twitter
    For Quick Alerts
    ALLOW NOTIFICATIONS  
    For Daily Alerts

    ಚಿತಾಗಾರ ಸಿಬ್ಬಂದಿ ನೆರವಿಗೆ ಧಾವಿಸಿದ ನಟಿ ರಾಗಿಣಿ

    |

    ಡ್ರಗ್ಸ್ ಪ್ರಕರಣ ಆರೋಪಿಯಾಗಿ ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಗೆ ಬಂದಿರುವ ನಟಿ ರಾಗಿಣಿ ಇದೀಗ ಮತ್ತೆ ಸಾಮಾಜಿಕ ಜೀವನಕ್ಕೆ ಮರಳಿದಂತಿದೆ.

    Recommended Video

    ಶವಾಗಾರದ ಸಿಬ್ಬಂದಿಗಳಿಗೆ ಆಹಾರ ದಾನ್ಯಗಳ ಕಿಟ್ ವಿತರಣೆ ಮಾಡಿದ ರಾಗಿಣಿ ದ್ವಿವೇದಿ | Filmibeat kannada

    ಜಾಮೀನಿನ ವಾಪಸ್ ಬಂದ ಮೇಲೆ ಸಾಮಾಜಿಕ ಜಾಲತಾಣದಲ್ಲಷ್ಟೆ ಸಕ್ರಿಯವಾಗಿದ್ದ ನಟಿ ರಾಗಿಣಿ ಈಗ ಹೊರಗೆ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ.

    ಕೊರೊನಾದಿಂದಾಗಿ ಪ್ರತಿದಿನ ರಾಜ್ಯದಲ್ಲಿ 200ಕ್ಕೂ ಹೆಚ್ಚು ಮಂದಿ ಸಾಯುತ್ತಿದ್ದಾರೆ. ಚಿತಾಗಾರಗಳ ಮುಂದೆ ಹೆಣಗಳ ಸಾಲು ನಿರ್ಮಾಣವಾಗಿದೆ. ಆರೋಗ್ಯ ಸಿಬ್ಬಂದಿ ಹಗಲು ಇರುಳೆನ್ನದೆ ಕಷ್ಟಪಡುತ್ತಿರುವಂತೆ ಚಿತಾಗಾರದ ಸಿಬ್ಬಂದಿಯೂ ಶ್ರಮಿಸುವಂತಾಗಿದೆ.

    Ragini Dwivedi Helps Crematorium Staff And Grave Diggers

    ಹಾಗಾಗಿ ರಾಗಿಣಿ ಅವರು ಚಿತಾಗಾರದ ಸಿಬ್ಬಂದಿಗೆ ಹಾಗೂ ಸ್ಮಶಾನದಲ್ಲಿ ಗುಂಡಿ ತೋಡುವ ಸ್ಮಶಾನ ನೋಡಿಕೊಳ್ಳುವ ವ್ಯಕ್ತಿಗಳಿಗೆ ನೆರವಾಗಿದ್ದಾರೆ. ಅಲ್ಲಿ ವಾಸಿಸುವವರಿಗೆ ಆಹಾರ ಸಾಮಗ್ರಿಗಳನ್ನು ರಾಗಿಣಿ ವಿಧಿಸಿದ್ದಾರೆ.

    ಸ್ಮಶಾನವೊಂದರಲ್ಲಿ ಕಿಟ್ ವಿತರಿಸಬೇಕಾದರೆ ಆ ಸ್ಮಶಾನದಲ್ಲಿಯೇ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ವಾಸವಿದ್ದ ಅಜ್ಜಿಯೊಬ್ಬರೊಂದಿಗೆ ಚರ್ಚೆ ಮಾಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ರಾಗಿಣಿ.

    'ಅವರ ಕತೆ ಕೇಳಿ ನನಗೆ ಆಶ್ಚರ್ಯವಾಯಿತು. ನಾಲ್ಕು ದಶಕಗಳಿಗೂ ಹೆಚ್ಚು ಸಮಯದಿಂದ ಆ ಮಹಿಳೆ ಸ್ಮಶಾನದಲ್ಲಿಯೇ ಇದ್ದಾರೆ. ಹೊರಗೆ ಹೋಗೇ ಇಲ್ಲ. ಹೊರಗಿನ ಪ್ರಪಂಚದ ಅರಿವು ಸಹ ಅವರಿಗೆ ಇಲ್ಲ. ಅವರ ಮಗಳು ಒಮ್ಮೆಯೂ ಪುಸ್ತಕ ಮುಟ್ಟಿಲ್ಲ ಅಮ್ಮ ಮಾಡುವ ಕಾರ್ಯವನ್ನೇ ಆಕೆಯೂ ಮಾಡುತ್ತಿದ್ದಾಳೆ' ಎಂದಿದ್ದಾರೆ ರಾಗಿಣಿ.

    'ಕೋವಿಡ್‌ ಪೀಡಿತರನ್ನು ಸುಡುತ್ತಿದ್ದ ಸ್ಥಳಕ್ಕೆ ನಾವು ಹೋಗಲಿಲ್ಲ. ಅಲ್ಲಿ ವೈರಸ್ ಹರಡುವ ಸಾಧ್ಯತೆ ಹೆಚ್ಚಿಗಿದ್ದಿದ್ದರಿಂದ ನಾವು ಆ ಕಡೆಗೆ ಹೋಗಲಿಲ್ಲ. ಆದರೆ ಅಲ್ಲಿ ಸಾಲಾಗಿ ನಿಂತಿದ್ದ ಆಂಬುಲೆನ್ಸ್‌ಗಳ ಸಾಲುಗಳನ್ನು ನೋಡಿ ನಮಗೆ ಆತಂಕವಾಯಿತು' ಎಂದಿದ್ದಾರೆ ನಟಿ ರಾಗಿಣಿ.

    ರಾಗಿಣಿ ದ್ವಿವೇದಿ ಕಳೆದ ವರ್ಷವೂ ಕೊರೊನಾ ಸಂಕಷ್ಟದ ಸಮಯದಲ್ಲಿ ಬಹಳ ಸಕ್ರಿಯವಾಗಿ ಸಹಾಯ ಮಾಡಿದ್ದರು. ಅವಶ್ಯಕತೆ ಇರುವವರಿಗೆ ಉಚಿತ ಆಹಾರ ವಿತರಣೆ, ದಿನಸಿ ವಿತರಣೆ, ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ವಿತರಣೆ ಮಾಡಿದ್ದರು ರಾಗಿಣಿ. ಆದರೆ ಅದೇ ಸಮಯದಲ್ಲಿ ಮಾದಕ ವಸ್ತು ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದರು.

    English summary
    Actress Ragini Dwivedi help crematorium staff and grave diggers in Bengaluru. She gave grocery kit.
    Wednesday, May 5, 2021, 19:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X