ಶಿವರಾತ್ರಿ ಹಬ್ಬದ ಸಂಭ್ರಮದಲ್ಲಿ ನಟಿ ರಾಗಿಣಿ ದ್ವಿವೇದಿ
ಚಂದನವನದ ನಟಿ ರಾಗಿಣಿ ಶಿವರಾತ್ರಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಮನೆಯಲ್ಲೇ ಕುಟುಂಬದವರು ಮತ್ತು ಆಪ್ತರ ಜೊತೆ ಶಿವರಾತ್ರಿ ಆಚರಣೆ ಮಾಡಿದ ರಾಗಿಣಿ ಹಬ್ಬದ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Recommended Video
ಸುಂದರವಾದ ಉಡುಪು ಧರಿಸಿ ರಾಗಿಣಿ ಪೂಜೆ ಮಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಜೊತೆಗೆ ಎಲ್ಲರಿಗೂ ಹಬ್ಬದ ಶುಭಾಶಯ ತಿಳಿಸಿದ್ದಾರೆ. ರಾಗಿಣಿ ಪೂಜೆ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಡ್ರಗ್ಸ್ ಪ್ರಕರಣ ವಿಚಾರವಾಗಿ ಸುಮಾರು ನಾಲ್ಕು ತಿಂಗಳು ಜೈಲಿನಲ್ಲಿದ್ದ ರಾಗಿಣಿ ಹಲವು ಹಬ್ಬಗಳನ್ನು ಮಿಸ್ ಮಾಡಿಕೊಂಡಿದ್ದರು. ಜೈಲಿನಲ್ಲೇ ಹಬ್ಬ ಆಚರಿಸಿದ್ದ ರಾಗಿಣಿ ಇದೀಗ ಹೊರಬಂದ ಮೇಲೆ ಮೊದಲ ಬಾರಿಗೆ ಕುಟುಂಬದ ಜೊತೆ ಅದ್ದೂರಿಯಾಗಿ ಹಬ್ಬ ಆಚರಿಸಿ ಸಂಭ್ರಮಿಸುತ್ತಿದ್ದಾರೆ.

ಜೈಲಿನಿಂದ ಹೊರಬಂದ ಮೇಲೆ ಕುಟುಂಬದ ಜೊತೆ ಸಾಕಷ್ಟು ದೇವಸ್ಥಾನಗಳನ್ನು ಸುತ್ತಿರುವ ರಾಗಿಣಿ ಮನೆಯಲ್ಲೂ ವಿಶೇಷ ಪೂಜೆಗಳನ್ನು ಹಮ್ಮಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸಕ್ರೀಯರಾಗಿರುವ ನಟಿ ಇತ್ತೀಚಿಗೆ ತನ್ನದೆ ಆದ ಯೂಟ್ಯೂಬ್ ಚಾನೆಲ್ ಅನ್ನು ತೆರೆದಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ರಾಗಿಣಿ ಸದ್ಯ ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ನಿರ್ಮಾಪಕ ಕೃಷ್ಣ ಚೈತನ್ಯ ಅವರ ಕರ್ವ-3 ಸಿನಿಮಾದಲ್ಲಿ ರಾಗಿಣಿ ನಟಿಸುತ್ತಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ರಾಗಿಣಿ ಒಪ್ಪಿಕೊಂಡ ಮೊದಲ ಸಿನಿಮಾ ಇದಾಗಿದೆ.


Click it and Unblock the Notifications











