back pain.
    Monday, October 12, 2020, 17:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X