»   » ಮಲಯಾಳಂ ಚಿತ್ರರಂಗಕ್ಕೆ ಜಿಗಿದ ಬಂಗಾರಿ ರಾಗಿಣಿ

ಮಲಯಾಳಂ ಚಿತ್ರರಂಗಕ್ಕೆ ಜಿಗಿದ ಬಂಗಾರಿ ರಾಗಿಣಿ

Posted By:
Subscribe to Filmibeat Kannada

ತುಪ್ಪ ಬೇಕ ತುಪ್ಪ ಎಂದು ಸೊಂಟ ಕುಣಿಸಿ ಪಡ್ಡೆಗಳ ಪಾಲಿಗೆ ಕನಸಿನ ರಾಣಿಯಾಗಿ, ಈಗ 'ರಾಗಿಣಿ ಐಪಿಎಸ್' ಮೂಲಕ ಆಕ್ಷನ್ ಪ್ರಿಯರ ಹೃದಯಕ್ಕೆ ಲಗ್ಗೆ ಹಾಕುತ್ತಿರುವ ರಾಗಿಣಿ ದ್ವಿವೇದಿ ಸದ್ದಿಲ್ಲದಂತೆ ಮಲಯಾಳಂ ಚಿತ್ರರಂಗಕ್ಕೆ ಜಿಗಿದಿದ್ದಾರೆ.

ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮಮ್ಮುಟ್ಟಿ ಜೊತೆ ಅಭಿನಯಿಸಲಿದ್ದಾರೆ ರಾಗಿಣಿ. ಈ ಚಿತ್ರಕ್ಕೆ 'ಫೇಸ್ ಟು ಫೇಸ್' ಎಂದು ಹೆಸರಿಡಲಾಗಿದೆ. ಚಿತ್ರದಲ್ಲಿ ಮಮ್ಮುಟ್ಟಿ ಪತ್ನಿ ಪಾತ್ರವನ್ನು ರಾಗಿಣಿ ಪೋಷಿಸಲಿದ್ದಾರೆ. ರಾಗಿಣಿ ಅಭಿನಯಿಸುತ್ತಿರುವ ಎರಡನೇ ಮಲಯಾಳಂ ಚಿತ್ರವಿದು.

ಈ ಹಿಂದೆ ಮೇಜರ್ ರವಿ ನಿರ್ದೇಶನದ ಮೋಹನ್ ಲಾಲ್, ಅಮಿತಾಬ್ ಬಚ್ಚನ್ ಮುಖ್ಯಭೂಮಿಕೆಯಲ್ಲಿರುವ 'ಕಾಂದಹಾರ್' (2010) ಚಿತ್ರದಲ್ಲಿ ರಾಗಿಣಿ ಕಾಣಿಸಿಕೊಂಡಿದ್ದರು. ಈಗ ಪೂರ್ಣ ಪ್ರಮಾಣದ ನಾಯಕಿಯಾಗಿ ಮಮ್ಮುಟ್ಟಿ ಚಿತ್ರದಲ್ಲಿ ಅಭಿನಯಿಸುವ ಚಾನ್ಸ್ ಗಿಟ್ಟಿಸಿದ್ದಾರೆ.

'ಫೇಸ್ ಟು ಫೇಸ್' ಚಿತ್ರಕ್ಕೆ ವಿಎಂ ವಿಷ್ಣು ಆಕ್ಷನ್ ಕಟ್ ಹೇಳುತ್ತಿದ್ದು ಆಗಸ್ಟ್ 23ರಿಂದ ಚಿತ್ರೀಕರಣ ಆರಂಭವಾಗಲಿದೆ. "ಚಿತ್ರದಲ್ಲಿ ತಮ್ಮದು ಮಮ್ಮುಟ್ಟಿ ಅವರ ಅರ್ಧಾಂಗಿ ಪಾತ್ರ. ಇಂಟರೆಸ್ಟಿಂಗ್ ಕ್ಯಾರೆಕ್ಟರ್" ಎಂದಿದ್ದಾರೆ ರಾಗಿಣಿ. ಕೊಚ್ಚಿ ಹಾಗೂ ವೈಜಾಗ್ ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

"ಮಮ್ಮುಟ್ಟಿ ಅವರಂತಹ ಹಿರಿಯ ಕಲಾವಿದರ ಜೊತೆ ಅಭಿನಯಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಅವರ ಚಿತ್ರಗಳು ಇತ್ತೀಚೆಗೆ ಬಾಕ್ಸಾಫೀಸಲ್ಲಿ ಅಷ್ಟಾಗಿ ಸದ್ದು ಮಾಡದಿದ್ದರೂ ತಮಗಂತೂ ಅವರ ಜೊತೆ ಅಭಿನಯಿಸುತ್ತಿರುವುದಕ್ಕೆ ಸಖತ್ ಖುಷಿಯಾಗಿದೆ" ಎನ್ನುತ್ತಾರೆ ರಾಗಿಣಿ.

ಇನ್ನು ಶಿವರಾಜ್ ಕುಮಾರ್ ಜೊತೆ ರಾಗಿಣಿ ಅಭಿನಯದ 'ಶಿವ' ಚಿತ್ರ ಇದೇ ಆಗಸ್ಟ್ 24ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆಗಳು ಇವೆ. ಗ್ಲಾಮರ್ ಆಗಿ ಕಾಣಿಸಿಕೊಂಡಿರುವ ರಾಗಿಣಿ ಪಾತ್ರವೂ ತೀವ್ರ ಕುತೂಹಲ ಕೆರಳಿಸಿದೆ. (ಏಜೆನ್ಸೀಸ್)

English summary
Kannada actress Ragini Dwivedi signed up for VM Vinu’s film with superstar Mammootty, titled Face2face. She will play a very interesting character and we start shooting on August 23.
Please Wait while comments are loading...