ನಟಿ ರಾಗಿಣಿಗೆ ಜಾಮೀನು ಸಿಕ್ಕರೂ ಜೈಲಿನಿಂದ ಹೊರಬರಲು ಪರದಾಟ

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಸಂಬಂಧ ಜೈಲು ಸೇರಿದ್ದ ನಟಿ ರಾಗಿಣಿಗೆ ಕೊನೆಗೂ ಜಾಮೀನು ಮಂಜುರಾಗಿದೆ. 140ಕ್ಕೂ ಹೆಚ್ಚು ದಿನಗಳು ಜೈಲು ವಾಸ ಅನುಭವಿಸಿದ್ದ ರಾಗಿಣಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ದ ಜಾಮೀನು ನೀಡಿದೆ.

ಜಾಮೀನು ಸಿಕ್ಕರು ರಾಗಿಣಿಗೆ ಜೈನಿಂದ ಬಿಡುಗಡೆ ಭಾಗ್ಯಸಿಕ್ಕಿಲ್ಲ. ಜಾಮೀನು ಸಿಕ್ಕಿ ಇಂದಿಗೆ ಮೂರು ದಿನಗಳಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರತಿ ಹಿಡಿದು ವಕೀಲರು ದೆಹಲಿಯಿಂದ ನಿನ್ನ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ಸುಪ್ರೀಂ ಕೋರ್ಟ್ ಆದೇಶ ಪ್ರತಿಯನ್ನು ಎನ್ ಡಿ ಪಿ ಎಸ್ ಕೋರ್ಟ್ ನಲ್ಲಿ ಹಾಜರು ಪಡಿಸಿದ್ದಾರೆ.

ಜಾಮೀನು ಮಂಜೂರು ಮಾಡಲು ಕೋರ್ಟ್ ಷರತ್ತುಗಳನ್ನು ವಿಧಿಸಿದೆ. 3 ಲಕ್ಷ ಮೌಲ್ಯದ ಬಾಂಡ್, ಇಬ್ಬರು ಶ್ಯೂರಿಟಿ ಹಾಗೂ 15 ದಿನಕೊಮ್ಮೆ ತನಿಖಾಧಿಕಾರಿ ಮುಂದೆ ಹಾಜರಾಗಿ ಸಹಿ ಹಾಕಬೇಕು ಸೇರಿದಂತೆ ಅನೇಕ ಷರತ್ತು ವಿಧಿಸಿದೆ. ಷರತ್ತುಗಳನ್ನು ಪೂರೈಸಲು ಸಮಯಾವಕಾಶ ಕಡಿಮೆ ಇರುವ ಹಿನ್ನಲೆ ಇವತ್ತು ಸಹ ರಾಗಿಣಿಗೆ ಜೈಲಿನಿಂದ ಹೊರಬರಲು ಸಾಧ್ಯವಾಗಿಲ್ಲ. ನಾಳೆ ಭಾನುವಾರ ಆಗಿದ್ದರಿಂದ ಇನ್ನು ಒಂದು ಜೈಲಿನಲ್ಲೇ ಇರಬೇಕಾಗಿದೆ.

Ragini Dwivedi is not released from jail even after getting bail

ಸೋಮವಾರ ಷರತ್ತು ಪೂರೈಸಿ ಬಿಡುಗಡೆ ಆದೇಶ ಪಡೆಯಲು ರಾಗಿಣಿ ಪರ ವಕೀಲರ ನಿರ್ಧಾರಿದ್ದಾರೆ. ಸೋಮವಾರ ರಾಗಿಣಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಗುವ ಸಾಧ್ಯತೆ ಇದೆ.

ಡ್ರಗ್ ಪೆಡ್ಲರ್ ಗಳ ಜೊತೆ ನಂಟು ಹೊಂದಿದ್ದಾರೆ ಎಂಬ ಅನುಮಾನದ ಹಿನ್ನೆಲೆ ಸೆಪ್ಟೆಂಬರ್ 4 ರಂದು ಸಿಸಿಬಿ ಪೊಲೀಸರು ನಟಿ ರಾಗಿಣಿ ಅವರ ನಿವಾಸದ ಮೇಲೆ ದಿಢೀರ್ ದಾಳಿ ನಡೆಸಿದ್ದರು. ಈ ವೇಳೆ ಡ್ರಗ್ಸ್ ಸೇವನೆ ಹಾಗೂ ಪೆಡ್ಲರ್ ಗಳ ಜೊತೆ ಸಂಪರ್ಕದಲ್ಲಿರುವುದರ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆ ನಟಿಯರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡರು. ಅಧಿಕೃತವಾಗಿ ರಾಗಿಣಿಯನ್ನು ಬಂಧಿಸಿದ್ದರು.

Recommended Video

ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಇನ್ನಿಲ್ಲಾ | Filmibeat Kannada

More from Filmibeat

English summary
Actress Ragini Dwivedi is not released from jail even after getting bail.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X