ಮೆಹಂದಿ ಹಾಕಿ ಮದುವೆ ಮನೆಯಲ್ಲಿ ರಾಗಿಣಿ ಸಂಭ್ರಮ
ಮದುವೆ ಎನ್ನುವುದು ಮನೆ ಮಂದಿ ಸೇರಲು ಅವಕಾಶ ಮಾಡಿಕೊಡುವ ಸಂಭ್ರಮದ ಸಂದರ್ಭ. ಇಂತಹ ಕ್ಷಣದಲ್ಲಿ ನಟಿ ರಾಗಿಣಿ ದ್ವಿವೇದಿ ಅವರ ಇಡೀ ಕುಟುಂಬ ಇದೆ.
ಸಿನಿಮಾಗಳ ಕೆಲಸಗಳಿಂದ ಬಿಡುವು ಪಡೆದುಕೊಂಡಿರುವ ರಾಗಿಣಿ ಸದ್ಯ ಸಹೋದರನ ಮದುವೆ ಖುಷಿಯಲ್ಲಿ ಇದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮದುವೆಯ ಸಂಭ್ರಮದ ಕ್ಷಣಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.
ಮದುವೆ ಎಂದ ಮೇಲೆ ಮೆಹಂದಿ ಇರಲೇ ಬೇಕು. ಸಹೋದರನ ಮದುವೆಯಲ್ಲಿ ರಾಗಿಣಿ ಮೆಹಂದಿ ಜೋರಾಗಿದೆ. ಕೈ ತುಂಬ ಮೆಹಂದಿ ಹಾಕಿಸಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಮೆಹಂದಿ ಚಿತ್ತಾರ ಅವರ ಅಂದವನ್ನು ಹೆಚ್ಚು ಮಾಡಿದೆ.

ಮದುವೆ ಸಂಪ್ರದಾಯ ಎಂದರೆ, ರಾಗಿಣಿಗೆ ತುಂಬ ಇಷ್ಟ. ಈ ರೀತಿ ಮೆಹಂದಿ ಶಾಸ್ತ್ರದ ಸಂಪ್ರದಾಯಗಳು ನಮಗೆ ಖುಷಿ ಕೊಡುವ ರೀತಿ ಇರುತ್ತದೆ ಎಂದು ರಾಗಿಣಿ ಬರೆದುಕೊಂಡಿದ್ದಾರೆ.
ರಾಗಿಣಿ ದ್ವಿವೇದಿ 10 ವರ್ಷಗಳನ್ನು ಚಿತ್ರರಂಗದಲ್ಲಿ ಕಳೆದಿದ್ದಾರೆ. ಕಳೆದ ವರ್ಷ ಅವರ 'ಅಧ್ಯಕ್ಷ ಇನ್ ಅಮೇರಿಕಾ' ಸಿನಿಮಾ ಬಿಡುಗಡೆ ಆಗಿತ್ತು. ಈ ಸಿನಿಮಾದ ನಂತರ ಅವರು ಮತ್ತೊಂದು ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ.


Click it and Unblock the Notifications











