ರಾಗಿಣಿ ಹಾಟ್ ಯೋಗ: ತುಪ್ಪದ ಹುಡುಗಿ ಮೈಮಾಟಕ್ಕೆ ಅಭಿಮಾನಿಗಳು ಫಿದಾ

By ಫಿಲ್ಮಿಬೀಟ್ ಡೆಸ್ಕ್

ಇತ್ತೀಚೆಗೆ ತಮ್ಮ 33ನೇ ವರ್ಷದ ಹುಟ್ಟುಹಬ್ಬವನ್ನು ನಟಿ ರಾಗಿಣಿ ದ್ವಿವೇದಿ ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದರು. ನೂರಾರು ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಆರೋಗ್ಯ ಶಿಬಿರ ಆಯೋಜಿಸಿ ಕನ್ನಡ ಚಿತ್ರರಂಗದ ಅನೇಕ ಹಿರಿಯ ಪೋಷಕ ಕಲಾವಿದರಿಗೆ ನೆರವಾಗಿದ್ದರು. ಒಂದಷ್ಟು ಸಿನಿಮಾಗಳು ಕೂಡ ತುಪ್ಪದ ಹುಡುಗಿ ಕೈಯಲ್ಲಿವೆ. ಸದ್ಯ ಆಕೆ ಯೋಗ ವಿಡಿಯೋ ಸದ್ದು ಮಾಡ್ತಿದೆ.

ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟಿ ರಾಗಿಣಿ ಆ ನಂತರ ಹೊರ ಬಂದಿದ್ದರು. ನಂತರ ನಿಧಾನವಾಗಿ ಮತ್ತೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆಕೆಯ ಹುಟ್ಟುಹಬ್ಬಕ್ಕೆ 'ಬಿಂಗೊ' ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಶಂಕರ್ ಕೋನಮಾನಹಳ್ಳಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು ಪವರ್‌ಫುಲ್ ರೋಲ್‌ನಲ್ಲಿ ರಾಗಿಣಿ ಮಿಂಚಿದ್ದಾರೆ.

Ragini Dwivedi new yoga video goes viral, she faces backlash from netizens

ಹಾಟ್ ಯೋಗ ವಿಡಿಯೋ

ಸದ್ಯ ನಟಿ ರಾಗಿಣಿ ಯೋಗ ಮಾಡುತ್ತಿರುವ ವಿಡಿಯೊವೊಂದನ್ನು ಶೇರ್ ಮಾಡಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಲುಕ್‌ನಲ್ಲಿ ತುಪ್ಪದ ಹುಡುಗಿ ಕಾಣಿಸಿಕೊಂಡಿದ್ದು ವಿಡಿಯೋ ವೈರಲ್ ಆಗ್ತಿದೆ. "ಇದು ಜರ್ನಿ. ಫ್ಲೋ ಇರಲಿ, ಪ್ರತಿದಿನ ಪ್ರತಿ ಕ್ಷಣವೂ ಮುಂದುವರೆಯಲು ಶ್ರಮಿಸಿ.
ನಿಧಾನ ಮತ್ತು ಸ್ಥಿರತೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಆದರೆ ಓಟದಲ್ಲಿ ಗೆಲ್ಲುತ್ತೀರಾ" ಎಂದು ಬರೆದುಕೊಂಡಿದ್ದಾರೆ.

ನೆಟ್ಟಿಗರ ಕ್ಲಾಸ್

ರಾಗಿಣಿ ಕ್ರಾಪ್ ಟಾಪ್, ಶರ್ಟ್‌ ಧರಿಸಿ ಬಹಳ ಹಾಟ್ ಲುಕ್‌ನಲ್ಲಿ ಯೋಗ ಮಾಡಿದ್ದಾರೆ. ಯೋಗ ಸರಿ ಈ ಮೈಮಾಟ ಪ್ರದರ್ಶನ ಯಾಕೆ ಎಂದು ಬಹುತೇಕರು ಕಾಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ಮಾತ್ರ ಎಂದಿನಂತೆ ಲೈಕ್ಸ್ ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಧ್ಯಾನ, ಪ್ರಾಣಾಯಾಮ, ಅರ್ಧ ಚಂದ್ರಾಸನ ಸೇರಿದಂತೆ ಹಲವು ಆಸನಗಳನ್ನು ರಾಗಿಣಿ ಅಭ್ಯಾಸ ಮಾಡಿದ್ದಾರೆ.

