For Quick Alerts
  ALLOW NOTIFICATIONS  
  For Daily Alerts

  ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ ನಟಿ ರಾಗಿಣಿ: ಕೆಟ್ಟ ಕಾಮೆಂಟ್ ಮಾಡೋರಿಗೆ ಹೇಳಿದ್ದೇನು?

  |

  ನಟಿ ರಾಗಿಣಿ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ತುಂಬಾ ಕಷ್ಟದ ದಿನಗಳನ್ನು ಎದುರಿಸಿ ಬಂದಿರುವ ರಾಗಿಣಿ ಪಾಸಿಟಿವಿಟಿಯನ್ನು ಕಳೆದುಕೊಂಡಿಲ್ಲ. ಧೈರ್ಯವಾಗಿಯೇ, ಮೊದಲಿನಂತೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಈ ಸಮಯದಲ್ಲಿ ತನ್ನ ಕಷ್ಟದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ.

  ಅನ್ನದಾನ ಮಾಡಿ ಹರಕೆ ತೀರಿಸಿದ ನಟಿ ರಾಗಿಣಿ | Ragini Dwivedi | Filmibeat Kannada

  ಡ್ರಗ್ಸ್ ಪ್ರಕರಣ ಸಂಬಂಧ ಜೈಲು ಸೇರಿದ್ದ ನಟಿ ರಾಗಿಣಿ ಜಾಮೀನಿನ ಮೇಲೆ ಹೊರಬಂದು ಕೆಲವೇ ದಿನಗಳಾಗಿದೆ ಅಷ್ಟೆ. ಜೈಲಿನಿಂದ ಬಂದ ಬಳಿಕ ದೇವಸ್ಥಾನ, ಪೂಜೆ ಅಂತ ಬ್ಯುಸಿಯಾಗಿದ್ದ ರಾಗಿಣಿ ಸ್ವಲ್ಪ ಬಿಡುವು ಮಾಡಿಕೊಂಡು ಇನ್ಸ್ಟಾಗ್ರಾಮ್ ಲೈವ್ ಬಂದಿದ್ದಾರೆ. ಲೈವ್ ನಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಉತ್ತಮ ಮತ್ತು ಕೆಟ್ಟ ಕಾಮೆಂಟ್ ಗಳು ಬರುತ್ತಿವೆ ಎನ್ನುತ್ತಾ ಎಲ್ಲವನ್ನು ಪಾಸಿಟಿವ್ ಆಗಿಯೇ ತೆಗೆದುಕೊಂಡಿದ್ದಾರೆ.

  ತಾಳ್ಮೆಯಿಂದ ಕಾಯಿರಿ, ಪತ್ರಿಕಾಗೋಷ್ಠಿ ಮಾಡುತ್ತೇನೆ; ನಟಿ ರಾಗಿಣಿತಾಳ್ಮೆಯಿಂದ ಕಾಯಿರಿ, ಪತ್ರಿಕಾಗೋಷ್ಠಿ ಮಾಡುತ್ತೇನೆ; ನಟಿ ರಾಗಿಣಿ

  ಕೆಟ್ಟ ಕಾಮೆಂಟ್ ಗಳು ಬರುತ್ತಿವೆ

  ಕೆಟ್ಟ ಕಾಮೆಂಟ್ ಗಳು ಬರುತ್ತಿವೆ

  'ತುಂಬಾ ದಿನ ಆದ್ಮೇಲೆ ಮಾತಾಡುವ ಸಮಯ, ಶಕ್ತಿ ಬಂದಿದೆ. ಖುಷಿಯಾಗುತ್ತಿದೆ. ಎಲ್ಲರೂ ಹೇಳುತ್ತಾರೆ ಮಾತಾಡಿ ಎಂದು. ಆದರೆ ಕೆಲವು ಸಮಯ ಮೌನ ತುಂಬಾ ಮುಖ್ಯ. ಸೈಲೆಂಟ್ ಅಲ್ಲೇ ತುಂಬಾ ಉತ್ತರ ಸಿಗುತ್ತೆ. ನನ್ನ ಆರೋಗ್ಯದ ಕಡೆ ಹೆಚ್ಚು ಗಮನ ಕೊಡುತ್ತಿದ್ದೇನೆ. ನನ್ನ ಬಗ್ಗೆ ಸಾಕಷ್ಟು ಒಳ್ಳೆಯ ಕಾಮೆಂಟ್ ಗಳು ಬಂದಿವೆ. ಜೊತೆಗೆ ತುಂಬಾ ಕೆಟ್ಟ ಕಾಮೆಂಟ್ ಗಳನ್ನು ಮಾಡಿದ್ದಾರೆ. ಡ್ರಗ್ಸ್ ಬಗ್ಗೆ, ಸಿನಿಮಾ ಬಗ್ಗೆ ಕಾಮೆಂಟ್ ಮಾಡುತ್ತಿದ್ದೀರಿ' ಎಂದಿದ್ದಾರೆ.

  ಕೆಟ್ಟದಾಗಿ ಹೆಸರಿಟ್ಟು ಕರೆದರೆ ಏನು ಖುಷಿ ಸಿಗುತ್ತೆ?

