ರಾಗಿಣಿ ಹುಟ್ಟುಹಬ್ಬಕ್ಕೆ ವಿದೇಶದಿಂದ ಬಂತು ಉಡುಗೊರೆ
ಸ್ಯಾಂಡಲ್ ವುಡ್ ನ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ನಾಳೆ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಕ್ಲಾಸ್, ಮಾಸ್ ಎರಡು ರೀತಿಯ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ರಾಗಿಣಿ 28 ವರ್ಷಕ್ಕೆ ಕಾಲಿಡುತ್ತಿದ್ದಾರೆ.
ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವ ಮುನ್ನವೇ ವಿದೇಶದಿಂದ ವಿಶೇಷವಾದ ಉಡುಗೊರೆ ಬಂದಿದೆ. ಈ ಬಗ್ಗೆ ನಟಿ ರಾಗಿಣಿ ತಮ್ಮ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಖುಷಿಯನ್ನು ಹಂಚಿಕೊಂಡಿದ್ದಾರೆ.

ಹೌದು ರಾಗಿಣಿ ಅವರಿಗೆ ಬರ್ತಡೇಗೂ ಮುನ್ನವೇ ಸ್ಪೆಷಲ್ ಆಗಿರುವ ಗಿಫ್ಟ್ ಕಳಿಸಿರುವುದು ಅವರ ಸಹೋದರ ರುದ್ರಾಕ್ಷ್ ದ್ವಿವೇದಿ. ವಿದೇಶದಲ್ಲಿರುವ ತಮ್ಮ ಅಕ್ಕನಿಗಾಗಿ ಐದು ಅಡಿ ಎತ್ತರವಿರುವ ಟೆಡ್ಡಿ ಬಿಯರ್ ಗೊಂಬೆ ಕಳುಹಿಸಿದ್ದಾರೆ.

ಸಹೋದರ ನೀಡಿರುವ ಮೊದಲ ಉಡುಗೊರೆಯಿಂದ ಖುಷಿಯಾಗಿರುವ ರಾಗಿಣಿ ಈ ವರ್ಷ ಮತ್ತಷ್ಟು ವಿಭಿನ್ನವಾಗಿರುವ ಸಿನಿಮಾಗಳ ಮೂಲಕ ಅಭಿಮಾನಿಗಳ ಮನಸ್ಸು ಗೆಲ್ಲಬೇಕು ಎಂದು ನಿರ್ಧರಿಸಿದ್ದಾರೆ.
English summary
Kannada actor Ragini Dwivedi is celebrating his birthday tomorrow, Ragini's brother has been given a special gift before the birthday
ragini dwivedi sandalwood kannada movies birthday ರಾಗಿಣಿ ದ್ವಿವೇದಿ ಹುಟ್ಟುಹಬ್ಬ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ


Click it and Unblock the Notifications