Ragini Dwivedi new yoga video goes viral, she faces backlash from netizens

ಜೈಲಿನ ದಿನಗಳ ಬಗ್ಗೆ ಪುಸ್ತಕ

ಮಾಡದ ತಪ್ಪಿಗೆ ತಮ್ಮನ್ನು ಜೈಲಿಗೆ ಹಾಕಲಾಯಿತು ಎಂದು ರಾಗಿಣಿ ಹೇಳಿಕೊಂಡಿದ್ದರು. 90 ದಿನಗಳ ಕಾಲ ಜೈಲಿನಲ್ಲಿ ಕಳೆದ ಪ್ರತಿಕ್ಷಣವನ್ನು ಕೂಡ ರಾಗಿಣಿ ಬರೆದಿಟ್ಟುಕೊಂಡಿದ್ದಾರಂತೆ. ಅದನ್ನೆಲ್ಲಾ ಪುಸ್ತಕದ ರೀತಿ ಹೊರ ತರುವ ಬಗ್ಗೆ ಮನಸ್ಸು ಮಾಡಿದ್ದಾರೆ. ಅದಕ್ಕೆ ಪುಸ್ತಕದ ರೂಪ ನೀಡಬೇಕಿದೆ. ಟೈಟಲ್ ಹುಡುಕಬೇಕಿದೆ. ಯಾವಾ ಪುಸ್ತಕ ರಿಲೀಸ್ ಮಾಡಬೇಕು ಎನ್ನುವುದರ ಬಗ್ಗೆ ಕೂಡ ಆಕೆ ಚಿಂತಿಸುತ್ತಿದ್ದಾರಂತೆ.

ಹಲವು ಸಿನಿಮಾಗಳಲ್ಲಿ ಬ್ಯುಸಿ

ರಾಗಿಣಿ ಬರೀ ಕನ್ನಡ ಮಾತ್ರವಲ್ಲ ಇತ್ತೀಚೆಗೆ ಒಂದು ಹಿಂದಿ ಸಿನಿಮಾದಲ್ಲೂ ನಟಿಸಿ ಬಂದಿದ್ದಾರೆ. ಲಂಡನ್‌ನಲ್ಲಿ ಆ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿ ಬಂದಿದ್ದರು. ಇನ್ನು ಮಲಯಾಳಂನಲ್ಲಿ ಒಂದು, ತಮಿಳಿನಲ್ಲಿ 3 ಹಾಗೂ ತೆಲುಗಿನಲ್ಲಿ ಒಂದು ಸಾಂಗ್ ಮಾಡಿದ್ದಾರೆ. ಸದ್ಯ ಕನ್ನಡದಲ್ಲಿ 'ಬಿಂಗೋ' ಜೊತೆಗೆ 'IAS vs IPS' ಎನ್ನುವ ಮತ್ತೊಂದು ಕನ್ನಡ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಸೆಬಾಸ್ಟಿಯನ್ ಡೇವಿಡ್ ನಿರ್ದೇಶನದ ಈ ಚಿತ್ರವನ್ನು ಕೆ. ಮಂಜು ನಿರ್ಮಾಣ ಮಾಡುತ್ತಿದ್ದಾರೆ.

More from Filmibeat

English summary
Ragini Dwivedi new yoga video goes viral, she faces backlash from netizens. Ragini shows off her toned body in a black crop top and yoga shorts. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X