  ಕೆಟ್ಟದಾಗಿ ಹೆಸರಿಟ್ಟು ಕರೆದರೆ ಏನು ಖುಷಿ ಸಿಗುತ್ತೆ?

  'ನಾನು ಯಾವಾಗಲು ಪಾಸಿಟಿವಿಟಿ ಸ್ಪ್ರೆಡ್ ಮಾಡುತ್ತಿರುತ್ತೇನೆ. ಬೇರೆಯವರನ್ನು ನೋಡಿ ನಗುವುದು, ಮಾತಾಡೋದು, ಜಡ್ಜ್ ಮಾಡುವುದು, ಏನೇನೋ ಮಾತನಾಡಿಕೊಳ್ಳುವುದು ಅದು ನಿಮಗೆ ಕ್ಷಣದ ಖುಷಿ ಅಷ್ಟೆ. ತುಂಬಾ ನೆಗೆಟಿವ್ ಆಗಿ ಮಾತನಾಡುವುದು, ಕೆಟ್ಟದಾಗಿ ಹೆಸರಿಡುವುದು, ಚೀಪ್ ಆಗಿ ಮಾತನಾಡುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಹೆಸರಿಟ್ಟರೆ, ಅವರ ಕುಟುಂಬದ ಬಗ್ಗೆ ಮಾತನಾಡಿದರೇ ನಿಮಗೆ ಏನು ಖುಷಿ ಸಿಗುತ್ತೊ ನನಗೆ ನಿಜಕ್ಕು ಅರ್ಥ ಆಗಲ್ಲ. ಅದರಿಂದನೂ ನೀವು ಖುಷಿ ಪಟ್ಟಿದ್ರೆ ಪರವಾಗಿಲ್ಲ. ಹಾಗಾದರೂ ನನ್ನಿಂದ ನಿಮಗೆ ಖುಷಿ ನೀಡಿದ್ದೀನಲ್ಲಾ ಎಂದು ನನಗೆ ಖುಷಿ ಆಗುತ್ತಿದೆ.' ಎಂದಿದ್ದಾರೆ.

  ಅಕ್ಕಿಪೇಟೆ ದರ್ಗಾ ಗೆ ನಟಿ ರಾಗಿಣಿ ದ್ವಿವೇದಿ ಭೇಟಿಅಕ್ಕಿಪೇಟೆ ದರ್ಗಾ ಗೆ ನಟಿ ರಾಗಿಣಿ ದ್ವಿವೇದಿ ಭೇಟಿ

  ನಾನು ಇಷ್ಟು ಪಾಸಿಟಿವ್ ಆಗಿರಲು ಕಾರಣ ನನ್ನ ತಂದೆ-ತಾಯಿ

  ನಾನು ಇಷ್ಟು ಪಾಸಿಟಿವ್ ಆಗಿರಲು ಕಾರಣ ನನ್ನ ತಂದೆ-ತಾಯಿ

  'ನಾನು ಮನುಷ್ಯನೆ, ನನಗೂ ನೋವಾಗುತ್ತೆ. ನಿಮ್ಮ ಜೊತೆ ಮಾತನಾಡಲು ನಾನು ಸಲೂನ್ ಗೆ ಹೋಗಿ ಹೇರ್ ಸ್ಟೈಲ್ ಮಾಡಿಸಿಕೊಂಡು ಬಂದಿದ್ದೇನೆ. ನನಗೆ ಇದು ಮನಸ್ಸಿರಲಿಲ್ಲ. ಆದರೆ ಅಮ್ಮ ಹೇಳಿದ್ದಕ್ಕೆ ಹೋಗಿದ್ದೆ. ಇಂಥ ಅಪ್ಪ-ಅಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. ನಾನು ಇಷ್ಟು ಪಾಸಿಟಿವ್ ಆಗಿರುವುದಕ್ಕೆ ನನ್ನ ತಂದೆ-ತಾಯಿ ಕಾರಣ.'

  ಕಣ್ಣೀರಿಟ್ಟ ರಾಗಿಣಿ

  ಕಣ್ಣೀರಿಟ್ಟ ರಾಗಿಣಿ

  ತುಂಬಾ ಕಷ್ಟ ಪಟ್ಟಿದ್ದೇನೆ.ಇನ್ನೂ ಚೇತರಿಸಿಕೊಳ್ಳುತ್ತಿದ್ದೇನೆ. ಇಷ್ಟು ಪಾಸಿಟಿವ್ ಆಗಿದ್ದರೂ ನನಗೆ ಒಮ್ಮೊಮ್ಮೆ ನನಗೂ ರಾತ್ರಿ ನಿದ್ದೆ ಬರಲ್ಲ. ನೀವು ನಿಮಗೋಸ್ಕರ ನಿತ್ಕೋಬೇಕು. ನೀವು ಸ್ಟ್ರಾಂಗ್ ಆಗಿರಬೇಕು ಅಷ್ಟೆ' ಎನ್ನುತ್ತಾ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಕಣ್ಣೀರಾಕಿದ್ದಾರೆ.

  English summary
  Actress Ragini Dwivedi gets emotional on instagram live.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X